ಗಂಡ, ಮಗಳ ಜೊತೆ ಬೀಚ್‌ನಲ್ಲಿ 'ಕಬ್ಜ' ಸುಂದರಿ; ಸ್ವಿಮ್‌ಸೂಟ್‌ನಲ್ಲಿ ಮಿಂಚಿದ ಶ್ರಿಯಾ ಹಾಟ್ ಫೋಟೋ ವೈರಲ್

First Published May 11, 2022, 3:45 PM IST

ಇತ್ತೀಚಿಗಷ್ಟೆ ಕಬ್ಜ ಸಿನಿಮಾ ಮೂಲಕ ಸುದ್ದಿಯಲ್ಲಿದ್ದ ಶ್ರಿಯಾ ಇದೀಗ ಬೀಚ್ ಫೋಟೋಗಳನ್ನು ಶೇರ್ ಮಾಡಿ ಸದ್ದು ಮಾಡುತ್ತಿದ್ದಾರೆ. ಪತಿ ಮತ್ತು ಮಗಳ ಜೊತೆ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಶ್ರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಹುಭಾಷಾ ನಟಿ ಶ್ರಿಯಾ ಶರಣ್ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಶ್ರಿಯಾ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಮೂಲಕ ಶ್ರಿಯಾ ಕನ್ನಡದಲ್ಲಿ ಮಿಂಚುತ್ತಿದ್ದಾರೆ.

ಇತ್ತೀಚಿಗಷ್ಟೆ ಕಬ್ಜ ಸಿನಿಮಾ ಮೂಲಕ ಸುದ್ದಿಯಲ್ಲಿದ್ದ ಶ್ರಿಯಾ ಇದೀಗ ಬೀಚ್ ಫೋಟೋಗಳನ್ನು ಶೇರ್ ಮಾಡಿ ಸದ್ದು ಮಾಡುತ್ತಿದ್ದಾರೆ. ಪತಿ ಮತ್ತು ಮಗಳ ಜೊತೆ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಶ್ರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಗೋವಾ ಬೀಚ್ ನಲ್ಲಿರುವ ಶ್ರಿಯಾ ಮತ್ತು ಫ್ಯಾಮಿಲಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪತಿ ಆಂಡ್ರೋ ಕೋಸ್ಚೇವ್ ಮತ್ತು ಮಗಳು ರಾಧಾ ಜೊತೆ ಕಬ್ಜ ಸುಂದರಿ ಸಖತ್ ಮಜಾ ಮಾಡುತ್ತಿದ್ದಾರೆ.

ಶ್ರಿಯಾ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಗಳನ್ನು ಬೆನ್ನಮೇಲೆ ಕೂರಿಸಿಕೊಂಡು ಬಿಚ್ ನಲ್ಲಿ ಆಟವಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸ್ವಿಮ್ ಸೂಟ್ ನಲ್ಲಿ ಇರುವ ಶ್ರಿಯಾ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾಗೆ ಬಗೆಬಗೆಯ ಪೋಸ್ ನೀಡಿರುವ ಶ್ರಿಯಾ ಮಗಳ ಮುಖವನ್ನು ದರ್ಶನ ಮಾಡಿಸಿಲ್ಲ. ಅಂದಹಾಗೆ ಶ್ರಿಯಾ ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಶ್ರಿಯಾ ಹೆಣ್ಣು ಮಗಳಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿದ್ದ ತಿಂಗಳ ಬಳಿಕ ಬಹಿರಂಗ ಪಡಿಸಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಶ್ರಿಯಾ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಇನ್ನು ಹಿಂದಿಯಲ್ಲಿ ದೃಶ್ಯಂ2 ಬಿಡುಗಡೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅಜಯ್ ದೇಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರಿಯಾ ರಾಣಿಯ ಹಾಗೆ ಮಿಂಚಿದ್ದಾರೆ. ಇತ್ತೀಗಷ್ಟೆ ಶ್ರಿಯಾ ಲುಕ್ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

click me!