
ಧಾರವಾಡ (ಸೆ.27): ಅಭಿಮನ್ಯುವಿನ ಬಾಣದ ದಾರವನ್ನು ಮೋಸದಿಂದ ಕತ್ತರಿಸಿದ್ದಕ್ಕೆ ಆತನ ಹೆಂಡತಿ ರಣರಂಗಕ್ಕೆ ಬರುತ್ತಾಳೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯವಾಣಿ ಅಕ್ಷರಶಃ ನಿಜವಾಗಿದೆ.
ಧಾರವಾಡದದಲ್ಲಿ ಕೋಡಿಮಠದ ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕಟ್ ಮಾಡಿಸುತ್ತಾರೆ. ಕರ್ಣನ ಕೈಯಿಂದ ದಾರ ಕಟ್ ಮಾಡಿಸುತ್ತಾರೆ ಎಂದು ಈ ಹಿಂದೆ ಧಾರವಾಡದಲ್ಲಿಯೇ ಭವಿಷ್ಯ ಹೇಳಿದ್ದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿಯೂ ನಡೆದಿದೆ. ಮಹಾಭಾರತದಲ್ಲಿ ಕೃಷ್ಣನಿದ್ದ ಆದ್ದರಿಂದಲೇ ಗದಾಯುದ್ಧದಲ್ಲಿ ಭೀಮ ಗೆದ್ದ. ಆದರೆ, ಇಲ್ಲಿ ಇಲ್ಲಿ ಕೃಷ್ಣನೇ ಇಲ್ಲ, ಆದ್ದರಿಂದ ದುರ್ಯೋಧನ ಗೆಲ್ಲುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಗುತ್ತಾ?
ಅಭಿಮನ್ಯವಿನ ಹೆಂಡತಿ ರಣರಂಗ ಪ್ರವೇಶಿಸುತ್ತಾಳೆ ಎಂದಿದ್ದೆ. ಈಗ ಏನಾಯ್ತು? ಹೇಳಿ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣದಿಂದ ಕತ್ತರಿಸಿದಂತೆ ಇಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರ ಆಪ್ತರಿಂದಲೇ ಸಂಚು ರೂಪಿಸಲಾಗಿದೆ ಎಂಬ ಅರ್ಥ ಬರುವಂತೆ ಮಾತನಾಡಿದರು. ರಾಜ್ಯ ರಾಜಕಾರಣದಲ್ಲಿಯೂ ಬಿಲ್ಲಿನ ದಾರ ಕಟ್ ಮಾಡಿಸಿದರು. ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಎಂದಿಗೂ ಅವರ ಹೆಂಡತಿ ಹೊರಗೆ ಬಂದಿರಲಿಲ್ಲ. ಅವರು ಪಾವಿತ್ರ್ಯತೆ ಇರೋ ಹೆಣ್ಣು ಮಗಳು. ಇದೀಗ ಎಲ್ಲ ಕಡೆ ಅವರ ಹೆಸರು ಬಂತು. ಅಂದರೆ, ಅಭಿಮನ್ಯುವಿನ ಹೆಂಡತಿ ರಣರಂಗ ಪ್ರವೇಶಿಸಿದಂತಾಗಿದೆ ಎಂದು ಹೇಳಿದರು.
ಇನ್ನು ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಮಲದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ತಿರುಪತಿ ಲಡ್ಡು ಅಪವಿತ್ರ ಮಾಡಿದ ವಿಚಾರವಾಗಿ ಮಾತನಾಡಿ, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದಾನೆ. ಆದರೆ, ಆತ ಇಲ್ಲ, ದುರ್ಯೋಧನ ಗೆದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರವಾಗಿದೆ. ಆದರೆ, ತಿಂದವರ ಹೊಟ್ಟೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು. ದೇಶದಲ್ಲಿ ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ನಾನು ಈ ಹಿಂದೆ ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಅಂತಾ ಹೇಳಿದ್ದೆ. ಈಗ ಅದೇ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ದರ್ಶನ್ ಬಂಧನದ ಲಾಭ ಪಡೆದ ಮ್ಯಾಕ್ಸ್?: ಡೆವಿಲ್ ಕಣ್ಣಿಟ್ಟಿದ್ದ ತಿಂಗಳ ಮೇಲೆ ಕಿಚ್ಚನ ಮ್ಯಾಕ್ಸ್ ಕಣ್ಣು
ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ವಾಣಿಯಂತೆವ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಅದರಲ್ಲಿಯೂ ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತದ್ದೊಡ್ಡಿದೆ. ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ಹಿನ್ನೆಡೆಯಾಗಿದೆ. ಸಿಎಂ ಸಿದ್ದರಾಮಯ್ಯ ನ್ಯಾಯಕ್ಕಾಗಿ ಬಾಗಿಲು ತಟ್ಟಿದ ಕಡೆಗೆಲ್ಲಾ ಪರಿಹಾರ ಸಿಗದಿದ್ದರೆ, ಇದೀಗ ಅವರಿಗೆ ಕಂಟಕ ತಪ್ಪಿದ್ದಲ್ಲ ಎಂಬಂತೆ ಆತಂಕ ಹೆಚ್ಚಾಗಿದೆ. ಆದರೆ, ಮುಂದಿನ ಬೆಳವಣಿಗೆ ಧುರ್ಯೋಧನ ಗೆದ್ದ ಎಂಬ ಅರ್ಥವು ಯಾವ ರೀತಿಯಲ್ಲಿ ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ