‘ಬ್ಯಾಡ್ ಕೊಲೆಸ್ಟ್ರಾಲ್' ಹೃದಯಕ್ಕೆ ಅಪಾಯ, ಕಡಿಮೆ ಮಾಡಲು ಇಲ್ಲಿದೆ ಪರಿಹಾರ

First Published Jul 1, 2022, 6:02 PM IST

ಕೆಟ್ಟ ಲೈಫ್ ಸ್ಟೈಲ್, ಕಳಪೆ ಆಹಾರ ಅಥವಾ ಆನುವಂಶಿಕ ಸಮಸ್ಯೆ ಇರಬಹುದು, ಇವುಗಳಿಂದೆಲ್ಲಾ ಕೊಲೆಸ್ಟ್ರಾಲ್ ಹೆಚ್ಚಳವಾಗುತ್ತೆ. ಕಾರಣ ಏನೇ ಇರಲಿ, ದೇಹದಲ್ಲಿ ಬ್ಯಾಡ್  ಕೊಲೆಸ್ಟ್ರಾಲ್ ಬೆಳವಣಿಗೆ ಆರೋಗ್ಯಕ್ಕೆ ಅಪಾಯಕಾರಿ. ಆರೋಗ್ಯಕರವಾಗಿರಲು, ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರಿಸೋದು ಮುಖ್ಯ. ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ರಕ್ತನಾಳಗಳ ಅಡೆತಡೆಗೆ ಕಾರಣವಾಗಬಹುದು, ಅಷ್ಟೇ ಅಲ್ಲ ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತೆ.
 

ಕೊಲೆಸ್ಟ್ರಾಲ್(Cholesterol)  ಕಡಿಮೆ ಮಾಡೋದು ಹೇಗೆ?
ಕೊಲೆಸ್ಟ್ರಾಲ್  ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಪ್ರತಿದಿನ ವ್ಯಾಯಾಮ ಮಾಡೋದು ಮತ್ತು ಕೊಬ್ಬು ಅಥವಾ ಎಣ್ಣೆಯುಕ್ತ ವಸ್ತು ಸೇವನೆ ಕಡಿಮೆ ಮಾಡೋದು ಎಂದು ವೈದ್ಯರು ಮತ್ತು ತಜ್ಞರು ಸಲಹೆ ನೀಡುತ್ತಾರೆ. ಆದ್ರೆ ಈಗ ಎಲ್ಲರಲ್ಲೂ ಮೂಡೋ ಪ್ರಶ್ನೆಯೆಂದರೆ, ಕೊಲೆಸ್ಟ್ರಾಲ್  ಕಡಿಮೆ ಮಾಡಲು  ಏನು ತಿನ್ನಬೇಕು? 

ದೇಹದಲ್ಲಿನ ಬ್ಯಾಡ್  ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕೆಲವು ಸಪ್ಲಿಮೆಂಟ್ಸ್ ನಿಮ್ಮ ಡಯಟ್ ನಲ್ಲಿ(Diet) ಸೇರಿಸಬಹುದು. ಇದಕ್ಕೆ ಉತ್ತಮ ಪೂರಕವೆಂದರೆ ಕರಗುವ ಫೈಬರ್. ಹೌದು ಫೈಬರ್ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಬೇಗನೆ ಕಡಿಮೆಯಾಗುತ್ತೆ. ಆರೋಗ್ಯವೂ ಉತ್ತಮವಾಗಿರುತ್ತೆ.

ಫೈಬರ್ (Fibre)ಎಂದರೇನು?
ನಾರಿನಂಶದಲ್ಲಿ ಎರಡು ವಿಧಗಳಿವೆ. ಕರಗದ ಫೈಬರ್ ನಿಮ್ಮ ಜೀರ್ಣಾಂಗವ್ಯೂಹ ಹಗುರಾಗಿಸಲು ಸಹಾಯ ಮಾಡುತ್ತೆ, ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತೆ. ಕರಗುವ ನಾರಿನಂಶ ಆಹಾರ ಪದಾರ್ಥಗಳಲ್ಲಿ ಇರೋದು ಕಂಡುಬಂದಿದೆ ಮತ್ತು ಇದು ರಕ್ತದ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಆರೋಗ್ಯ ಕಾಪಾಡುತ್ತೆ.
 

ಕರಗುವ ಫೈಬರ್ ಕೊಲೆಸ್ಟ್ರಾಲ್ ಅನ್ನು ಹೇಗೆ ಕಡಿಮೆ ಮಾಡುತ್ತೆ 
ಕರಗುವ ಫೈಬರ್ ಜೀರ್ಣಾಂಗವ್ಯೂಹದಲ್ಲಿನ ಕೊಲೆಸ್ಟ್ರಾಲ್ ಹೊಂದಿರುವ ವಸ್ತುಗಳನ್ನು ಬಂಧಿಸುತ್ತೆ, ಇದರಿಂದ ಅವು ಹೀರಲ್ಪಡೋದಿಲ್ಲ. ಇದರಿಂದಾಗಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಸಂಗ್ರಹವಾಗೋದಿಲ್ಲ.  ಫೈಬರ್, ರಕ್ತದಲ್ಲಿ(Blood) ಸಂಗ್ರಹವಾದ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ.

ಕರಗುವ ಫೈಬರ್ ಯಾವೆಲ್ಲಾ ಆಹಾರದಲ್ಲಿದೆ?
ಬೀನ್ಸ್, ಆವಕಾಡೊ(Avocado), ಬೆರ್ರಿ ಮತ್ತು ಓಟ್ಸ್ ನಂತಹ ಆಹಾರಗಳಲ್ಲಿ ಕರಗುವ ಫೈಬರ್ ನ್ಯಾಚುರಲ್ ಆಗಿ ಕಂಡುಬರುತ್ತೆ. ಇದಕ್ಕಾಗಿ ನೀವು ಸಪ್ಲೆಮೆಂಟ್ಸ್ ಸಹ ತೆಗೆದುಕೊಳ್ಳಬಹುದು. ನಿಯಮಿತವಾಗಿ ಕರಗುವ ನಾರಿನಂಶವಿರುವ ಆಹಾರ ಸೇವಿಸಲು ಸಾಧ್ಯವಾಗದಿದ್ದರೆ, ಸಪ್ಲೆಮೆಂಟ್ಸ್ ಹೆಚ್ಚು ಪ್ರಯೋಜನಕಾರಿ.

ನಿಮಗೆ ಎಷ್ಟು ಕರಗುವ ಫೈಬರ್ (Soluble Fibre)ಬೇಕು?
ದಿನಕ್ಕೆ ೫ ರಿಂದ ೧೦ ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಕರಗುವ ನಾರಿನಂಶ ಇರಬೇಕು. ಪ್ರಮಾಣ ಇಷ್ಟು ಇದ್ದರೆ ಮಾತ್ರ, ನಿಮ್ಮ ರಕ್ತದಲ್ಲಿನ ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಎಂದು ಅಧ್ಯಯನಗಳು ತಿಳಿಸಿವೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇತರ ಮಾರ್ಗಗಳು
ಕರಗುವ ಫೈಬರ್  ಸಪ್ಲೆಮೆಂಟ್ಸ್ ತೆಗೆದುಕೊಳ್ಳುವುದರ ಜೊತೆಗೆ, ಲೈಫ್ ಸ್ಟೈಲ್ ಸುಧಾರಿಸೋದು ಸಹಾಯ ಮಾಡುತ್ತೆ . ಅನಿಮಲ್ ಪ್ರೋಟೀನ್, ಪ್ಲಾಂಟ್ ಸಪ್ಲೆಮೆಂಟ್ಸ್ಗಳೊಂದಿಗೆ ಇತರ ನಾರಿನಾಂಶವಿರುವ ಆಹಾರ ಸೇವಿಸಿ. ನಟ್ಸ್, ಸೀಡ್ಸ್, ಆಲಿವ್ ಎಣ್ಣೆ(Olive oil) ಮತ್ತು ಆವಕಾಡೊ ಬಳಸಿ ನೋಡಿ. ಇವು ಬ್ಯಾಡ್ ಕೊಲೆಸ್ಟ್ರಾಲ್ ನಿವಾರಣೆಗೆ ಸಹಾಯ ಮಾಡುತ್ತೆ. 
 

click me!