ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಕ್ಕ ಉತ್ತರ ನೀಡಿದ್ದ ಸಿದ್ದಾರ್ಥ್ ಶುಕ್ಲಾ!

First Published Sep 2, 2021, 6:50 PM IST
  • ಬಿಗ್‌ಬಾಸ್ ಖ್ಯಾತಿಯ, ನಟ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಕಣ್ಣೀರಿಟ್ಟ ಬಾಲಿವುಡ್
  • ಹೃದಯಾಘಾತದಿಂದ ಸಿದ್ಧಾರ್ಥ್ ಶುಕ್ಲಾ ನಿಧನ, ಹಳೆ ಘಟನೆ ಮೆಲುಕು ಹಾಕಿದ ಸ್ಟಾರ್ಸ್
  • ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಸಿದ್ಧಾರ್ಥ್, ಪಾಕ್ ಪ್ರಧಾನಿಗೆ ಇಮ್ರಾನ್‌ಗೆ ತಿರುಗೇಟು

ನಟ, ಬಿಗ್‌ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಬಾಲಿವುಡ್ ಕ್ಷೇತ್ರಕ್ಕೆ ಶಾಕ್ ನೀಡಿದೆ. 40ರ ಹರೆಯದ ಚುರುಕಿನ ನಟ ಸಿದ್ಧಾರ್ಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೀಗ ಎಲ್ಲೆಲ್ಲೂ ಸಿದ್ಧಾರ್ಥ್ ಸಾವಿನ ಚರ್ಚೆಯಾಗುತ್ತಿದೆ. ಹೃದಯಾಘಾತವೇ ಅನ್ನೋದನ್ನು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಸಿದ್ಧಾರ್ಥ್ ಹಳೆ ಘಟನೆಗಳನ್ನು ಮೆಲುಕು ಹಾಕಲಾಗುತ್ತಿದೆ. 

ಸಿದ್ಧಾರ್ಥ್ ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಇಷ್ಟೇ ಅಲ್ಲ ಪ್ರಸಕ್ತ ವಿದ್ಯಮಾನಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇನ್ನು ಅಭಿಮಾನಿಗಳ ಪ್ರಶ್ನೆಗಳಿಗೂ ಸ್ಪಂದಿಸುತ್ತಿದ್ದರು. ಹೀಗೆ ಪಾಕಿಸ್ತಾನ ಪ್ರಧಾನಿ ಅತ್ಯಾಚಾರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಅಷ್ಟೇ ಖಾರವಾಗಿ ತಕ್ಕ ಪ್ರತಿಕ್ರಿಯೆ ನೀಡಿ ಗಮನಸೆಳೆದಿದ್ದರು.

ಪಾಕಿಸ್ತಾನದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಮಹಿಳೆಯ ಉಡುಪುಗಳೆ ಕಾರಣ. ತುಂಡುಗೆ, ಮೈಮಾಟ ಪ್ರದರ್ಶನದ ಉಡುಗೆ ನೋಡಿದ ಎಲ್ಲಾ ಪುರುಷರಲ್ಲಿ ತಮ್ಮ ಕಾಮಾಭಿಲಾಷೆ ನಿಯಂತ್ರಿಸುವ ಶಕ್ತಿ ಇರುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನದ ಮಹಿಳೆಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಪುರಷರಲ್ಲಿ ಕಾಮ ನಿಯಂತ್ರಿಸುವ ಇಚ್ಚಾಶಕ್ತಿ ಇಲ್ಲದಿದ್ದರೆ ಪಾಕಿಸ್ತಾನದಲ್ಲಿ ಅತೀ ದೊಡ್ಡ ಅಪಾಯ ಎದುರಾಗಲಿದೆ. ತಮ್ಮನ್ನು ತಾವು ನಿಯಂತ್ರಿಸಲಾಗದ ನಾಯಕನಿದ್ದರೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ಧಾರ್ಥ್ ಶುಕ್ಲಾ ಪ್ರತಿಕ್ರಿಯೆ ನೀಡಿದ್ದರು. ಶುಕ್ಲಾ ಪ್ರತಿಕ್ರಿಯೆ ಭಾರಿ ಸಂಚಲನ ಸೃಷ್ಟಿಸಿತ್ತು.

ಈ ಕುರಿತು ಪಾಕಿಸ್ತಾನ ನಾಗರೀಕರ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ. ಇಮ್ರಾನ್ ಖಾನ್ ಈ ರೀತಿ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದ. ಪಾಕ್ ಪ್ರಜೆ ಪ್ರತಿಕ್ರಿಯೆಗ ಸಿದ್ಧಾರ್ಥ್ ಶುಕ್ಲಾ ಮತ್ತೆ ಪ್ರತಿಕ್ರಿಯೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪಾಕಿಸ್ತಾನ ಪ್ರಧಾನಿ ಆ ರೀತಿ ಹೇಳಿಕೆ ನೀಡಿಲ್ಲ ಎಂದರೆ ಉತ್ತಮ. ಈ ರೀತಿ ದೇಶದ ಹಾಗೂ ಪ್ರಧಾನಿ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವಮಾನ ಮಾಡುವ ರೀತಿ ಸುದ್ದಿ ಪ್ರಕಟಿಸಿದ ಮಾಧ್ಯಮದ ವಿರುದ್ಧ ಕಾನೂನು ಹೋರಾಟ ಮಾಡುವುದು ಉತ್ತಮ. ಕಾರಣ ಇದು ಅತ್ಯಂತ ಗಂಭೀರ ವಿಷಯ ಎಂದು ಸಿದ್ದಾರ್ಥ್ ಶುಕ್ಲಾ ಟ್ವೀಟ್ ಮಾಡಿದ್ದರು.

ರಿಯಾಲಿ ಶೋಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಿದ್ಧಾರ್ಥ್ ಶುಕ್ಲಾ  ಮತ್ತೆ ಮನರಂಜನೆ ನೀಡುತ್ತಿದ್ದರು. ದಿಢೀರ್ ಸಾವಿನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದರ ಹಿಂದಿನ ಅಸಲಿ ಕಾರಣವನ್ನು ಕೇಳಿದ್ದಾರೆ. ಇದರೊಂದಿಗೆ ಸಿದ್ಧಾರ್ಥ್ ಸಾವು ಹೇಗಾಯ್ತು ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಸಿದ್ಧಾರ್ಥ್ ಹೃದಯಾಘಾತವಾಗಿದೆ ಅನ್ನೋ ವಾದ ಒಂದು ಕಡೆ, ಮತ್ತೊಂದೆಡೆ ಆಸ್ಪತ್ರೆ ಸಾಗಿಸೋ ಮುನ್ನವೇ ಸಿದ್ಧಾರ್ಥ್ ಸಾವನ್ನಪ್ಪಿದ್ದಾರೆ ಅನ್ನೋ ಮಾತು. ಮತ್ತೆ ಕೆಲ ಅಭಿಮಾನಿಗಳು ಕೂಪರ್ ಆಸ್ಪತ್ರೆಯ ಅಕ್ರಮ ಕೂಡ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

click me!