ಅಂಡಾಶಯ ಕ್ಯಾನ್ಸರ್ ಅಪಾಯ ಕಡಿಮೆ ಮಾಡಿಕೊಳ್ಳಲು ಹೆಲ್ದೀ ಟಿಪ್ಸ್

First Published May 14, 2021, 4:53 PM IST

ಗರ್ಭಾಶಯದ ಕ್ಯಾನ್ಸರ್ ಇದ್ದಾಗ ಅಂಡಾಶಯದಲ್ಲಿ ಸಿಸ್ಟ್‌ಗಳು ರೂಪುಗೊಳ್ಳುತ್ತವೆ. ಸ್ತನ ಕ್ಯಾನ್ಸರ್ ನಂತರ ಮಹಿಳೆಯರಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅಂಡಾಶಯದ ಕ್ಯಾನ್ಸರ್ ಕೂಡ ಅಪಾಯಕಾರಿ. ಅಧ್ಯಯನದ ಪ್ರಕಾರ, ಅಂಡಾಶಯದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಮೂರನೇ ಪ್ರಮುಖ ಕ್ಯಾನ್ಸರ್ ಆಗಿದ್ದು, ಮಹಿಳೆಯರು ಬಳಲುತ್ತಿದ್ದಾರೆ. ಅಂಡಾಶಯದ ಕ್ಯಾನ್ಸರ್ ಮಹಿಳೆಯರಿಗೆ ಗರ್ಭ ಧರಿಸಲು ಸಮಸ್ಯೆಗಳನ್ನು ಉಂಟುಮಾಡುತ್ತದೆ. 
 

ಅಂಡಾಶಯದ ಕ್ಯಾನ್ಸರ್ ಲಕ್ಷಣಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ, ರೋಗಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಅಂಡಾಶಯದಲ್ಲಿನ ಯಾವುದೇ ರೀತಿಯ ಸಿಸ್ಟ್, ಹುಣ್ಣನ್ನು ನಿರ್ಲಕ್ಷಿಸಿದರೆಗೆಡ್ಡೆರೂಪವನ್ನು ಪಡೆಯುತ್ತದೆ. ಅಂಡಾಶಯ ಗರ್ಭ ಧರಿಸುವಲ್ಲಿ ಬಹಳ ಮುಖ್ಯಪಾತ್ರವಹಿಸುತ್ತದೆ.
undefined
ಅಂಡಾಣುಗಳನ್ನು ಒವೆರಿಯಲ್ಲಿಯೇ ಉತ್ಪಾದಿಸಲಾಗುತ್ತದೆ, ಮತ್ತು ಇದರಲ್ಲಿ ಪುರುಷರ ವೀರ್ಯ ಸೇರಿ ಮೊಟ್ಟೆಗಳನ್ನು ಫಲವತ್ತಾಗಿಸುತ್ತದೆ. ಮಹಿಳೆಯರಲ್ಲಿ ಕಂಡುಬರುವ ಮುಖ್ಯ ಸಂತಾನೋತ್ಪತ್ತಿ ಹಾರ್ಮೋನ್ ಈಸ್ಟ್ರೊಜೆನ್ ಸಹ ಇಲ್ಲಿ ಉತ್ಪತ್ತಿಯಾಗುತ್ತದೆ. ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿ ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಕಂಡುಹಿಡಿಯಲಾಗುತ್ತದೆ, ಇದು ಅಪಾಯಕಾರಿ.
undefined
ಹೊಟ್ಟೆಕೆಳ ಭಾಗದಲ್ಲಿ ಯಾವುದೇ ರೀತಿಯ ಅಸ್ವಸ್ಥತೆ ಅಥವಾ ನೋವು, ಊತ, ಪಿರಿಯಡ್ಸ್ ತೊಂದರೆ, ದೈಹಿಕ ಸಂಬಂಧವನ್ನು ಮಾಡಲು ಕಷ್ಟವಾಗಿದ್ದರೆ, ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ ಮತ್ತು ವೈದ್ಯರನ್ನು ಭೇಟಿ ಮಾಡಿ. ಅಂಡಾಶಯಕ್ಯಾನ್ಸರ್ ತಪ್ಪಿಸಲು, ಈ ವಿಷಯಗಳನ್ನು ಜೀವನ ಶೈಲಿಯಲ್ಲಿ ಸೇರಿಸಿಕೊಳ್ಳಬೇಕು
undefined
ಅಂಡಾಶಯದ ಕ್ಯಾನ್ಸರ್ ಲಕ್ಷಣಗಳುಆರಂಭದಲ್ಲಿ ಅಂಡಾಶಯದ ಕ್ಯಾನ್ಸರ್ ರೋಗ ಲಕ್ಷಣಗಳನ್ನು ತಿಳಿದುಕೊಳ್ಳುವುದು ಕಷ್ಟ. ಕೆಲವು ಮಹಿಳೆಯರಲ್ಲಿ, ಮೂರನೇ ಅಥವಾ ಮುಂದುವರಿದ ಹಂತದಲ್ಲಿ ಸಹ, ಅದರ ಲಕ್ಷಣಗಳು ಪತ್ತೆಯಾಗುವುದಿಲ್ಲ.
undefined
ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ತೂಕ ಇಳಿಯುವಿಕೆ ಅಥವಾ ತೂಕ ಹೆಚ್ಚಾಗುವುದು, ಆಯಾಸ, ಬೆನ್ನು ಮತ್ತು ಸೊಂಟದ ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ಹೊಟ್ಟೆಯ ತೊಂದರೆ, ಮಲಬದ್ಧತೆ, ಲೈಂಗಿಕ ಸಂಭೋಗದ ಸಮಯದಲ್ಲಿ ನೋವು, ಅನಿಯಮಿತ ಪಿರಿಯಡ್ಸ್ , ಗರ್ಭಧಾರಣೆಯ ತೊಂದರೆ, ಶ್ರೋಣಿನೋವು, ಯೋನಿ ರಕ್ತಸ್ರಾವ ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ.
undefined
ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಕ್ರಮಗಳುಮಹಿಳೆಯರಲ್ಲಿ, ಅಧಿಕ ತೂಕ ಅಥವಾ ಅತಿಯಾದ ತೂಕ ನಷ್ಟವು ಅಂಡಾಶಯದ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆಆರೋಗ್ಯವಾಗಿರಲು ಮತ್ತು ಅನೇಕ ರೋಗಗಳಿಂದ ತಡೆಗಟ್ಟಲು ತೂಕ ನಿಯಂತ್ರಣವೂ ಅಗತ್ಯ.
undefined
ವ್ಯಾಯಾಮ, ಯೋಗ ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಇಡೀ ದಿನ ಕುಳಿತು ಕೆಲಸ ಮಾಡುತ್ತಿದ್ದರೆ, ಅದು ಆರೋಗ್ಯ ಮತ್ತು ದೇಹದ ಪ್ರಮುಖ ಭಾಗಗಳಿಗೆ ಒಳ್ಳೆಯದಲ್ಲ. ಹೆಚ್ಚು ದೈಹಿಕವಾಗಿ ಸಕ್ರಿಯರಾಗಿದ್ದೀರಿ, ಆರೋಗ್ಯವಾಗಿರುತ್ತೀರಿ.
undefined
ವಾರಕ್ಕೆ ಕನಿಷ್ಠ ಮೂರು ದಿನಗಳಾದರೂ ಜಾಗಿಂಗ್ ಮಾಡಲು ಹೋಗಬೇಕು. ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ, 30 ನಿಮಿಷಗಳ ಯೋಗ ಮಾಡಿ, ಮನೆಯಲ್ಲಿ ವ್ಯಾಯಾಮ ಮಾಡಿ. ಈಜಿ, ಸ್ಕಿಪ್ಪಿಂಗ್ ಮಾಡಿ. ದೀರ್ಘಾವಧಿಯವರೆಗೆ ಆರೋಗ್ಯವಾಗಿಡುವ ಕೆಲವು ದೈಹಿಕ ಚಟುವಟಿಕೆಗಳು ಇವು.
undefined
ಆಹಾರದಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ವಿಷಯಗಳನ್ನು ಸೇರಿಸಿಯಾವುದೇ ಕಾಯಿಲೆ ಉಂಟಾಗಲು ಒಂದು ಕಾರಣವೆಂದರೆ ತಪ್ಪಾದ ಆಹಾರ. ತಪ್ಪಾದ ಡಯಟ್ ಸಹ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಋತುಚಕ್ರ ಅನಿಯಮಿತವಾಗುತ್ತವೆ.
undefined
ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು, ಜಂಕ್ ಫುಡ್‌ನಿಂದ ದೂರವಿರಿ. ಆರೋಗ್ಯಕರ, ಪೌಷ್ಟಿಕ ವಸ್ತುಗಳನ್ನು ಸೇವಿಸಬೇಕು. ಹಣ್ಣುಗಳು, ಹಸಿರು ತರಕಾರಿಗಳು, ಮಸೂರ, ಧಾನ್ಯಗಳು, ಕೋಳಿ, ಹಾಲು, ಮೊಸರು, ಪನೀರ್, ನಟ್ಸ್, ಬೀನ್ಸ್ ಮುಂತಾದವುಗಳನ್ನು ಸೇವಿಸಿ.
undefined
click me!