ಆರೋಗ್ಯದ ಮೇಲೆ ಜಾದೂ ಮಾಡುತ್ತೆ ಸೋಂಪು - ಕಲ್ಲುಸಕ್ಕರೆ

First Published | Jul 1, 2022, 5:49 PM IST

ಭಾರತದ ಅಡುಗೆಮನೆಗಳಲ್ಲಿ ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಹಾಯ ಮಾಡುವ ಅನೇಕ ಮಸಾಲೆಗಳಿವೆ, ಅವುಗಳಲ್ಲಿ ಸೋಂಪು ಕೂಡ ಒಂದಾಗಿದೆ. ಅದಕ್ಕಾಗಿ ಆಹಾರ ಸೇವಿಸಿದ ನಂತರ, ಅನೇಕ ಜನರು ಸೋಂಪು ಮತ್ತು ಕಲ್ಲುಸಕ್ಕರೆ ತಿನ್ನುತ್ತಾರೆ. ಪ್ರತಿಯೊಬ್ಬರೂ ಊಟ ಮಾಡಿದ ನಂತರ ಸೋಂಪು ಮತ್ತು ಕಲ್ಲುಸಕ್ಕರೆ ಸೇವಿಸಬೇಕು ಏಕೆಂದರೆ ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
 

ಸೋಂಪು ಮತ್ತು ಕಲ್ಲುಸಕ್ಕರೆ ತಿನ್ನೋ ಮೂಲಕ, ದೇಹದ ಜೀರ್ಣಾಂಗ ವ್ಯವಸ್ಥೆಯನ್ನು(Digestive system) ಬಲಪಡಿಸಬಹುದು. ನಿಯಮಿತವಾಗಿ ಸೋಂಪು ಮತ್ತು ಕಲ್ಲುಸಕ್ಕರೆ ತಿನ್ನುವುದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತೆ ಮತ್ತು ಜೀರ್ಣಕ್ರಿಯೆ ಸುಲಭವಾಗುತ್ತೆ . ಗ್ಯಾಸ್ ಮತ್ತು ಅಸಿಡಿಟಿಯ ಸಮಸ್ಯೆ ಹೊಂದಿರುವ ಜನರು ಆಹಾರ ಸೇವಿಸಿದ ನಂತರ ಸೋಂಪು ಮತ್ತು ಕಲ್ಲುಸಕ್ಕರೆ ಸೇವಿಸಬೇಕು, ಇದರಿಂದ, ಸಾಕಷ್ಟು ಪ್ರಯೋಜನ ಪಡೆಯಬಹುದು.

ಸೋಂಪು(Fennel seeds) ವಿಟಮಿನ್, ಫೈಬರ್, ಕ್ಯಾಲ್ಸಿಯಂ, ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಲಕ್ಷಣ ಹೊಂದಿದೆ. ಊಟದ ನಂತರ ಪ್ರತಿದಿನ ಸೋಂಪು ತಿನ್ನುವುದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತೆ ಮತ್ತು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ.

Tap to resize

ಸೋಂಪು ಮತ್ತು ಕಲ್ಲುಸಕ್ಕರೆ ತಿನ್ನುವುದರ ಪ್ರಯೋಜನಗಳು-
ಒಬೆಸಿಟಿ(Obesity) ದೂರ ಮಾಡುವಲ್ಲಿ ಪರಿಣಾಮಕಾರಿ
ಸೋಂಪು ಸಾಕಷ್ಟು ವಿಟಮಿನ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ಹೊಂದಿದೆ. ಇದನ್ನು ಸೇವಿಸೋದ್ರಿಂದಾ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಅನುಭವ ಉಂಟಾಗುತ್ತೆ. ಆ ಮೂಲಕ ಸೋಂಪು ತೂಕ ಇಳಿಸಲು ಸಹಾಯ ಮಾಡುತ್ತೆ.

ಕಣ್ಣುಗಳಿಗೆ(Eyes) ಪ್ರಯೋಜನಕಾರಿ 
ಪ್ರತಿದಿನ ಸೋಂಪು ಮತ್ತು ಕಲ್ಲುಸಕ್ಕರೆ ಸೇವಿಸುವುದರಿಂದ ಕಣ್ಣಿನ ಶಕ್ತಿ ಹೆಚ್ಚುತ್ತೆ. ಪ್ರತಿದಿನ, ಅರ್ಧ ಟೇಬಲ್ ಸ್ಪೂನ್ ಕಲ್ಲುಸಕ್ಕರೆಯನ್ನು, ಒಂದು ಟೇಬಲ್ ಸ್ಪೂನ್ ಸೋಂಪಿನೊಂದಿಗ್ರ್ ಬೆರೆಸಿ, ಅದನ್ನು ತಿನ್ನುವ ಮೂಲಕ ಅಥವಾ ಅದರ ಪುಡಿ ತಯಾರಿಸಿ ಹಾಲಿನೊಂದಿಗೆ ಸೇವಿಸೋದ್ರಿಂದ, ಕಣ್ಣುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆ ನಿವಾರಣೆಯಾಗುತ್ತೆ.

ಹೊಟ್ಟೆ ಆರೋಗ್ಯಕರವಾಗಿರಿಸಲು  
ಪ್ರತಿದಿನ ಊಟ ಮಾಡಿದ ನಂತರ, ಒಂದು ಚಮಚ ಸೋಂಪಿಗೆ ಸಮ ಪ್ರಮಾಣದ ಕಲ್ಲುಸಕ್ಕರೆ (Rock sugar)ಸೇರಿಸಿ ತಿನ್ನಿ ಇದರಿಂದ, ಹೊಟ್ಟೆಯು ಆರೋಗ್ಯಕರವಾಗಿರುತ್ತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತೆ .

ಇಮ್ಮ್ಯೂನಿಟಿ ಬೂಸ್ಟರ್(Immunity Booster)
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸೋಂಪು ತುಂಬಾ ಪರಿಣಾಮಕಾರಿ. ಇದರಲ್ಲಿರುವ ವಿಟಮಿನ್ ಸಿ, ನೈಸರ್ಗಿಕವಾಗಿ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗಿಸುತ್ತೆ. ಸೋಂಪು ಮತ್ತು ಕಲ್ಲುಸಕ್ಕರೆ ಸೇವನೆ ಮನಸ್ಸು ಮತ್ತು ದೇಹವನ್ನು ಶಾಂತವಾಗಿರಿಸುತ್ತೆ .

ಸೋಮಾರಿತನ(Lazy) ದೂರವಾಗುತ್ತೆ 
ಆಹಾರ ಸೇವಿಸಿದ ತಕ್ಷಣ ಹೆಚ್ಚಿನ ಜನರು ಆಲಸಿಯಾಗುತ್ತಾರೆ, ಮತ್ತು ಮಲಗಬೇಕೆಂದು ಭಾವಿಸುತ್ತಾರೆ. ಅದಕ್ಕಾಗಿ ಆಹಾರ ಸೇವಿಸಿದ ನಂತರ ಸೋಂಪು ಮತ್ತು ಕಲ್ಲುಸಕ್ಕರೆ ಸೇವಿಸಿ ಲೇಸಿನೆಸ್ ದೂರ ಮಾಡಿ. ಕಲ್ಲುಸಕ್ಕರೆ, ಸೋಂಪು ಮಿಶ್ರಣ ಮನಸ್ಸನ್ನು ಏಕಾಗ್ರಗೊಳಿಸಲು ಸಹಾಯ ಮಾಡುತ್ತೆ .

ಬಾಯಿಯ ವಾಸನೆ ತೆಗೆದುಹಾಕುತ್ತೆ :
ಸೋಂಪು ಸೇವಿಸೋದ್ರಿಂದ ಬಾಯಿಯ ಕೆಟ್ಟ ಉಸಿರಾಟದಂತಹ(Bad breath) ಸಮಸ್ಯೆ ತೊಡೆದುಹಾಕಬಹುದು. ಹಾಗಾಗಿ ಊಟವಾದ ನಂತರ ಸೋಂಪು ಹಾಗು ಕಲ್ಲುಸಕ್ಕರೆ ಸೇವಿಸಿ ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ. ಬಾಯಿಯ ವಾಸನೆಯನ್ನು ಸಹ ದೂರ ಮಾಡಿ.

Latest Videos

click me!