ಆನ್‌ಲೈನ್‌ ಕ್ಲಾಸ್‌ ಎಂದು ನೀಲಿ ಚಿತ್ರ ವೀಕ್ಷಣೆ: 12ರ ಬಾಲಕನಿಂದ ತಂಗಿಯ ರೇಪ್!

First Published Mar 20, 2021, 4:22 PM IST

ಕೊರೋನಾ ವಿದ್ಯಾರ್ಥಿಗಳ ಮೇಲೆ ಅತೀ ಹೆಚ್ಚು ಪರಿಣಾಮ ಬೀರಿದೆ. ಪ್ರತಿನಿತ್ಯ ಶಾಲೆಗೆ ಹೋಗಲಾಗ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಆನ್‌ಲೈನ್‌ ತರಗತಿಯೇ ಶಿಕ್ಷಣ ಪಡೆಯಲಿರುವ ಏಕೈಕ ದಾರಿ. ಆನ್‌ಲೈನ್‌ ಮೂಲಕ ನಡೆಯುವ ಈ ತರಗತಿಗಳು ಲಾಭದಾಯಕ ಕೂಡಾ ಹೌದು. ಆದರೆ ಇದೇ ವೇಳೆ ಇದು ಅಪಾಯವಾಗಿಯೂ ಪರಿಣಮಿಸುತ್ತಿದೆ.  ರಾಜಸ್ಥಾನದಲ್ಲೂ ಇಂತಹುದೇ ಶಾಕಿಂಗ್ ಘಟನೆ ನಡೆದಿದ್ದು, ಇದು ಪೋಚಕರನ್ನು ಚಿಂತೆಗೀಡು ಮಾಡಿದೆ. ಇಲ್ಲೊಬ್ಬ ಹನ್ನೆರಡು ವರ್ಷದ ಬಾಲಕ ಪೋರ್ನ್ ವಿಡಿಯೋ ನೋಡಿ ಆರು ವರ್ಷದ ತಂಗಿಯನ್ನು ಅತ್ಯಾಚಾರಗೈದಿದ್ದಾನೆ. ಇದು ಪೋಷಕರನ್ನು ಮತ್ತಷ್ಟು ಎಚ್ಚರವಾಗಿರುವಂತೆ ಮಾಡಿದೆ.

ಪಾಠದ ಬಳಿಕ ಅಶ್ಲೀಲ ವಿಡಿಯೋ ವೀಕ್ಷಣೆ:ಇದು ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ. ಇಲ್ಲಿನ ಜಯಸೀಮಹ ನಗರದ ಬಾಲಕ ನಾಲ್ಕು ದಿನಗಳ ಹಿಂದೆ ಈ ಕುಕೃತ್ಯವೆಸಗಿದ್ದಾನೆ. ಬಾಲಕನ ಪೋಷಕರು ಮಗು ಶಿಕ್ಷಣ ಪಡೆಯಲಿ ಎಂದು ಮೊಬೈಲ್ ಫೋನ್ ಕೊಡಿಸಿದ್ದರು. ಆದರೆ ಬಾಲಕ ಮಾತ್ರ ಪಾಠದ ಬಳಿಕ ಪೋರ್ನ್ ವಿಡಿಯೋ ನೋಡುತ್ತಿದ್ದ. ಆತ ಹೊರಗೆ ಹೋಗಿ ಆಡುವುದು, ಗೆಳೆಯರೊಂದಿಗೆ ಮಾತನಾಡುವುದು ಎಲ್ಲವನ್ನೂ ಬಿಟ್ಟಿದ್ದ. ಹೆತ್ತವರು ಪ್ರಶ್ನಿಸಿದಾಗ ತಾನು ಓದುತ್ತಿದ್ದೇನೆ ಎನ್ನುತ್ತಿದ್ದ.
undefined
ಮಧ್ಯರಾತ್ರಿ ಪೋರ್ನ್ ವಿಡಿಯೋ ವೀಕ್ಷಣೆ:ಆನ್‌ಲೈನ್ ತರಗತಿ ಬಳಿಕ ಪೋರ್ನ್ ವಿಡಿಯೋ ನೋಡುತ್ತಿದ್ದ ಬಾಲಕನ ಮನಸ್ಸು ಕೆಡಲಾರಂಭಿಸಿದೆ. ಹೀಗಾಗಿ ದಿನಗಳೆಯುತ್ತಿದ್ದಂತೆಯೇ ಆತ ಹೆತ್ತವರು ಮಲಗಿದ ಬಳಿಕ ತಡರಾತ್ರಿ ಎದ್ದು ನೀಲಿಚಿತ್ರ ವೀಕ್ಷಿಸಲಾರಂಭಿಸಿದ. ಇದರ ಪರಿಣಾಮ ಎಂಬಂತೆ ಈತ ಇಷ್ಟು ಸಣ್ಣ ವಯಸ್ಸಿಗೆ ತನ್ನ ತಂಗಿಯನ್ನೇ ಅತ್ಯಾಚಾರಗೈದಿದ್ದಾನೆ.
undefined
ಅಶ್ಲೀಲ ವಿಡಿಯೋ ಸಹವಾಸದಿಂದ ಅಪರಾಧಿಯಾದ ಬಾಲಕಪೊಲೀಸರು ಶುಕ್ರವಾರ ಬಾಲಕನನ್ನು ಬಂಧಿಸಿ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ತನಿಖೆ ವೇಳೆ ಈ ಬಾಲಕ ಆರನೇ ತರಗತಿಯಲ್ಲಿ ಓದುತ್ತಿದ್ದಾನೆಂಬ ವಿಚಾರ ತಿಳಿದು ಬಂದಿದೆ. ಆತ ಕಳೆದೊಂದು ವರ್ಷದಿಂದ ಶಾಲೆಗೆ ಹೋಗುತ್ತಿರಲಿಲ್ಲ. ಆನ್‌ಲೈನ್ ತರಗತಿ ವೇಳೆ ಆತನಿಗೆ ಪೋರ್ನ್‌ಸೈಟ್‌ ಲಿಂಕ್ ಸಿಕ್ಕಿದೆ. ಇದನ್ನಾತ ತಪ್ಪಿ ಕ್ಲಿಕ್ ಮಾಡಿದ್ದಾನೆ. ಇದಾದ ಬಳಿಕ ಇದನ್ನಾತ ಪ್ರತಿದಿನ ತಪ್ಪದೇ ನೊಡಲಾರಂಭಿಸಿದ್ದಾನೆ. ಅಂತಿಮವಾಗಿ ತಂಗಿಯನ್ನೇ ಅತ್ಯಾಚಾರಗೈದಿದ್ದಾನೆ.
undefined
ಪೋಷಕರೇ ಎಚ್ಚರಪೋಷಕರೇ ಮಕ್ಕಳಿಗೆ ಮೊಬೈಲ್ ನೀಡುವಾಗ ಎಲ್ಲಾ ಜಾಹೀರಾತುಗಳನ್ನು ಡಿಲೀಟ್ ಮಾಡಿ. ಜೂಮ್‌ ಸೇರಿ ಎಲ್ಲಾ ಆಪ್‌ಗಳಲ್ಲಿ ಅಗತ್ಯವಿಲ್ಲದೇ ಕ್ಯಾಮೆರಾ ಆನ್‌ ಮಾಡಬೇಡಿ. ಮಕ್ಕಳು ಆನ್‌ಲೈನ್‌ ತರಗತಿಗೆ ಬಳಸುವ ಫೋನ್‌ನಲ್ಲಿ ಆಂಟಿವೈರಸ್‌ ತಪ್ಪದೇ ಇನ್ಸ್ಟಾಲ್‌ ಮಾಡಿ. ಮಕ್ಕಳ ಓದಿನ ವೆಳೆ ಕಾನ್ಫರೆನ್ಸ್‌ ಮೂಲಕ ಹೆತ್ತವರೂ ಜೊತೆಗಿರಿ.
undefined
ಈ ಆಪ್‌ಗಳ ಅಹಾಯ ಪಡೆಯಿರಿಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಮಕ್ಕಳಿಗೆ ಕೊಟ್ಟ ಹಿಸ್ಟರಿ ಚೆಕ್ ಮಾಡಿ. ಇನ್ನು ಅನೇಕ ಬಾರಿ ಮಕ್ಕಳು ಇಂತಹ ಅಶ್ಲೀಲ ವಿಡಿಯೋ ನೋಡಿ ಮಕ್ಕಳು ಹಿಸ್ಟ್ರಿ ಡಿಲೀಟ್ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ನೀವು Covenant Eyes, Kids Place – Parental Control, Abeona – Parental Control & Device Monitor ಗಳ ಸಹಾಯ ಪಡೆಯಬಹುದು.
undefined
click me!