ಜುಲೈನಲ್ಲಿ ನಡೆಯುತ್ತಾ 'ಕಿರಿಕ್ ಜೋಡಿ' ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ!: ಇಲ್ಲಿದೆ ಹಾಟ್ ನ್ಯೂಸ್

By Suvarna Web DeskFirst Published Jun 3, 2017, 8:41 AM IST
Highlights

ಕಿರಿಕ್ ಪಾರ್ಟಿ'ಯ ಜೋಡಿ ರಕ್ಷಿತ್ ಶೆಟ್ಟಿಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗೆ ಮತ್ತೊಂದು ರೆಕ್ಕೆ ಪುಕ್ಕ ಗಾಂಧಿನಗರದಲ್ಲಿ ಓಡಾಡುತ್ತಿದೆ. ಅದು ಅವರಿಬ್ಬರ ನಿಶ್ಚಿತಾರ್ಥದ ದಿನಾಂಕ ಫಿಕ್ಸ್ ಆಗಿರುವ ಕುರಿತು. ರಕ್ಷಿತ್ ಶೆಟ್ಟಿಅವರ ಆಪ್ತ ಬಳಗದಲ್ಲೂ ಈ ಜೋಡಿಯ ನಿಶ್ಟಿತಾರ್ಥದ ಸುದ್ದಿ ಹರಿದಾಡುತ್ತಿದೆ. ಅವರೆಲ್ಲರ ಸುದ್ದಿಗಳನ್ನು ನಂಬುವುದಾದರೆ ಮುಂದಿನ ತಿಂಗಳು ಅಂದರೆ ಜುಲೈ ತಿಂಗಳ ಕೊನೆಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ರಕ್ಷಿತ್ ಶೆಟ್ಟಿಹಾಗೂ ರಶ್ಮಿಕಾ ಮಂದಣ್ಣ ಅವರು ಜು.30 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಂಬುದು ಸದ್ಯ ಗಾಂಧಿನಗರ ಬಿಸಿ ಬಿಸಿ ನ್ಯೂಸ್. ‘ಮುಂದಿನ ತಿಂಗಳ ಕೊನೆಗೆ ಅವರ ನಿಶ್ಚಿತಾರ್ಥ ನಡೆಯಲಿದೆ' ಎಂದು ರಕ್ಷಿತ್ ಶೆಟ್ಟಿಅವರ ಆಪ್ತರೇ ಮಾತನಾಡಿಕೊಳ್ಳುತ್ತಿರುವುದರಿಂದ ಇದನ್ನು ನಂಬಬಹುದು.

ಆದರೆ, ಈ ನಡುವೆ ಮತ್ತೊಂದು ಮಾಹಿತಿಯ ಪ್ರಕಾರ ಜುಲೈ 3ರಂದೇ ರಕ್ಷಿತ್ ಶೆಟ್ಟಿಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ ಎನ್ನುತ್ತಿದೆ. ಆದರೆ, ಈ ಇಬ್ಬರ ಕಡೆಯಿಂದಲೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ರಶ್ಮಿಕಾ ತೆಲುಗು ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ‘ಶ್ರೀಮನ್ನಾರಾಯಣ' ಶೂಟಿಂಗ್ನಲ್ಲಿದ್ದಾರೆ. ಈ ಚಿತ್ರದ ನಂತರ ಅವರು ತಮ್ಮ ನಿರ್ದೇಶನದ ‘ಥಗ್ಸ್ ಆಪ್ ಮಾಲ್ಗುಡಿ' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿರುವುದು ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹೀಗೆ ಇಬ್ಬರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಅವರ ನಿಶ್ಚಿತಾರ್ಥ ಸುದ್ದಿ ಸದ್ದು ಮಾಡುತ್ತಿದೆ.

ಅಂದಹಾಗೆ ‘ಕಿರಿಕ್ ಪಾರ್ಟಿ' ಚಿತ್ರೀಕರಣದ ಸೆಟ್ನಲ್ಲೇ ಇಬ್ಬರಲ್ಲೂ ಪ್ರೀತಿ ಹುಟ್ಟಿಕೊಂಡಿದ್ದು, ಇವರ ಪ್ರೀತಿಗೆ ಹೆತ್ತವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನಲಾಗಿದೆ. ಹೀಗಾಗಿ ಕಿರಿಕ್ ಪಾರ್ಟಿಯ ಕರ್ಣ ಹಾಗೂ ಸಾನ್ವಿ ನಿಜ ಜೀವನದಲ್ಲೂ ಜೋಡಿಯಾಗುತ್ತಿದ್ದಾರೆಂಬ ಸುದ್ದಿಯ ನಂತರ ಈಗ ನಿಶ್ಚಿತಾರ್ಥದ ನ್ಯೂಸ್ ಬರುತ್ತಿದೆ. ಈ ಹಿಂದೆ ರಕ್ಷಿತ್ ಅವರೇ ಪ್ರತಿಕ್ರಿಯೆ ನೀಡಿ, ಸದ್ಯ 2 ವರ್ಷದವರೆಗೆ ಮದುವೆಯ ಪ್ರಸ್ತಾಪ ಇಲ್ಲವೆಂದೇ ಖಚಿತವಾಗಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವರದಿ: ಕನ್ನಡಪ್ರಭ

click me!