ರಾಜ್ಯದಲ್ಲಿ ವಿಷಗಾಳಿ ಹಾಗು ವಿಷ ಜಂತುಗಳ ಹಿನ್ನೆಲೆಯಲ್ಲಿ ಜನರಲ್ಲಿ ಅನಾರೋಗ್ಯ ಹೆಚ್ಚುತ್ತಿದ್ದು, ಆಕಸ್ಮಿಕ ಮೃತ್ಯುಗಳು ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ, ಭೂಮಿಯಿಂದ ಹೊರಬುರುವ ವಿಷಜಂತುಗಳು ಮನುಕುಲ ನಾಶ ಮಾಡಲಿವೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಧಾರವಾಡ (ಸೆ.27): ರಾಜ್ಯದಲ್ಲಿ ಪ್ರಸ್ತುತವಾಗಿ ವಿಷಗಾಳಿ ಬೀಸಿದೆ, ಆದ್ದರಿಂದ ಜನರಲ್ಲಿ ಅನಾರೋಗ್ಯ ತೊಂದರೆಗಳು ಹೆಚ್ಚಾಗಿವೆ. ಇದೇ ವೇಳೆ ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ. ಇನ್ನು ಭೂಮಿಯಿಂದ ಕೆಲವು ವಿಷ ಜಂತುಗಳು ಹೊರಗೆ ಬರುತ್ತವೆ. ಅವುಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತವೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀಗಳು ಇದೀಗ ಜೀವರಾಶಿಗಳ ಮೇಲೆ ಉಂಟಾಗುವ ತೊಂದರೆಯ ಬಗ್ಗೆ ಸ್ಪೋಟಕ ಭಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಇನ್ನೂ ಮುಂದೆ ಹಿಂಗಾರು ಮಳೆ ಹೆಚ್ಚಿದೆ. ಅದರಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಾವು ಹೇಳಿದ್ದ ಭವಿಷ್ಯವನ್ನು ಪುನಃರುಚ್ಚರಿಸಿದ್ದಾರೆ. ಮುಂದುವರೆದು, ವಿಷ ವಾಯು ಬೀಸಿದ್ದರಿಂದ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ. ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ.
undefined
ಸಿಎಂ ಸಿದ್ದರಾಮಯ್ಯ ಬಗ್ಗೆ ಕೋಡಿಶ್ರೀ ನುಡಿದ ಭವಿಷ್ಯವಾಣಿ ನಿಜವಾಯ್ತು!
ಧಾರವಾಡದ ಕೋಡಿಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂಮಿಯಿಂದ ವಿಷ ಜತುಗಳು ಹೊರಗೆ ಬರುತ್ತವೆ. ಅವುಗಳಿಂದ ಮನುಷ್ಯ ಕುಲ ನಾಶವಾಗುತ್ತದೆ. ಈ ವಿಷ ಜಂತುಗಳು ಮನುಷ್ಯರನ್ನ ನಾಶ ಮಾಡುತ್ತವೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುವುದು ನಡೆದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ಯುದ್ಧ ಭೀತಿ ಇದೆ. ಜನರ ಶಾಂತಿ, ಸಹನೆ, ಆರೋಗ್ಯ ಕೆಡುತ್ತದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಇದೆ ಎಂದು ಹೇಳಿದರು.
ಮುಂದುವರೆದು, ಈ ಹಿಂದೆ ನುಡಿದಂತೆ ಭೂ ಕುಸಿತ, ಭೂ ಕಂಪಗಳು ಹೆಚ್ಚಾಗುತ್ತದೆ. ಭೂಮಿ ಸಡಿಲಾಗಿ ಜನರ ಸಾವು-ನೋವು ಆಗುತ್ತದೆ. ಜೊತೆಗೆ, ಆಕಾಶ ತತ್ವದಿಂದ ತೊಂದರೆ ಇದೆ ಎಂದು ತಮ್ಮ ಮಾತನ್ನು ಪುನರುಚ್ಛರಿಸಿದ್ದರು. ಆಕಾಶ ತತ್ವದಿಂದ ಎಂದರೆ ಮಳೆಯಿಂದ ತೊಂದರೆ ಆಗಲಿದೆ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಿದರು.
ತಿರುಪತಿ ಲಡ್ಡು ಅಪವಿತ್ರ ವಿಚಾರದ ಬಗ್ಗೆ ಮಾತನಾಡಿದ ಅವರು, ತಿರುಪತಿಗೆ ವೆಂಕಟೇಶ್ವರ ಕೃಷ್ಣ ಇದ್ದಂತೆ. ಆದರೆ, ಮಹಾಭಾರತದಲ್ಲಿ ಕೃಷ್ಣನಿದ್ದಂತೆ ಈಗ ಆತ (ಕೃಷ್ಣ) ಇಲ್ಲ, ಆದ್ದರಿಂದ ದುರ್ಯೋಧನ ಗೆದ್ದ. ಇದೀಗ ದೇವಾಲಯದ ಸ್ಥಳವನ್ನು ಸ್ವಚ್ಛತೆ ಮಾಡುತ್ತಿದ್ದಾರೆ. ಧರ್ಮಶಾಸ್ತ್ರದ ಅನುಸಾರವಾಗಿ ಇದೀಗ ಅಲ್ಲಿ ಸ್ಥಳ ಸ್ವಚ್ಛತೆ ಮಾಡಲಾಗುತ್ತಿದೆ. ಆದರೆ ತಿಂದವರ ಹೊಟ್ಟೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರೆ. ಅದರ ಬಗ್ಗೆ ಸರ್ಕಾರವೇ ಹೇಳಬೇಕು. ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಎಂದು ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.