ಶ್ವಾಸಕೋಶ ಆರೋಗ್ಯಕರವಾಗಿರಲು ನೀವೇನ್ ಮಾಡ್ಬೇಕು ಗೊತ್ತಾ?

Published : Aug 13, 2022, 05:57 PM IST

ಶ್ವಾಸಕೋಶದ ಸಮಸ್ಯೆ ಇತ್ತಿಚಿನ ದಿನಗಳಲ್ಲಿ ತುಂಬಾನೆ ಹೆಚ್ಚಾಗಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಈ ಸಮಸ್ಯೆಗೆ ಜನರು ಹೆಚ್ಚಾಗಿ ಬಾಧಿತರಾಗುತ್ತಿದ್ದಾರೆ. ಶ್ವಾಸಕೋಶದ ಆರೋಗ್ಯ ಉತ್ತಮವಾಗಿರಲು ನಾವು ಉತ್ತಮ ಆಹಾರ, ಅಭ್ಯಾಸಗಳನ್ನು ಪಾಲಿಸಬೇಕಾಗುತ್ತೆ. ಹಾಗಿದ್ರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯವಾಗುತ್ತೆ. ಶ್ವಾಸಕೋಶದ ಆರೋಗ್ಯಕ್ಕೆ ಏನು ಮಾಡಬೇಕು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. 

PREV
17
ಶ್ವಾಸಕೋಶ ಆರೋಗ್ಯಕರವಾಗಿರಲು ನೀವೇನ್ ಮಾಡ್ಬೇಕು ಗೊತ್ತಾ?

ಕಳಪೆ ಜೀವನಶೈಲಿ, ಸರಿಯಾದ ಆರೋಗ್ಯಕರ ಆಹಾರ ತಿನ್ನದೇ ಇರೋದು ಮತ್ತು ಕಲುಷಿತ ಗಾಳಿಯು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಸರಳವಾಗಿ ಹೇಳೋದಾದ್ರೆ, ಶ್ವಾಸಕೋಶದ ಸಮಸ್ಯೆಯಿಂದಾಗಿ ಉಸಿರಾಟದ ತೊಂದರೆ  (breathing problem) ಕಾಣಿಸಿಕೊಳ್ಳುತ್ತೆ. ತಜ್ಞರ ಪ್ರಕಾರ, ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಕರೋನವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದಕ್ಕಾಗಿ, ಶ್ವಾಸಕೋಶವನ್ನು ಆರೋಗ್ಯಕರವಾಗಿಡುವುದು ಬಹಳ ಮುಖ್ಯ. ನೀವು ಸಹ ಶ್ವಾಸಕೋಶವನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಬಯಸಿದರೆ, ನೀವೇನು ಮಾಡಬೇಕು ಅನ್ನೋದು ಇಲ್ಲಿದೆ.

27

ಪ್ರತಿದಿನ ಪ್ರಾಣಾಯಾಮ ಮಾಡಿ
ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು, ಪ್ರತಿದಿನ ಪ್ರಾಣಾಯಾಮ ಮಾಡಿ. ಇದು ಶ್ವಾಸಕೋಶವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸುತ್ತದೆ. ಅಲ್ಲದೆ, ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಪ್ರತಿದಿನ ಒಂದು ಅರ್ಧ ಗಂಟೆ ಪ್ರಾಣಾಯಾಮ ಮಾಡಿದ್ರೆ ಶ್ವಾಸಕೋಶದ ಸಮಸ್ಯೆ ಕಾಡೋದಿಲ್ಲ.
 

37

ಎಣ್ಣೆಗಳ ಪ್ರಯೋಗ
ಹೌದು ಎಣ್ಣೆಗಳನ್ನು ಬಳಸಿ ಕೂಡ ನೀವು ಶ್ವಾಸಕೋಶದ ಆರೋಗ್ಯ ಕಾಪಾಡಬಹುದು. ಅದಕ್ಕಾಗಿ ನೀವು ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಕೆಲವು ಹನಿ ಸಾಸಿವೆ ಎಣ್ಣೆಯನ್ನು ಮೂಗಿನಲ್ಲಿ ಇರಿಸಿ. ಇದು ಶ್ವಾಸಕೋಶವನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ.

47

ಶುಂಠಿ ಚಹಾ 
ಶುಂಠಿ ಪ್ರೋಟೀನ್, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಬೀಟಾ ಕ್ಯಾರೋಟಿನ್, ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ವಿಟಮಿನ್ ಬಿ 3 ಮತ್ತು ಕೋಲಿನ್ ಹೀಗೆ ಹಲವು ಪೋಷಕಾಂಶಗಳನ್ನು ಹೊಂದಿರುತ್ತೆ. ಶುಂಠಿಯು ಶ್ವಾಸಕೋಶಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ. ಇದಕ್ಕಾಗಿ, ಶ್ವಾಸಕೋಶವನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಶುಂಠಿ ಚಹಾ ಸೇವಿಸಿ. ಈ ಚಹಾದ (ginger tea) ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

57

ಮುಲೇಟಿ/ ಜೇಷ್ಟ ಮಧು

ಇದು ಮಧುಮೇಹ ನಿವಾರಿಸುವ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ಶ್ವಾಸಕೋಶವನ್ನು ಆರೋಗ್ಯಕರವಾಗಿಸುತ್ತದೆ, ಜೊತೆಗೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ. ಇದಕ್ಕಾಗಿ, ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲಿನಲ್ಲಿ ಒಂದು ಟೀಸ್ಪೂನ್ ಮುಲೇಥಿ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿ.

67

ದಾಲ್ಚಿನ್ನಿ ಚಹಾ ಕುಡಿಯಿರಿ
ದಾಲ್ಚಿನ್ನಿಯಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳಿವೆ, ಇದು ಅನೇಕ ರೋಗಗಳನ್ನು ನಿವಾರಿಸುತ್ತೆ. ದಾಲ್ಚಿನ್ನಿಯ ಸೇವನೆಯು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಹಾರ ನೀಡುತ್ತೆ. ಇದಕ್ಕಾಗಿ, ನೀವು ಪ್ರತಿದಿನ ದಾಲ್ಚಿನ್ನಿ ಚಹಾ, ದಾಲ್ಚಿನ್ನಿ ಭರಿತ ಹಾಲನ್ನು ಸಹ ಸೇವಿಸಬಹುದು. ಇದರಿಂದ ಶ್ವಾಸಕೋಶಗಳು ಆರೊಗ್ಯಕರ ಮತ್ತು ಸ್ವಚ್ಚವಾಗಿರುತ್ತೆ.

77

ಸ್ಮೋಕ್ ಮಾಡಲೇಬೇಡಿ 
ಸ್ಮೋಕ್ ಮಾಡೋದು ಆರೋಗ್ಯಕ್ಕೆ ಎಷ್ಟೊಂದು ಹಾನಿಕಾರಕ ಅನ್ನೋದು ನಿಮಗೆ ಗೊತ್ತೆ ಇದೆ. ಅದರಲ್ಲೂ ಸ್ಮೋಕ್ ಶ್ವಾಸಕೋಶಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತೆ. ಆದುದರಿಂದ ಉತ್ತಮ ಶ್ವಾಸಕೋಶದ ಆರೋಗ್ಯಕ್ಕಾಗಿ ನೀವು ಸ್ಮೋಕ್ ಮಾಡೋದನ್ನು ಬಿಡೋದು ಉತ್ತಮ.

Read more Photos on
click me!

Recommended Stories