ಬ್ರಾ ಸ್ಟ್ರಾಪ್ ಸಿಂಡ್ರೋಮ್ ಎಂದರೇನು? ಮಹಿಳೆಯರನ್ನು ಕಾಡುವ ಸಮಸ್ಯೆ

First Published | Aug 31, 2023, 4:15 PM IST

ನೀವು ತಪ್ಪು ಆಕಾರ ಮತ್ತು ಗಾತ್ರದ ಬ್ರಾ ಧರಿಸಿದರೆ, ನಿಮಗೆ ಬ್ರಾ ಸ್ಟ್ರಾಪ್ ಸಿಂಡ್ರೋಮ್ ಕಾಡಬಹುದು. ಈ ಸಮಸ್ಯೆ ಬಂದರೆ ಅದು ಯಾವುದರಿಂದ ಬರುತ್ತೆ ಅನ್ನೋದೆ ಗೊತ್ತಾಗಲ್ಲ. ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ತಿಳಿದುಕೊಳ್ಳೋಣ.
 

ಭುಜಗಳು, ಕುತ್ತಿಗೆ ಮತ್ತು ಬೆನ್ನಿನಲ್ಲಿ ಬಿಗಿತ ಅನುಭವಿಸುತ್ತೀರಾ? ಕೆಲಸ ಮಾಡಲು ನಿಮಗೆ ಅನಾನುಕೂಲವಾಗುತ್ತಿದೆಯೇ? ನಿಮಗೆ ಈ ರೀತಿಯ ಏನಾದರೂ ಸಮಸ್ಯೆ ಆಗುತ್ತಿದ್ದರೆ, ನೀವು ಮೊದಲು ನಿಮ್ಮ ಬ್ರಾ ಬಗ್ಗೆ ಗಮನ ಹರಿಸಬೇಕು. ಈಗ ನೀವು ಬೆನ್ನು ನೋವು ಮತ್ತು ಬ್ರಾ ನಡುವಿನ ಸಂಬಂಧವೇನು ಎಂದು ಯೋಚಿಸುತ್ತಿರಬಹುದು,  ಇದು ಬ್ರಾ ಸ್ಟ್ರಾಪ್ ಸಿಂಡ್ರೋಮ್ (bra strap sundrome) ಆಗಿದೆ. ಈ ಬಗ್ಗೆ ತಜ್ಞರಿಂದ ಸಂಪೂರ್ಣ ಮಾಹಿತಿ ತಿಳಿಯೋಣ.

ಬ್ರಾ ಸ್ಟ್ರಾಪ್ ಸಿಂಡ್ರೋಮ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು 
ಅನೇಕ ಬಾರಿ ಮಹಿಳೆಯರು ಪರಿಪೂರ್ಣ ಆಕಾರ ಮತ್ತು ಫಿಟ್ ಗಾಗಿ ಬಿಗಿಯಾದ ಬ್ರಾ ಧರಿಸುತ್ತಾರೆ, ಇದರಿಂದಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ, ಆದರೆ ಮಹಿಳೆಯರಿಗೆ ಅದರ ಬಗ್ಗೆ ತಿಳಿದಿಲ್ಲ. 

Latest Videos


ಬ್ರಾದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳೋದು  ಸ್ವಲ್ಪ ವಿಚಿತ್ರವಾಗಿ ತೋರುತ್ತದೆ, ಆದರೆ ಬಿಗಿಯಾದ ಮತ್ತು ತಪ್ಪು ಗಾತ್ರದ ಬ್ರಾ ಧರಿಸುವುದರಿಂದ ಭುಜ, ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು (back pain) ಉಂಟಾಗುತ್ತದೆ ಎಂಬುದು ನಿಜ. ಈ ಸ್ಥಿತಿಯನ್ನು ಬ್ರಾ ಸ್ಟ್ರಾಪ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಕೋಸ್ಟೋಕ್ಲಾವಿಕುಲರ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. 

ತಪ್ಪು ಬ್ರಾ ಧರಿಸುವುದರಿಂದ (wrong size bra) ಬೆನ್ನಿನ ಮೇಲೆ ಕಲೆಗಳು ಮತ್ತು ಕೆಂಪು ಗುರುತುಗಳು ಉಂಟಾಗುವಂತೆ, ತಪ್ಪು ಬ್ರಾ ಧರಿಸುವುದರಿಂದ ಭುಜಗಳು ಮತ್ತು ಕುತ್ತಿಗೆಯಲ್ಲಿ ನೋವು ಉಂಟಾಗುತ್ತದೆ. ಸ್ತನಗಳು ಭಾರವಾಗಿರುವ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ ಮತ್ತು ಅವರು ತೆಳುವಾದ ಸ್ಟ್ರಾಪ್ ಇರುವ ಬಿಗಿಯಾದ ಬ್ರಾ ಧರಿಸುತ್ತಾರೆ, ಆದ್ದರಿಂದ ಅವರ ಸ್ತನದ ಎಲ್ಲಾ ತೂಕ ಬ್ರಾ ಮೇಲೆ ಬೀಳುತ್ತದೆ. ಈ ಕಾರಣದಿಂದ, ಬ್ರಾ ಸ್ಟ್ರಾಪ್ ಭುಜದಿಂದ ಎಳೆಯಲು ಪ್ರಾರಂಭಿಸುತ್ತದೆ. ಇದು ಒಂದು ಭುಜದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ನಿಮ್ಮ ಆಂತರಿಕ ಅಂಗಾಂಶಗಳಿಗೆ ಹಾನಿಯಾಗಬಹುದು.

ಬ್ರಾ ಸ್ಟ್ರಾಪ್ ಸಿಂಡ್ರೋಮ್ ನಿಂದ ಉಂಟಾಗುವ ಸಮಸ್ಯೆಗಳು
ಕುತ್ತಿಗೆ ಮತ್ತು ಭುಜಗಳಲ್ಲಿ ತೀವ್ರ ನೋವನ್ನು ಅನುಭವಿಸುವುದು.
ಪೀಡಿತ ಪ್ರದೇಶದಲ್ಲಿ ಬಿಗಿತ ಮತ್ತು ಆಯಾಸ.
ನರಕ್ಕೆ ಹಾನಿಯಾಗಬಹುದು.
ಸ್ನಾಯುಗಳು ದುರ್ಬಲವಾಗಬಹುದು.
ಭಾರವಾದ ಸರಕುಗಳನ್ನು ಎತ್ತುವಲ್ಲಿ ತೊಂದರೆ.
ದೈಹಿಕ ಚಟುವಟಿಕೆ (physical activity) ಮಾಡಿದ ನಂತರ ಹೆಚ್ಚಿದ ನೋವು.
ಭುಜಗಳಲ್ಲಿ ಜುಮುಗುಡುವಿಕೆಯ ಅನುಭವ.

ಬ್ರಾ ಸ್ಟ್ರಾಪ್ ಸಿಂಡ್ರೋಮ್ ತಡೆಗಟ್ಟುವುದು ಹೇಗೆ? 
ಕೆಲವು ದಿನಗಳವರೆಗೆ ಬ್ರಾವನ್ನು ಸಾಧ್ಯವಾದಷ್ಟು ಲೂಸ್ ಆಗಿ ಧರಿಸಿ.
ಸ್ಟ್ರಾಪ್ ಲೆಸ್ ಮತ್ತು ನಿಮ್ಮ ಗಾತ್ರಕ್ಕೆ ಸರಿಯಾದ ಬ್ರಾ ಆಯ್ಕೆ ಮಾಡಿ
ನೋವನ್ನು ನಿವಾರಿಸಲು 10 ನಿಮಿಷಗಳ ಕಾಲ ಮಸಾಜ್ ಮಾಡಿ.
ಯೋಗ ಮತ್ತು ವ್ಯಾಯಾಮ ಮಾಡಿ.
ಭುಜಗಳ ಮೇಲೆ ಭಾರವಾದ ವಸ್ತುಗಳನ್ನು ಒಯ್ಯುವುದನ್ನು ತಪ್ಪಿಸಿ.
ನೋವು ಹೆಚ್ಚಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

click me!