ಅಪರಾಧ ಪ್ರಕರಣ ಸಂಬಂಧ ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿಯೊಬ್ಬನನ್ನು ಶಿವಾಜಿನಗರ ಪೊಲೀಸರು ಸೆರೆ ಹಿಡಿದಿದ್ದಾರೆ.
ಬೆಂಗಳೂರು (ಏ.24: ಅಪರಾಧ ಪ್ರಕರಣ ಸಂಬಂಧ ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿಯೊಬ್ಬನನ್ನು ಶಿವಾಜಿನಗರ ಪೊಲೀಸರು ಸೆರೆ ಹಿಡಿದಿದ್ದಾರೆ.
ಡಿ.ಜೆ.ಹಳ್ಳಿ ಸಮೀಪದ ನಿವಾಸಿ ಸೈಯದ್ ಮಜಾರ್ ಅಲಿಯಾಸ್ ಬಚ್ಚಾ ಮಜಾರ್ ಬಂಧಿತನಾಗಿದ್ದು, ಆರೋಪಿಯಿಂದ ಕಾರು ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ನಾಲ್ಕು ದಿನಗಳ ಹಿಂದೆ ತನ್ನ ಗೆಳತಿ ಭೇಟಿಗೆ ಶಿವಾಜಿನಗರಕ್ಕೆ ಸೈಯದ್ ಬರುವ ಬಗ್ಗೆ ಖಚಿತ ಮಾಹಿತಿ ಇನ್‌ಸ್ಪೆಕ್ಟರ್ ರವಿಶಂಕರ್ ತಂಡಕ್ಕೆ ಸಿಕ್ಕಿತು. ಈ ಮಾಹಿತಿ ಮೇರೆಗೆ ಕಾಳಿಯಮ್ಮ ದೇವಾಲಯ ಬಳಿ ಸೈಯದ್‌ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಆಗ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರ ಸಹಕಾರದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಹಲವು ವರ್ಷಗಳಿಂದ ಪಾತಕ ಲೋಕದಲ್ಲಿ ಸೈಯದ್ ಸಕ್ರಿಯವಾರುವ ಈತನ ವಿರುದ್ಧ ಚಿಕ್ಕಜಾಲ, ಡಿ.ಜೆ.ಹಳ್ಳಿ, ಎಚ್‌ಎಎಲ್, ಮೈಕೋ ಲೇಔಟ್, ಶಿವಾಜಿನಗರ ಹಾಗೂ ಆಡುಗೋಡಿ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಶಿವಾಜಿನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ತಮ್ಮ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಸೈಯದ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆಗ ಏ.19ರಂದು ತನ್ನ ಗೆಳತಿಗೆ ಭೇಟಿಗೆ ಬಂದಾಗ ಆತ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳಳು ಹೇಳಿದ್ದಾರೆ.
ಬೆಂಗಳೂರು: ಕೂಲಿ ಕಾರ್ಮಿಕನ 6 ವರ್ಷದ ಮಗಳ ಮೇಲೆ 30 ವರ್ಷದ ಕಾಮುಕನ ಲೈಂಗಿಕ ದೌರ್ಜನ್ಯ
ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ
ಬೆಂಗಳೂರುವಿಳಾಸ ಕೇಳುವ ನೆಪದಲ್ಲಿ ಸಾರ್ವಜನಿಕರ ಮೊಬೈಲ್ ಕಸಿದು ಪರಾರಿ ಅಗುತ್ತಿದ್ದ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸೈಯದ್ ಅಪ್ಸರ್ (23), ಸೈಯದ್ ಮೊಯಿನ್ (22) ಹಾಗೂ ಒಬ್ಬ ಅಪ್ರಾಪ್ತ ಬಂಧಿತರು. ಆರೋಪಿಗಳಿಂದ ₹10 ಸಾವಿರ ಮೌಲ್ಯದ ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಗದಗ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಫಯಾಜ್ ಗ್ಯಾಂಗ್; ಹಿರಿ ಮಗನಿಂದಲೇ ಕುಟುಂಬದ ಕೊಲೆಗೆ ಸುಪಾರಿ!
ಎಚ್‌ಆರ್‌ಬಿಆರ್ ಲೇಔಟ್ 2ನೇ ಬ್ಲಾಕ್ ನಿವಾಸಿ ಅಮರ್ ಬಹದ್ದೂರ್ ಸೌದ್ ವೃತ್ತಿಯಲ್ಲಿ ಸೆಕ್ಯೂರಿಗಾರ್ಡ್ ಆಗಿದ್ದಾರೆ. ಏ.17ರಂದು ಕೆಲಸ ಮುಗಿಸಿಕೊಂಡು ಬಂದು ರಾತ್ರಿ 11 ಗಂಟೆಗೆ ತಮ್ಮ ಮನೆ ಬಳಿ ಕುಳಿತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಅಮರ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.