ದಾಳಿಂಬೆ ಹಣ್ಣು ಪೌಷ್ಟಿಕಾಂಶಗಳ ಆಗರ. ವಿಟಮಿನ್ ಸಿ, ಮೆಗ್ನೀಸಿಯಮ್, ಫಾಸ್ಪರಸ್, ಪೊಟ್ಯಾಸಿಯಮ್ ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ಸೇಬಿನಷ್ಟೇ ಉಪಯುಕ್ತ. ಹೃದಯದ ಆರೋಗ್ಯದಿಂದ ಹಿಡಿದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವವರೆಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ರಕ್ತದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ. ದಿನಾ ಒಂದು ದಾಳಿಂಬೆ ತಿನ್ನಬೇಕು ಅಂತ ವೈದ್ಯರು ಹೇಳೋದಕ್ಕೆ ಇದೇ ಕಾರಣ. ಆದ್ರೆ ಕೆಲವು ಆರೋಗ್ಯ ಸಮಸ್ಯೆ ಇರೋರಿಗೆ ದಾಳಿಂಬೆ ಅಪಾಯಕಾರಿ. ವೈದ್ಯರ ಸಲಹೆ ಇಲ್ಲದೆ ದಾಳಿಂಬೆ ಸೇವಿಸಬಾರದು. ಯಾರು ಸೇವಿಸಬಾರದು? ಕಾರಣಗಳೇನು ಅನ್ನೋದನ್ನ ಈ ಪೋಸ್ಟ್ ನಲ್ಲಿ ತಿಳಿದುಕೊಳ್ಳೋಣ.