ಒಂದು ರೀತಿಯ ಪರಿಸ್ಥಿತಿಯಲ್ಲಿ ಇಬ್ಬರು ವ್ಯಕ್ತಿಗಳು ಹೇಗೆ ವಿಭಿನ್ನವಾಗಿ ವರ್ತಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮೊದಲ ಕಣ್ಣೀರು ಯಾವ ಕಣ್ಣಿನಲ್ಲಿ ಹರಿಯುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ನಮಗೆ ತಿಳಿದಿವೆ, ಆದರೆ ಮೆದುಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಒಂದೇ ವ್ಯಕ್ತಿಯು ಒಂದೇ ಪರಿಸ್ಥಿತಿಯಲ್ಲಿ ಅನೇಕ ಬಾರಿ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು ಎಂದು ಮನೋವಿಜ್ಞಾನ (psychology) ನಂಬುತ್ತದೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳು ಬಹಳ ವಿಶಿಷ್ಟವಾಗಿವೆ, ಅದರ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ.
ಶೀತ ಮತ್ತು ಕೆಮ್ಮು ಮಾತ್ರವಲ್ಲ, ಭಾವನೆಗಳ ವೈರಸ್ ಸಹ ವರ್ಗಾವಣೆಯಾಗುತ್ತದೆ: ನಿಜವಾಗ್ಲೂ ಹೀಗೆ ಆಗುತ್ತಾ ಎಂದು ನಿಮಗೆ ಅನಿಸಬಹುದು. ಆದರೆ ಇಲ್ಲಿ ಭಾವನೆಗಳ ವೈರಸ್ (feeling virus) ನಿಜವಾದ ವೈರಸ್ ಅಲ್ಲ, ಆದರೆ ಅಭಿವ್ಯಕ್ತಿಯ ಮಾರ್ಗವಾಗಿದೆ. ನೆಗಡಿಯಂತಹ ರೋಗಗಳನ್ನು ವರ್ಗಾಯಿಸಬಹುದಾದಂತೆಯೇ, ಭಾವನೆಗಳ ವಿಷಯದಲ್ಲೂ ಇದೇ ಆಗಿದೆ. ದುಃಖ, ಸಂತೋಷ, ಒತ್ತಡ ಮತ್ತು ಆತಂಕವನ್ನು ಸಹ ವರ್ಗಾಯಿಸಬಹುದು. ನಿಮ್ಮ ಆಪ್ತರು ನಿಮ್ಮ ದುಃಖವನ್ನು ಅನುಭವಿಸಬಹುದು. ನೀವು ರಸ್ತೆಯಲ್ಲಿ ತುಂಬಾ ದುಃಖಿತ ವ್ಯಕ್ತಿಯನ್ನು ನೋಡಿದರೆ, ಅವನನ್ನು ನೋಡುವುದು ನಿಮ್ಮ ಮನಸ್ಥಿತಿಯನ್ನು ಹಾಳುಮಾಡುತ್ತದೆ. ಭಾವನಾತ್ಮಕ ಒತ್ತಡವನ್ನು (emotional sstress) ಹಂಚಿಕೊಂಡರೆ, ಅದು ಇನ್ನೊಬ್ಬ ವ್ಯಕ್ತಿಗೂ ಸಂಭವಿಸಬಹುದು.
ಸಂಗೀತವು ನಿಮ್ಮ ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ: ಇದನ್ನು 'ಮೊಜಾರ್ಟ್ ಪರಿಣಾಮ' ಎನ್ನಲಾಗುವುದು., ಇದನ್ನು ಮೊದಲು ಸತ್ಯವೆಂದು ಪರಿಗಣಿಸಲಾಗಿತ್ತು. ವಾಸ್ತವವಾಗಿ, ಮೊಜಾರ್ಟ್ ಮುಂತಾದ ಶಾಸ್ತ್ರೀಯ ಸಂಗೀತವನ್ನು ಕೇಳುವುದು ಸ್ವಲ್ಪ ಸಮಯದವರೆಗೆ ನಿಮ್ಮ ಆಲೋಚನಾ ಶಕ್ತಿಯನ್ನು (thinking power) ಹೆಚ್ಚಿಸುತ್ತದೆ ಎಂದು ಹಿಂದಿನ ಕಾಲದಲ್ಲಿ ನಂಬಲಾಗಿತ್ತು. ಅದರ ಪರಿಣಾಮದ ಮೇಲಿನ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ಹೊಂದಿದ್ದರೂ, ಸಂಗೀತವು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ ಅನ್ನೋದು ನಿಜ.
ಹಗ್ ಮಾಡೋದರಿಂದ ಮನಸ್ಸಿಗೆ ಸಂತೋಷವಾಗುತ್ತೆ: ಯಾರನ್ನಾದರೂ ಹಗ್ ಮಾಡೋದು ಒಂಟಿತನದ ಭಾವನೆಯನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ನಂಬಿವೆ. ತಬ್ಬಿಕೊಳ್ಳುವುದು ದೇಹದಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಲವ್ ಹಾರ್ಮೋನ್ (love hormone) ಎಂದು ಕರೆಯಲಾಗುತ್ತದೆ, ಇದರ ಪರಿಣಾಮವು ನೀವು ಔಷಧಿ ತೆಗೆದುಕೊಂಡ ಪರಿಣಾಮಕ್ಕೆ ಸ್ವಲ್ಪ ಹೋಲುತ್ತದೆ ಮತ್ತು ಮನಸ್ಸು ಸಂತೋಷವಾಗಿದೆ.
ಸಮಯ ಬಂದಾಗ ಜನರು ಸಹಾಯ ಮಾಡಲು ಸಿದ್ಧರಿಲ್ಲ: ತುರ್ತು ಪರಿಸ್ಥಿತಿ (emergency period) ಇದ್ದಾಗ, ಜನರು ಸಹಾಯ ಮಾಡಲು ಹಿಂಜರಿಯುತ್ತಾರೆ ಎಂದು ಮನೋವಿಜ್ಞಾನವು ಹೇಳುತ್ತೆ. ಇದಕ್ಕೆ ಉದಾಹರಣೆ ಎಂದರೆ ದೆಹಲಿಯಲ್ಲಿ 16 ವರ್ಷದ ಹುಡುಗಿಯನ್ನು ಪಾಗಲ್ ಪ್ರೇಮಿಯೊಬ್ಬ ನಡು ದಾರಿಯಲ್ಲಿ ಇರಿದು ಕೊಂದಾಗ ಯಾರೊಬ್ಬರೂ ಆಕೆಯ ರಕ್ಷಣೆಗೆ ಹೋಗಿರಲಿಲ್ಲ. ಅಂದ್ರೆ ಜನರು ಜವಾಬ್ಧಾರಿ ತೆಗೆದುಕೊಳ್ಳಲು ಬಯಸೋದಿಲ್ಲ. ನಾನ್ಯಾಕೆ ಮಾಡಬೇಕು. ಬೇರೆ ಯಾರದ್ರೂ ಅದನ್ನ ಮಾಡ್ತಾರೆ ಎಂದು ಯೋಚಿಸಿ ಜವಾಬ್ಧಾರಿಯಿಂದ ನುಣುಚುತ್ತಾರೆ.
ಬಣ್ಣಗಳು ನಮ್ಮ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ: ನಮ್ಮ ಭಾವನೆಗಳು ಮತ್ತು ಕ್ರಿಯೆಗಳನ್ನು ಯಾವಾಗಲೂ ಬಣ್ಣಗಳ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ, ನೀಲಿ ಬಣ್ಣವು (blue color) ಹೆಚ್ಚಾಗಿ ಶಾಂತತೆಗೆ ಸಂಬಂಧಿಸಿದೆ, ಆದರೆ ಕೆಂಪು ಹಸಿವು ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಬಣ್ಣದಂತಹ ಮೂಲಭೂತ ವಿಷಯವೂ ನಮ್ಮ ಭಾವನೆಗಳು ಮತ್ತು ಆಲೋಚನೆಯ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಇದು ತೋರಿಸುತ್ತದೆ.
ಫೋನ್ ರಿಂಗ್ ಆಗದಿದ್ದರೂ ಆದಂತೆ ಅನಿಸೋದು: ಬಹುಶಃ ಇದು ನಿಮಗೂ ಆಗಿರಬಹುದು. ಫೋನ್ ಅನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡಿರುತ್ತಿರಿ. ಅದು ರಿಂಗಣಿಸದಿದ್ದರೂ ಸಹ, ನೋಟಿಫಿಕೇಶನ್ ಬಾರದೇ ಇದ್ದರೂ ಮೆಸೇಜ್ ಬಂದಿದೆ ಅಥವಾ ಫೋನ್ ರಿಂಗ್ (phone ring) ಆಗುತ್ತೆ ಎಂದು ನಿಮಗೆ ಅನಿಸುತ್ತದೆ. ನಾವು ನಮ್ಮ ಫೋನ್ ಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೀವಿ ಎಂದರೆ ಫೋನ್ ಇಲ್ಲದೇ ಇರಲು ಸಾಧ್ಯವಿಲ್ಲದಷ್ಟು ಅಡಿಕ್ಟ್ ಆಗಿದ್ದೆವೆ.
ನಗುವುದರಿಂದ ಅನೇಕ ಪ್ರಯೋಜನಗಳಿವೆ: ನೀವು ಸಂತೋಷವಾಗಿದ್ದರೆ, ನಿಮ್ಮ ಮನಸ್ಸು ಸಹ ಸಂತೋಷವಾಗಿರುತ್ತದೆ, ಆದರೆ ಅದು ನಿಮ್ಮ ಜೀವನದಲ್ಲಿ ಬೇರೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದಲ್ಲ. ಇದು ಎಂಡಾರ್ಫಿನ್ಗಳು (endorphins) ಬಿಡುಗಡೆಯಾಗಲು ಕಾರಣವಾಗುತ್ತದೆ ಮತ್ತು ದೇಹದೊಳಗಿನ ಉತ್ತಮ ರಾಸಾಯನಿಕಗಳು ಹೆಚ್ಚಾಗುತ್ತವೆ. ಇದು ನೋವು ಮತ್ತು ಸಂಕಟ ಎರಡನ್ನೂ ಕಡಿಮೆ ಮಾಡುತ್ತದೆ. ನಿಮ್ಮ ಮೂಡ್ ಉತ್ತಮವಾಗಿರುತ್ತದೆ ಮತ್ತು ನೀವು ಹೆಚ್ಚು ನಕ್ಕರೆ, ನಿಮ್ಮ ಒಟ್ಟಾರೆ ಆರೋಗ್ಯವು ಉತ್ತಮವಾಗಿರುತ್ತದೆ.