ಸೀರೆಯಲ್ಲೂ ಬೋಲ್ಡ್​ ಆಗಿ ಕಾಣಿಸಿಕೊಂಡ ದಿಶಾ ಪಟಾನಿ: ಅಯ್ಯೋ ಸೆರಗು ಮುಚ್ಕಳಮ್ಮ ಎಂದ ಫ್ಯಾನ್ಸ್‌!

First Published | Mar 14, 2024, 10:04 AM IST

ಬಾಲಿವುಡ್‌ ನಟಿ ದಿಶಾ ಪಟಾನಿ ಸದ್ಯ ತಮ್ಮ ಸಂಪೂರ್ಣ ಗಮನವನ್ನು ಸೌತ ಸಿನಿಮಾರಂಗದ ಮೇಲೆ ನೆಟ್ಟಿದ್ದಾರೆ. ಪ್ರಭಾಸ್ ಜತೆಗೆ ಕಲ್ಕಿ 2898 ಎಡಿ ಮತ್ತು ಸೂರ್ಯ ಜತೆಗೆ ಕಂಗುವಾ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಮತ್ತೊಮ್ಮೆ ಹಾಟ್ ಅವತಾರವೆತ್ತಿದ್ದಾರೆ ಬಾಲಿವುಡ್ ನಟಿ ದಿಶಾ ಪಟಾಣಿ. ಹೊಸದೊಂದು ಫೋಟೋ ಶೂಟ್ ಮಾಡಿಸಿರುವ ನಟಿ, ಆ ಫೋಟೋಗಳಲ್ಲಿ ಮಿರಿ ಮಿರಿ ಮಿಂಚಿದ್ದಾರೆ. ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 

ದಿಶಾ ಪಟಾಣಿಗೆ ಟ್ರೆಡಿಷನಲ್ ಮಾಡರ್ನ್ ಎಲ್ಲಾ ಒಂದೇ. ಎಂಥಾ ಬಟ್ಟೆ ಧರಿಸಿದರೂ ಎಕ್ಸ್​ಪೋಸಿಂಗ್ ಆಗಿಯೇ ಡ್ರೆಸ್ ಮಾಡುತ್ತಾರೆ. ಅವರು ಹೊರಗೆ ಕಾಣಿಸಿಕೊಂಡಾಗೆಲ್ಲ ಅವರ ಫೋಟೋಸ್ ವೈರಲ್ ಆಗುತ್ತದೆ ಎಂದು ಫ್ಯಾನ್ಸ್​​ ಕಾಮೆಂಟ್​​ ಮಾಡುತ್ತಿದ್ದಾರೆ.  

Latest Videos


ಬಿಳಿ ಸೀರೆಯಲ್ಲಿ ಶಾಕುಂತಲೆಯ ರೀತಿ ಕಾಣುತ್ತಿರುವ ನಟಿ ದಿಶಾ ಪಟಾನಿ, ಸ್ಟೋನ್ಡ್ ಬ್ಲೌಸ್‌ಗೆ ವೈಟ್ ಸೀರೆ ಮ್ಯಾಚ್ ಮಾಡಿದ್ದಾರೆ. ಸದ್ಯ ಈ ಫೋಟೋಗಳನ್ನು ಕಂಡ ಅಭಿಮಾನಿಗಳು ಮಸ್ತ್ ಹುಡುಗಿ ಎಂದು ಅಭಿಮಾನ ತೋರಿದ್ದಾರೆ. 

ದಿಶಾ ಪಠಾನಿ ತನ್ನ ಟಾಪ್ ಸೌಂದರ್ಯವನ್ನು ತೋರಿಸಿ ಹುಡುಗರ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ.

ದಿಶಾ ಪಟಾಣಿ 2015ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ವರುಣ್ ತೇಜ್ ನಾಯಕನಾಗಿ ನಟಿಸಿದ ದಿ ಲೋಫರ್ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಚಿತ್ರದ ಸೋತ ಹಿನ್ನೆಲೆಯಲ್ಲಿ ಬೇರೆ ಟಾಲಿವುಡ್‌ ಅಕಾಶಗಳು ಅವರಿಗೆ ಸಿಕ್ಕಿರಲಿಲ್ಲ.

2016 ರಲ್ಲಿ ಎಂಎಸ್ ಧೋನಿಯ ಅನ್ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಪಠಾನಿ ನಂತರ ಅನೇಕ ಚಿತ್ರಗಳ ಭಾಗವಾದರು. ಭಾಗಿ, ಭಾರತ್ ಮತ್ತು ಮಲಂಗ್‌ನಂತಹ ಚಿತ್ರಗಳೊಂದಿಗೆ ಅವರ ಕ್ರೇಜ್ ಅಪಾರವಾಗಿ ಹೆಚ್ಚಾಯಿತು.

ದಿಶಾ ಪಠಾನಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪಠಾನಿ ಅವರ ಕ್ರೇಜ್ ಹೆಚ್ಚಿದ್ದು ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲದೇ ದಿಶಾ ಪಠಾನಿ ಬೋಲ್ಡ್ ಫ್ಯಾಷನ್ ಸ್ಟೈಲ್ ಫಾಲೋ ಮಾಡುವ ಮಂದಿಯೂ ತುಂಬಾ ಇದ್ದಾರೆ.

click me!