ನಿಮ್ಮ ಮಗು ಕಡಿಮೆ ನಿದ್ರೆ ಮಾಡಿದರೆ, ಜಾಗರೂಕರಾಗಿ.. ಇದು ಆರೋಗ್ಯಕ್ಕೆ ಮಾರಕ

First Published | Sep 21, 2021, 4:59 PM IST

ಮಾನಸಿಕ ಒತ್ತಡ, ತಲೆನೋವು ಮತ್ತು ಆಯಾಸದ ದೂರುಗಳು ಸಾಮಾನ್ಯ. ಅದನ್ನು ತೊಡೆದು ಹಾಕಲು ಜನರು ಏನೇನೋ ಮಾಡುತ್ತಾರೆ. ಆದರೆ ಸಂಶೋಧನೆಯೊಂದರಲ್ಲಿ ಬಹಿರಂಗವಾಗಿರುವ ಪ್ರಕಾರ ಈ ಸಮಸ್ಯೆಗಳಿಗೆ ಪರಿಹಾರ ಮನೆಯೊಳಗೇ ಇದೆ. ಅದು ತುಂಬಾ ಸುಲಭ. ಜರ್ನಲ್ ಆಫ್ ಚೈಲ್ಡ್ ಆ್ಯಂಡ್ ಹದಿಹರೆಯದ ಮನೋವೈದ್ಯ ಶಾಸ್ತ್ರ ಮತ್ತು ಮಾನಸಿಕ ಆರೋಗ್ಯದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿದ್ರೆ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. 
 

ಸಂಶೋಧನೆ ಪ್ರಕಾರ ಕೋವಿಡ್-19 ರ ಅವಧಿಯಲ್ಲಿ ನಿದ್ರೆ ಮತ್ತು ಮಾನಸಿಕ ಒತ್ತಡವನ್ನು ಅಧ್ಯಯನ ಮಾಡಿತು. ಕೊರೋನಾ ಸಮಯದಲ್ಲಿ ಮಕ್ಕಳಲ್ಲಿ ನಿದ್ರೆ ಮಾಡುವ ಸಮಸ್ಯೆಯ ಬಗ್ಗೆ ಸಂಶೋಧನೆಯು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಅವುಗಳ ಬಗ್ಗೆ ನೀವು ಎಚ್ಚೆತ್ತುಕೊಳ್ಳಲೇಬೇಕು.  

ಮೆಕ್ ಗಿಲ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯ ಪ್ರಕಾರ, ಕೋವಿಡ್‌ನಲ್ಲಿ ಕಡಿಮೆ ನಿದ್ರೆ ಜನರಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ. ಸಾಕಷ್ಟು ನಿದ್ರೆ ಮಾಡಿದವರು ಇತರೆ ರೋಗಗಳಿಂದ ಪ್ರಯೋಜನ ಪಡೆದಿದ್ದಾರೆ. ವಾಸ್ತವವಾಗಿ, ಲಾಕ್ ಡೌನ್ ದೈನಂದಿನ ದಿನಚರಿಯನ್ನು ಬದಲಾಯಿಸಿದೆ. ಇದು ಯುವಕರು ಮಲಗಲು ಮತ್ತು ಎದ್ದೇಳುವ ಸಮಯವನ್ನು ಬದಲಾಯಿಸಿತು. 

Latest Videos


ಕೊರೊನಾ ಸಮಯದಲ್ಲಿ ಶಾಲೆಗಳು ಸಹ ಸರಿಯಾಗಿ ಇರಲಿಲ್ಲ ಎಂದು ಮೆಕ್ ಗಿಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ರುಟ್ ಗ್ರುಬರ್ ಹೇಳಿದರು. ಹೆಚ್ಚು ಸಮಯದ ಸಮಸ್ಯೆಯೂ ಇರಲಿಲ್ಲ. ಶಾಲೆಗಳು ಮಕ್ಕಳ ಮಾರ್ಗದರ್ಶಕರ ಆರೋಗ್ಯವನ್ನು ಸರಿಯಾಗಿಡುವಲ್ಲಿ ಕೆಲಸ ಮಾಡಿದವು. 

ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಕ್ಕಳ ಎದ್ದೆಳುವ ಮತ್ತು ನಿದ್ರೆಯ ಸಮಯಬದಲಾಯಿತು. ಅನೇಕ ಮಕ್ಕಳು ತಡವಾಗಿ ಮಲಗಿದರೆ, ಇತರರಿಗೆ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ಬೆಳಗಿನ ನಡಿಗೆ ಕಡಿಮೆ, ವ್ಯಾಯಾಮ ಕಡಿಮೆಯಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.  ಇದರಿಂದ ಕೋವಿಡ್ ನಲ್ಲಿ ಬಹುತೇಕ ಚಟುವಟಿಗಳು ನಿಂತವು. ಇವು ಮಕ್ಕಳ ನಿದ್ದೆಯನ್ನೂ ಕೆಡಿಸಿತು. 

ಕೋವಿಡ್-19 ರ ಅವಧಿಯಲ್ಲಿ ಜಗತ್ತಿನ ಅನೇಕ ದೇಶಗಳಲ್ಲಿ ಇದೇ ರೀತಿಯ ಸಂಶೋಧನೆಗಳು ಹೊರಹೊಮ್ಮಿವೆ. ಕೋವಿಡ್ ಗಿಂತ ಮೊದಲು ಮಲಗಿದ ಮಕ್ಕಳು ಮತ್ತು ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಲಗಿದ ಮಕ್ಕಳು ಮಾನಸಿಕ ಒತ್ತಡದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. 

ಕಡಿಮೆ ನಿದ್ರೆ ಮಾಡುವವರಲ್ಲಿ ಹೆಚ್ಚು ನಿದ್ರೆ ಮಾಡುವವರಿಗಿಂತ ಹೆಚ್ಚು ಒತ್ತಡ ಕಾಣಿಸಿಕೊಳ್ಳುತ್ತದೆ ಎಂದು ಗ್ರುಬರ್ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗ ಬರುವ ಮೊದಲೇ ಮಕ್ಕಳಿಗೆ ಸಾಕಷ್ಟು ನಿದ್ರೆ ಮಾಡದಿರುವ ಬಗ್ಗೆ ಜಾಗತಿಕ ಕಳವಳವಿತ್ತು ಎಂದು ಹೆರಿಟೇಜ್ ರೀಜನಲ್ ಹೈಸ್ಕೂಲ್ ನ ಪ್ರಾಂಶುಪಾಲರಾದ ಸುಜಾತಾ ಸಹಾ ಹೇಳಿದರು. ಈಗ, ಇದು ಹಿಂದೆಂದಿಗಿಂತಲೂ ಹೆಚ್ಚು ಕಳವಳಕಾರಿಯಾಗಿದೆ.

ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬೇಕಾಗಿದೆ. ಪ್ರಪಂಚದಾದ್ಯಂತ ನಿದ್ರಾಹೀನತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. ಒಂದು ಅಂದಾಜಿನ ಪ್ರಕಾರ, ಸಾಂಕ್ರಾಮಿಕ ರೋಗದ ನಂತರವೂ ಹೆಚ್ಚಿದ ಸಮಸ್ಯೆ ಮುಂದುವರಿಯುತ್ತದೆ. ಆದುದರಿಂದ ಮಕ್ಕಳ ನಿದ್ರೆಯ ಬಗ್ಗೆ ಗಮನ ಹರಿಸುವಂತೆ ಹೇಳಲಾಗುತ್ತದೆ. 

click me!