ಬೇವು(Neem), ಹಾಗಲಕಾಯಿ ಮತ್ತು ನೇರಳೆ ಹಣ್ಣು ಎಲ್ಲವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇತ್ತೀಚಿಗೆ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವನೆ ಸಾಕಷ್ಟು ಹೆಚ್ಚಾಗಿದೆ. ವೈದ್ಯರು ಸಹ ಇದನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಇದು ಫೈಟೋನ್ಯೂಟ್ರಿಯಂಟ್, ಡಯಟ್ ಫೈಬರ್ ಮತ್ತು ಇತರ ಅನೇಕ ಮಿನರಲ್ಸ್ ಮತ್ತು ವಿಟಮಿನ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ಸ್‌ಗಳಿಂದ ಸಮೃದ್ಧವಾಗಿದೆ, ಇವು ಇದನ್ನು ಸಾಕಷ್ಟು ಆರೋಗ್ಯಕರವಾಗಿಸುತ್ತೆ . ಜನರು ಮಾರ್ಕೆಟ್‌ನಲ್ಲಿ ಕಂಡು ಬರುವ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವಿಸುತ್ತಾರೆ, ಆದರೆ ಮನೆಯಲ್ಲೇ ಎಲ್ಲಾ ಮೂರು ಪದಾರ್ಥಗಳ ಜ್ಯೂಸ್ ಮಾಡೋ ಮೂಲಕ ನೀವು ಅದನ್ನು ಸೇವಿಸಬಹುದು.