Egg Benefits : ಚಳಿಗಾಲದಲ್ಲಿ ಮೊಟ್ಟೆ ತಿನ್ನೊದ್ರಿಂದ ಆರೋಗ್ಯಕ್ಕೆ ಲಾಭ

First Published | Dec 10, 2021, 4:41 PM IST

ಮೊಟ್ಟೆ 1 ಪ್ರಯೋಜನಗಳು ಅನೇಕ ಅನ್ನೋದು ನಿಮಗೆ ಗೊತ್ತೇ ಇದೆ. ಚಳಿಗಾಲದಲ್ಲಿ ಪ್ರತಿದಿನ ಬೇಯಿಸಿದ ಮೊಟ್ಟೆಗಳನ್ನು (boiled egg) ತಿನ್ನಿ, ಇದರಿಂದ  ಅನೇಕ ರೋಗಗಳು ದೂರ ಉಳಿಯುತ್ತವೆ. ಹೌದು ಚಳಿಗಾಲಕ್ಕೆ ಮೊಟ್ಟೆ ಬೆಸ್ಟ್. ಅದರಿಂದ ಉಂಟಾಗುವ ಅದ್ಭುತ ಪ್ರಯೋಜನಗಳನ್ನು ಇಲ್ಲಿ ನೋಡಿ 
 

ಇಂದು ನಾವು ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಮೊಟ್ಟೆಗಳು ಮಕ್ಕಳಿಂದ ಹಿಡಿದು ಯುವಕರು ಮತ್ತು ವೃದ್ಧರವರೆಗೆ ತಿನ್ನಲು ಇಷ್ಟಪಡುವಂತಹ ಆಹಾರಗಳಾಗಿವೆ. ದಿನಕ್ಕೊಂದು ಮೊಟ್ಟೆ(Egg) ತುಂಬುವುದು ಹೊಟ್ಟೆ, ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ. 

ಚಳಿಗಾಲದಲ್ಲಿ ಸೀಸನಲ್  ರೋಗಗಳನ್ನು (seasonal problems) ತಡೆಗಟ್ಟಲು ಮೊಟ್ಟೆಗಳು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪೋಷಕಾಂಶ ಭರಿತ ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಉತ್ತಮ ಆರೋಗ್ಯಕ್ಕೆ ಇದು ಅತ್ಯಗತ್ಯ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. 
 

Latest Videos


ಮಕ್ಕಳ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಮೊಟ್ಟೆಗಳು 
ಮೊಟ್ಟೆಗಳಲ್ಲಿ ಕೋಲಿನ್ ಅಂಶ ಕಂಡುಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕುದಿಸಿ ತಿಂದರೆ ಅದರಲ್ಲಿ ಇರುವ ವಿಟಮಿನ್ ಗಳು (vitamins) ಮಿದುಳುಗಳನ್ನು ಸಕ್ರಿಯಗೊಳಿಸಿ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಮಕ್ಕಳು ಪ್ರತಿದಿನ ಬೇಯಿಸಿದ ಮೊಟ್ಟೆಗಳನ್ನು ಸೇವಿಸಿದರೆ ವೇಗವಾಗಿ ಸ್ಮರಣೆ ಶಕ್ತಿಯನ್ನು ಹೊಂದಿರುತ್ತಾರೆ. 

ಮೊಟ್ಟೆಗಳಲ್ಲಿ ಕಂಡುಬರುವ ಪೋಷಕಾಂಶಗಳು 
ಮೊಟ್ಟೆಗಳಲ್ಲಿ ಕಂಡುಬರುವ ಅಂಶಗಳ ವಿಷಯಕ್ಕೆ ಬಂದಾಗ, ಇದು ಸಾಕಷ್ಟು ಪ್ರೋಟೀನ್, ಕಬ್ಬಿಣ, ವಿಟಮಿನ್ ಎ, ಬಿ6, ಬಿ12, ಫೋಲೇಟ್, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಂ ಅಗತ್ಯ ಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು (ಲಿನೋಲಿಕ್, ಓಲಿಕ್ ಆಮ್ಲ) ಹೊಂದಿರುತ್ತದೆ, ಇದು ವಯಸ್ಕರಿಂದ ಮಕ್ಕಳಿಗೆ ಆರೋಗ್ಯಕ್ಕೆ (children health) ಬಹಳ ಮುಖ್ಯವಾಗಿದೆ.

ಆಹಾರ ತಜ್ಞರು ಏನು ಹೇಳುತ್ತಾರೆ
ಆಹಾರ ತಜ್ಞೆ (food expert) ಡಾ.ರಂಜನಾ ಸಿಂಗ್ ಪ್ರಕಾರ ಬೇಯಿಸಿದ ಮೊಟ್ಟೆಯಲ್ಲಿ ಪ್ರಮುಖ ಪೋಷಕಾಂಶಗಳು ಅಧಿಕವಾಗಿವೆ. ಇವುಗಳಲ್ಲಿ ವಿಟಮಿನ್ ಎ ಸೇರಿದೆ, ಇದು ನಮ್ಮ ಚರ್ಮ ಮತ್ತು ಕಣ್ಣಿನ ದೃಷ್ಟಿಗೆ ಒಳ್ಳೆಯದು. ಆದುದರಿಂದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೊಟ್ಟೆ ಸೇವಿಸಬೇಕು. 
 

ಬೇಯಿಸಿದ ಮೊಟ್ಟೆ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ, ಇದು ಮೂಳೆ (Bone) ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಬಿ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ ಮತ್ತು ಇದರಿಂದಾಗಿ ಉತ್ತಮ ಮಟ್ಟದ ಹಿಮೋಗ್ಲೋಬಿನ್ ಗೆ ಕೊಡುಗೆ ನೀಡುತ್ತದೆ.

ಮೊಟ್ಟೆಗಳನ್ನು ತಿನ್ನುವ ಪ್ರಯೋಜನಗಳು 
ನೀವು ತೂಕವನ್ನು ನಿಯಂತ್ರಿಸಲು (weight control)ಬಯಸಿದರೆ, ಖಂಡಿತವಾಗಿಯೂ ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿ. 
ಮೊಟ್ಟೆಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ, ಮೊಟ್ಟೆಗಳನ್ನು ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗುತ್ತದೆ. 

ಮೊಟ್ಟೆಗಳನ್ನು ತಿನ್ನುವುದು ಕಣ್ಣುಗಳಿಗೆ(Eyes) ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಎರಡು ಉತ್ಕರ್ಷಣ ನಿರೋಧಕಗಳಾದ ಲ್ಯೂಟಿನ್  ಮತ್ತು ಝೈಕ್ಸಾಂಥಿನ್ ಅನ್ನು ಹೊಂದಿರುತ್ತದೆ, ಇದು ಕಣ್ಣಿನ ಸಂಬಂಧಿತ ರೋಗಮಾಕ್ಯುಲರ್ ಅವನತಿ ಮತ್ತು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. 

ಆರೋಗ್ಯ ತಜ್ಞರು ಹೇಳುವಂತೆ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (breast cancer) ಸಾಧ್ಯತೆ ಕಡಿಮೆಯಾಗುತ್ತದೆ. 
ಶಕ್ತಿ ಭರಿತ ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.

ಬೇಯಿಸಿದ ಮೊಟ್ಟೆಗಳನ್ನು ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ? ಆರೋಗ್ಯಕ್ಕೆ ಹೆಚ್ಚಿನ ಪರಿಣಾಮ ಬೀರಬೇಕೆಂದರೆ ಮೊಟ್ಟೆಯನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ಬೆಳಿಗ್ಗೆ ಉಪಾಹಾರಕ್ಕಾಗಿ ಮೊಟ್ಟೆಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. 

click me!