ಮಳೆಗಾಲದಲ್ಲಿನ (rainy season) ಹವಾಮಾನ ಬದಲಾವಣೆ, ಜೋರಾದ ಮಳೆ ಮತ್ತು ಸೂಕ್ಷ್ಮಜೀವಿಗಳ ಹೆಚ್ಚೋದ್ರಿಂದ, ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ತುಂಬಾನೆ ದುರ್ಬಲಗೊಳ್ಳುತ್ತದೆ. ಇದು ಎಲ್ಲಾ ರೀತಿಯ ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕು ಭಾಧಿಸುತ್ತದೆ. ಇದರಿಂದ ಕಾಮಾಲೆ, ಟೈಫಾಯಿಡ್, ಡೆಂಗ್ಯೂ, ಮಲೇರಿಯಾ, ಕಾಲರಾ ಮತ್ತು ಫ್ಲೂ ಈ ಸೀಸನ್ ನಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ರೋಗಗಳಾಗಿವೆ.
ಹೊರಗಡೆ ಬಿಸಿಲು ಇರಲು ಎಲ್ಲವೂ ಸುಂದರ ಮತ್ತು ಆಹ್ಲಾದಕರ ಎಂದೆನಿಸುತ್ತೆ. ಆದರೆ ಮಳೆಗಾಲ ಬಂದ ತಕ್ಷಣ, ನೀರಿನಿಂದ ರೋಗಗಳು ಹರಡಲು ಪ್ರಾರಂಭಿಸುತ್ತವೆ. ಕಾಮಾಲೆ, ಟೈಫಾಯಿಡ್, ಡೆಂಗ್ಯೂ (dengue), ಮಲೇರಿಯಾ, ಕಾಲರಾ ಮತ್ತು ಫ್ಲೂ ಈ ಸೀಸನ್ ನಲ್ಲಿ ಹರಡುವ ಕೆಲವು ಸಾಮಾನ್ಯ ರೋಗಗಳಾಗಿವೆ. ಪ್ರತಿ ವರ್ಷ, ಲಕ್ಷಾಂತರ ಜನರು ಈ ರೋಗಗಳಿಂದಾಗಿ ಸಾಯುತ್ತಾರೆ. ಹಾಗಾದರೆ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಹೇಗೆ?
211
ಆಯುರ್ವೇದದಿಂದ ಹಿಡಿದು ಹೋಮಿಯೋಪಥಿ, ಯುನಾನಿ, ಸಿದ್ಧ, ಯೋಗ, ಸೋವಾ-ರಿಗ್ಪ ಮತ್ತು ಪ್ರಕೃತಿಚಿಕಿತ್ಸೆಯವರೆಗೆ, ಮಳೆಗಾಲದಲ್ಲಿನ ಬದಲಾವಣೆ ಮತ್ತು ಸೂಕ್ಷ್ಮಜೀವಿಗಳ ಹೆಚ್ಚಳ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು (immunity booster)ದುರ್ಬಲಗೊಳಿಸುತ್ತೆ ಎಂದು ನಂಬುತ್ತವೆ. ಇದು ಎಲ್ಲಾ ರೀತಿಯ ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತೆ.
311
ನಿಮಗೂ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಕಾಡಬಾರದು ಎಂದಾದರೆ ಕೆಲವು ಸರಳ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ಮತ್ತು ನಮ್ಮ ಲೈಫ್ ಸ್ಟೈಲ್ ನಲ್ಲಿ (lifestyle) ಕೆಲವು ಸರಳ ಬದಲಾವಣೆ ಮಾಡೋ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
411
ಅಜೀರ್ಣ, ವಾಂತಿ, ಅತಿಸಾರ
ಮಳೆಗಾಲದಲ್ಲಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ. ಹೊಟ್ಟೆ ನೋವು, ಅತಿಸಾರ, ವಾಂತಿ (vomiting), ಮಲಬದ್ಧತೆ, ತಲೆನೋವು, ಜ್ವರ, ಹಸಿವಾಗದಿರುವುದು ಈ ಎಲ್ಲಾ ಸಮಸ್ಯೆಗಳು ಕಾಡುತ್ತವೆ. ಇದನ್ನು ತಪ್ಪಿಸಲು, ನೀವು ಸಾಕಷ್ಟು ನೀರು ಸೇವಿಸೋ ಮೂಲಕ ಹೈಡ್ರೇಟ್ ಆಗಿರಬೇಕು.
511
ಇನ್ನು ವಾಕರಿಕೆ ಸಮಸ್ಯೆ ನಿವಾರಿಸಲು ಶುಂಠಿಯನ್ನು(Ginger) ಹಾಗೇ ತಿನ್ನುವುದು ಅಥವಾ ಚಹಾದೊಂದಿಗೆ ಬೆರೆಸಿ ಸೇವಿಸುವುದು ವಾಕರಿಕೆ, ವಾಂತಿ ಮತ್ತು ಅತಿಸಾರ ಮೊದಲಾದ ಸಮಸ್ಯೆ ನಿವಾರಿಸುತ್ತೆ. ನೋವನ್ನು ನಿವಾರಿಸಲು ನಾಭಿಯ ಒಳಗೆ ಮತ್ತು ಸುತ್ತಲೂ ಹಿಂಗಿನ್ನು ನೀರಿನಲ್ಲಿ ಪೇಸ್ಟ್ ಮಾಡಿ ಹಚ್ಚೋದ್ರಿಂದ ಪರಿಹಾರ ಸಿಗುತ್ತೆ.
611
ಮಸಾಲೆಯುಕ್ತ ಮತ್ತು ಹೊರಗಿನ ಆಹಾರ ಅವಾಯ್ಡ್ ಮಾಡಿ
ಮಳೆಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸೋದು ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದು ಅಜೀರ್ಣ, ಗ್ಯಾಸ್ಟ್ರಿಕ್ (gastric)ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಈ ಸೀಸನ್ ನಲ್ಲಿ ರೆಸ್ಟೋರೆಂಟ್ ಮತ್ತು ಬೀದಿ ಬದಿಯ ಅಂಗಡಿಗಳ ಆಹಾರ ಅವಾಯ್ಡ್ ಮಾಡಿ. ಅವುಗಳಿಂದ ಬೇಗನೆ ರೋಗ ಹರದಬಹುದು.
711
ಸೊಪ್ಪು ತರಕಾರಿ ಕೂಡ ಬೇಡ
ಮಳೆಗಾಲದಲ್ಲಿ ಹಸಿರು ಎಲೆ ತರಕಾರಿಗಳನ್ನು (vegetables) ಸೇವಿಸಬೇಡಿ. ಈ ತರಕಾರಿಗಳು ತುಂಬಾನೆ ಕೊಳಕಾಗಿರುತ್ತೆ ಮತ್ತು ಹೆಚ್ಚಿನ ತೇವಾಂಶವನ್ನು ಹೀರುತ್ತೆ ಮತ್ತು ಮಳೆಗಾಲದಲ್ಲಿ ಇದನ್ನು ಸ್ವಚ್ಛಗೊಳಿಸೋದು ಸಹ ಕಷ್ಟ.ಇದನ್ನು ಸೇವಿಸೋದ್ರಿಂದ ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾ ದೇಹಕ್ಕೆ ಸೇರುತ್ತೆ.
811
ಫಿಟ್ (Fit) ಮತ್ತು ಆರೋಗ್ಯವಾಗಿರಲು ಪ್ರತಿ ಊಟಕ್ಕೂ ಮೊದಲು ಒಂದು ಸಣ್ಣ ತುಂಡು ಶುಂಠಿಯನ್ನು ಸೆಂಧಾ ಉಪ್ಪಿನೊಂದಿಗೆ ಅಗಿಯಿರಿ. ಇದರಿಂದ ಆಹಾರ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತೆ. ಹಳಸಿದ ಆಹಾರ ಸೇವಿಸಬೇಡಿ.
911
ಬಿಸಿ ಆಹಾರವನ್ನು ಸೇವಿಸಿ ಮತ್ತು ಸಲಾಡ್ ಗಳಂತಹ ಕಡಿಮೆ ಬೇಯಿಸಿದ ಆಹಾರ ತಪ್ಪಿಸಿ. ಮಳೆಗಾಲದಲ್ಲಿ ಸ್ವಲ್ಪ ಜೇನುತುಪ್ಪದೊಂದಿಗೆ (honey) ಕುದಿಸಿದ ನೀರನ್ನು ಕುಡಿಯುವುದು ಒಳ್ಳೆಯದು. ಈ ಮಿಶ್ರಣವು ನೀರಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತೆ.
1011
ನೀವು ಆರೋಗ್ಯಕರವಾಗಿರಲು ಕಹಿ ತರಕಾರಿಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸಿ. ಅಂದರೆ ನಿಮ್ಮ ಆಹಾರದಲ್ಲಿ ಹಾಗಲಕಾಯಿ (bitter gourd) , ಬೇವು, ಮೆಂತ್ಯ ಮತ್ತು ಅರಿಶಿನ ತಪ್ಪದೆ ಸೇರಿಸಿ. ಈ ಕಹಿ ಆಹಾರಗಳು ಸೋಂಕನ್ನು ದೂರವಿಡಲು ಸಹಾಯ ಮಾಡುವ ಉತ್ತಮ ಆಯ್ಕೆಗಳಾಗಿವೆ.
1111
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ
ಮಳೆಗಾಲದಲ್ಲಿ ನಿಮ್ಮ ಮನೆಯ ಸುತ್ತ ಮುತ್ತ ಶುಚಿಯಾಗಿರುವಂತೆ ಕಾಳಜಿ ವಹಿಸೋದು ಮುಖ್ಯ. ಅಷ್ಟೇ ಅಲ್ಲ, ನಿಮ್ಮ ಕೈಗಳು ಮತ್ತು ಪಾದಗಳನ್ನು ಚೆನ್ನಾಗಿ ಕ್ಲೀನ್ ಮಾಡಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಪಾದಗಳನ್ನು ಸಂಪೂರ್ಣವಾಗಿ ಒಣಗಿಸಿದ ನಂತರ ಬಾಮ್ ಅಥವಾ ಮಾಯಿಶ್ಚರೈಸರ್ ಹಚ್ಚಿ. ಅಲ್ಲದೆ, ನೀವು ಹೊರಗಿನಿಂದ ಬಂದಾಗ, ಪ್ರತಿದಿನ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ಧರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.