ರೆಡ್ ಸೀರೆಯಲ್ಲಿ ಸಖತ್ ಹಾಟ್ ಆದ ಜಾನ್ವಿ; ಸೆಕ್ಸಿಯಸ್ಟ್ ಎಂದ ನೆಟ್ಟಿಗರು

First Published Oct 18, 2022, 12:01 PM IST

ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಅಲ್ಲದೇ ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಅಲ್ಲದೇ ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಜಾನ್ವಿ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾನ್ವಿ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಜಾನ್ವಿ ಸದ್ಯ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮಿಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿ ತೇಲುತ್ತಿದ್ದಾರೆ ಜಾನ್ವಿ ಕಪೂರ್. 

ಜಾನ್ವಿ ಇತ್ತೀಚಿಗಷ್ಟೆ ಸೀರೆ ಫೋಟೋ ಶೇರ್ ಮಾಡಿದ್ದಾರೆ. ಕೆಂಪು ಸೀರೆಯಲ್ಲಿ ಜಾನ್ವಿ ಸಖತ್ ಹಾಟಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲಿ ಜಾನ್ವಿ ತರಹೇವಾರಿ ಪೋಸ್ ನೀಡಿದ್ದಾರೆ. ಜಾನ್ವಿ ಸೀರೆ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಮಾಡುತ್ತಿದೆ. 
 

ಜಾನ್ವಿ ಫೋಟೋಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಹಾಟ್ ಎನ್ನುತ್ತಿದ್ದಾರೆ. ಇನ್ನು ಕೆಲವರು ಸೆಕ್ಸಿಯಸ್ಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಜಾನ್ವಿ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಿರುವುದು ಇದೇ ಮೊದಲಲ್ಲ.  

ಈ ಮೊದಲು ಜಾನ್ವಿ ಮಿಲಿ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಖುಷಿಗೆ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. ಪಾರ್ಟಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಫೋಟೋಗಳನ್ನು ಶೇರ್ ಮಾಡಿ, ಮಿಲಿ ಟ್ರೇಲರ‌್‌ಗೆ ಪ್ರೀತಿ ತೋರಿಸಿದ್ದಕ್ಕೆ ನನ್ನ ಟ್ರೀಟ್ ಎಂದು ಹೇಳಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್ ಕೊನೆಯದಾಗಿ ಗುಡ್ ಲಕ್ ಜೆರ್ರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಜಾನ್ವಿ ಸದ್ಯ ಮಿಲಿ ಸಿನಿಮಾ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ಮಹಿ, ಬವಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಧಡಕ್ ಸಿನಿಮಾ ಮೂಲಕ ಮೊದಲ ಬಾರಿಗೆ  ದೊಡ್ಡ ಪರದೆ ಮೇಲೆ ಮಿಂಚಿದರು. 2018ರಲ್ಲಿ ಜಾನ್ವಿ ಸಿನಿಮಾರಂಗ ಪ್ರವೇಶ ಪಡೆದರು. ತಾಯಿಯ ನಿಧನದ ಬಳಿಕ ಬಣ್ಣ ಹಚ್ಚಿದ ಜಾನ್ವಿಯನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು. ಆದರೆ ಇದುವರೆಗೂ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಬ್ರೇಕ್ ಪಡೆಯಲು ಇನ್ನು ಸಾಧ್ಯವಾಗಿಲ್ಲ. 

click me!