ಸಿನಿಮಾ ಸೋತರೂ ಸೌದಿಯಲ್ಲಿ ಜಾನ್ವಿ ಮಸ್ತ್ ಮಜಾ; ವಿಶೇಷ ಸ್ಥಳದಲ್ಲಿ ನಿಂತು ಹಾಟ್ ಪೋಸ್ ನೀಡಿದ ನಟಿ

First Published Nov 25, 2022, 5:43 PM IST

ಶ್ರೀದೇವಿ ಪುತ್ರಿ ಜಾನ್ವಿ ಸದಾ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಬ್ಯೂಟಿ ಜಾನ್ವಿ ಇದೀಗ ಮತ್ತೊಂದು ಸುಂದರ ಫೋಟೋಶೂಟ್ ನಲ್ಲಿ ಮಿಂಚುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟಿ ಜಾನ್ವಿಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಸಿನಿಮಾ ಸಂಖ್ಯೆ ಕಡಿಮೆ ಇದ್ದರೂ ಜಾನ್ವಿ ಫೋಟೋಶೂಟ್ ಮಾಡಲು ಮಿಂಚುತ್ತಿದ್ದಾರೆ. 

ಶ್ರೀದೇವಿ ಪುತ್ರಿ ಜಾನ್ವಿ ಸದಾ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಬ್ಯೂಟಿ ಜಾನ್ವಿ ಇದೀಗ ಮತ್ತೊಂದು ಸುಂದರ ಫೋಟೋಶೂಟ್ ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಜಾನ್ವಿ ವಿದೇಶಕ್ಕೆ ಹಾರಿದ್ದಾರೆ. ಸೆಲೆಬ್ರಿಟಿಗಳ ವಿದೇಶಿ ಪ್ರವಾಸ ಅಂದರೆ ಮಾಲ್ಡೀವ್ಸ್ ಬೀಚ್ ಅಂತನೆ ಮೊದಲು ನೆನಪಾಗೋದು. ಆದರೆ ಈ ಬಾರಿ ಜಾನ್ವಿ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಜಾಗ ಸೌದಿ.

ಸಿನಿಮಾ ಸೋತರೂ ಜಾನ್ವಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಸೌದಿ ಅರೇಬಿಯಾದ ಕಡೆ ಹಾರಿರುವ ಜಾನ್ವಿ ಸಖತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೌದಿ ಅರೇಬಿಯಾದ ಮರಾಯ ಹಾಲ್‌ನಲ್ಲಿ ನಿಂತು ಫೋಸ್ ನೀಡಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಮಿರರ್ ಕಟ್ಟಡಕ್ಕೆ ಭೇಟಿ ನೀಡಿರುವ ಜಾನ್ವಿ ತರಹೇವಾರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಜಾನ್ವಿ ಕಪೂರ್ ಸಖತ್ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೌದಿಯ ವಿಶೇಷ ಸ್ಥಳದಲ್ಲಿ ನಿಂತು ಜಾನ್ವಿ ಮಸ್ತ್ ಪೋಸ್ ನೀಡಿದ್ದಾರೆ. ಜಾನ್ವಿ ಬೋಲ್ಡ್ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಹಾರ್ಟ್ ಮತ್ತು ಬೆಂಕಿ ಇಮೋಕಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.  

ಜಾನ್ವಿ ಕಪೂರ್ ಇತ್ತೀಚಿಗಷ್ಟೆ ಮನೆ ಖರೀದಿ ಮಾಡಿರುವ ವಿಚಾರಕ್ಕೆ ಸುದ್ದಿಯಾಗಿದ್ದರು. ಜಾನ್ವಿ ಮತ್ತು ಮತ್ತು ಕುಟುಂಬ  ಮುಂಬೈನ ಪ್ರತಿಷ್ಠಿತ ಪ್ರದೇಶ ಬಾಂದ್ರಾದ ಪಾಲಿ ಹಿಲ್ಸ್‌ನಲ್ಲಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿದ್ದಾರೆ ಎನ್ನಲಾಗಿದೆ. ಅಪಾರ್ಟ್ಮೆಂಟ್ ನ ಬೆಲೆ ಬರೋಬ್ಬರಿ 65 ಕೋಟಿ ರೂಪಾಯಿ. 

ಜಾನ್ವಿ ತಾಯಿ ಶ್ರೀದೇವಿ ಅವರ ಚೆನ್ನೈ ಬಂಗಲೆ ಕೂಡ ವೈರಲ್ ಆಗುತ್ತಿದೆ. ಶ್ರೀದೇವಿ ಖರೀದಿ ಮಾಡಿದ್ದ ಚೆನ್ನೈನಲ್ಲಿರುವ ಬಂಗಲೆಯ ವಿಡಿಯೋವನ್ನು ಜಾನ್ವಿ ಶೇರ್ ಮಾಡಿದ್ದರು. ಸುಂದರವಾಗಿರುವ ಮನೆಯ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಜಾನ್ವಿ ಸದ್ಯ ಬವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಏಪ್ರಿಲ್ 7 ಮುಂದಿನ ವರ್ಷ ಈ ಸಿನಿಮಾಗೆ ರಿಲೀಸ್ ಆಗುತ್ತಿದೆ. 

click me!