ಬಣ್ಣದ ಬದಲು ಕಲ್ಲು, ಪತ್ತರ್ ಮಾರೋ ಹೋಳಿ ಸಂಭ್ರಮದಲ್ಲಿ 30 ಮಂದಿ ಆಸ್ಪತ್ರೆ ದಾಖಲು!

By Suvarna NewsFirst Published Mar 8, 2023, 8:52 PM IST
Highlights

ಬಣ್ಣಗಳಿಂದ ಹೋಳಿ ಹಬ್ಬ ಆಚರಿಸಲಾಗುತ್ತದೆ. ಬಣ್ಣ ಎರಚಿ ಒಕುಳಿಯಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಬಣ್ಣದ ಜೊತೆ ಕಲ್ಲು ಎಸೆಯಲಾಗುತ್ತದೆ. ವಿಚಿತ್ರ ಸಂಪ್ರದಾಯದ ಹೋಳಿ ಆಚರಣೆಯಲ್ಲಿ 30 ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
 

ದುಂಗಾರ್‌ಪುರ್(ಮಾ.08): ಹೋಳಿ ಹಬ್ಬ ಆಚರಣೆ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಹೋಳಿ ಅಚ್ಚು ಮೆಚ್ಚಿನ ಹಬ್ಬ. ಆದರೆ ರಾಜಸ್ಥಾನದ ದುಂಗಾರ್‌ಪುರ್ ಜಿಲ್ಲೆಯ ಬಿಲುದಾ ಗ್ರಾಮದಲ್ಲಿ ಹೋಳಿ ಹಬ್ಬ ಆಚರಣೆ ವಿಶೇಷ. ಇಲ್ಲಿ ಹೋಳಿ ಹಬ್ಬ ಆಚರಣೆಯಲ್ಲಿ ಕೇವಲ ಬಣ್ಣ ಮಾತ್ರವಲ್ಲ, ಇದರ ಜೊತೆಗೆ ಕಲ್ಲು ಬಳಕೆ ಮಾಡಲಾಗುತ್ತದೆ. ಬಣ್ಣ ಎರಚುವುದಲ್ಲ, ಬಣ್ಣದ ಜೊತೆ ಎದುರಾಳಿ ತಂಡಕ್ಕೆ ಕಲ್ಲು ಎಸೆಯಲಾಗುತ್ತದೆ. ಈ ಪತ್ತರ್ ಮಾರೋ ಹೋಳಿ ಹಬ್ಬದ ಸಂಭ್ರಮದಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿ ಪತ್ತರ್ ಮಾರೋ ಹೋಳಿ ಹಬ್ಬದ ಆಚರಣೆಗೆ ಜಮಾಯಿಸಿದ್ದರು. ಸಾಮಾನ್ಯವಾಗಿ ಸಣ್ಣ ಸಣ್ಣ ಕಲ್ಲುಗಳನ್ನು ಎಸೆಯಲಾಗುತ್ತದೆ. ಈ ಕಲ್ಲುಗಳು ದೇಹಕ್ಕೆ ಬಿದ್ದರೆ ಸಣ್ಣ ಗಾಯವಾಗಲಿದೆ.  ಆದರೆ ಈ ಬಾರಿಯ ಎರಡು ಗುಂಪಿನ ಯುವಕರು ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿದ್ದಾರೆ. 

Latest Videos

Holi 2023 : ಹೋಳಿಯ ರಂಗು ತೆಗೆಯೋದು ಬಹಳ ಸುಲಭ

ಎರಡು ತಂಡಗಳು ಗ್ರಾಮದ ಬಯಲು ಪ್ರದೇಶದಲ್ಲಿ ಎದುರು ಬದರಾಗಿ ನಿಂತು ಹಬ್ಬ ಆಚರಿಸಲಾಗುತ್ತದೆ. ದೂರ ದೂರದಲ್ಲಿ ನಿಂತು ತಮ್ಮ ಬತ್ತಳಿಕೆಯಲ್ಲಿರುವ ಕಲ್ಲುಗಳನ್ನು ಎಸೆಯಲಾಗುತ್ತದೆ. ಆದರೆ ದೊಡ್ಡ ದೊಡ್ಡ ಕಲ್ಲುಗಳಿಂದ ಎಸೆತ ಆರಂಭಿಸಿದ ಗುಂಪುಗಳು ನಡುವೆ ರೋಷ ಹೆಚ್ಚಾಗಿದೆ. ಹೀಗಾಗಿ ತೀವ್ರವಾಗಿ ಕಲ್ಲು ತೂರಾಟ ನಡೆದಿದೆ.

ಇದರ ಪರಿಣಾಮ 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಹುತೇಕರ ತಲೆ, ಕೈ, ಎದೆ ಭಾಗಕ್ಕೆ ಕಲ್ಲಿನ ಏಟು ಬಿದ್ದಿದೆ. ತೀವ್ರವಾಗಿ ರಕ್ತಸ್ರಾವಗೊಂಡು ಹಲವು ಅಸ್ವಸ್ಥಗೊಂಡಿದ್ದಾರೆ. ಹಲವರು ಕೈಕಾಲುಗಳಿಗೆ ಗಾಯವಾಗಿದೆ. ಆದರೆ ಗಾಯದ ತೀವ್ರತೆ ಕಡಿಮೆ ಇರುವ ಕಾರಣ ಆಸ್ರತ್ರೆ ದಾಖಲಾಗಿಲ್ಲ.

 

ಹೋಳಿ ಸಂಭ್ರಮಕ್ಕೆ 26 ಲಕ್ಷ ಬಾಟಲ್‌ ಮದ್ಯ ಮೋರಿದ ಡೆಲ್ಲಿ ಪೀಪಲ್ಸ್‌, ಹಿಂದಿನೆಲ್ಲಾ ದಾಖಲೆ ಉಡೀಸ್‌!

ಬಿಲುದಾ ಗ್ರಾಮದ ಸಂಪ್ರದಾಯದ ಪ್ರಕಾರ ಪತ್ತರ್ ಮಾರೋ ಹೋಳಿ ಆಚರಣೆಯಲ್ಲಿ ದೇಹದಿಂದ ರಕ್ತ ಚಿಮ್ಮಬೇಕು. ಇದರಿಂದ ವರ್ಷಪೂರ್ತಿ ಮತ್ತೆ ರಕ್ತ ಚಿಮ್ಮು ಪ್ರಸಂಗ ಇರುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಆದರೆ ಈ ಬಾರಿಯ ಹೋಳಿ ದುರಂತವಾಗಿ ಮಾರ್ಪಟ್ಟಿದೆ. ಈ ಗ್ರಾಮದ ಜನರು ಹೋಳಿ ಹಬ್ಬದ ಆಚರಣೆ ವಿಶೇಷತೆ ಪಡೆದುಕೊಂಡಿದೆ. ಇಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.ಹಿಂದಿನಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಗ್ರಾಮಸ್ಥರೇ ಪತ್ತರ್ ಮಾರೋ ಹೋಳಿ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ದೇಹದಿಂದ ರಕ್ತ ಚಿಮ್ಮಿದರೆ ಸಂಪೂರ್ಣ ಗ್ರಾಮ ವರ್ಷವಿಡಿ ನೆಮ್ಮದಿಯಿಂದ ಇರಲಿದೆ ಅನ್ನೋದು ನಂಬಿಕೆಯಾಗಿದೆ.
 

click me!