
ಟಾಲಿವುಡ್ ನ ಲೇಡಿ ಸೂಪರ್ ಸ್ಟಾರ್, ಅತೀ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ನಟಿ ನಯನತಾರ ಅವರ ಮದುವೆ ಡೇಟ್ ಫಿಕ್ಸ್ ಆಗಿದೆ. ಫೈನಲಿ ನಯನತಾರ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಿದ್ದರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ನಿರ್ದೇಶಕ ವಿಘ್ನೇಶ್ ಜೊತೆ ಡೇಟ್ ಮಾಡ್ತಿರೋ ನಟಿ ಈಗ ವಿಘ್ನೆಶ್ ಶಿವನ್ ಕೈ ಹಿಡಿದು ಸತಿ ಪತಿಯಾಗೋಕೆ ಸಿದ್ದರಾಗಿದ್ದಾರೆ.
ಜೂನ್ 9 ರಂದು ನಯನತಾರ ವಿವಾಹ:
ಜೂನ್ 9 ರಂದು ನಯನತಾರ ಮದುವೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಶಾಪಿಂಗ್ ಎಲ್ಲವನ್ನೂ ಮುಗ್ಸಿರೋ ಜೋಡಿ ಹಸಮಣೆ ಏರಲು ದಿನಗಳನ್ನ ಎಣಿಸುತ್ತಿದೆ. ಇನ್ನು ಈ ಇಬ್ಬರು ತಾರಾ ಜೋಡಿಯ ಮದುವೆಗೆ ಕೇವಲ ಆಪ್ತರು ಮತ್ತು ಹತ್ತಿರದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದ್ಯಂತೆ.
ಬದಲಾಯ್ತು ವೆಡ್ಡಿಂಗ್ ಪ್ಲೇಸ್:
ನಯನತಾರ ಹಾಗೂ ವಿಘ್ನೆಶ್ ಇಬ್ಬರ ಮದುವೆ ತಿರುಪತಿಯಲ್ಲಿ ನಡೆಯಲಿದೆ ಅನ್ನೋ ಸುದ್ದಿ ಜೋರಾಗಿತ್ತು..ಇಬ್ಬರು ಕೂಡ ತಿಮ್ಮಪ್ಪನ ಸನ್ನಿಧಿಯಲ್ಲಿಯೇ ಮದುವೆ ಆಗೋದು ಅಂತ ಫಿಕ್ಸ್ ಆಗಿದ್ರು.. ಆದ್ರೆ ಕೊನೆ ಗಳಿಗೆಯಲ್ಲಿ ಮದುವೆಯ ಜಾಗ ಬದಲಾಗಿದೆ..ಸದ್ಯ ಈ ಜೋಡಿ ಮಹಾಬಲಿಪುರಂನಲ್ಲಿರೋ ರೆಸಾರ್ಟ್ ನಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ.
ತಿರುಪತಿಯಿಂದ ಟು ಮಹಾಬಲಿಪುರಂ:
ನಟಯತಾರ ತಮ್ಮ ಮದುವೆಯಲ್ಲಿ ಮಹಾಬಲಿಪುರಂ ಗೆ ಶಿಫ್ಟ್ ಮಾಡಿಕೊಳ್ಳಲು ಕಾರಣವಿದೆ. ಹೌದು ತಿರುಪತಿಯಲ್ಲಿ ಈಗಾಗಲೇ ಪ್ರತಿನಿತ್ಯ ಭಕ್ತರು ಎರಡು ಕಿಲೋ ಮೀಟರ್ ಕ್ಯೂ ನಿಂತು ದೇವರ ದರ್ಶನ ಮಾಡುತ್ತಿದ್ದಾರೆ. ಇನ್ನು ನಯನತಾರ ಮದುವೆ ಕೂಡ ಅಲ್ಲೆ ಅಂತಾದ್ರೆ, ಅಭಿಮಾನಿಗಳು ಮದುವೆ ನೋಡಲು ಬರಲು ಆರಂಭಿಸುತ್ತಾರೆ ಆಗ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತೆ.. ಅದ್ರ ಜೊತೆಗೆ ಈಗಾಗಲೇ ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಬರ್ತಿರೋ ಕಾರಣ ಮದುವೆ ಮಾಡಿಕೊಳ್ಳಲು ಅಡೆತಡೆಗಳಾಗುತ್ತೆ ಅನ್ನೋ ಕಾರಣದಿಂದ ಮದುವೆ ಸ್ಥಳವನ್ನ ಬದಲಾವಣೆ ಮಾಡಿದ್ದಾರೆ.
ಚೆನೈನಲ್ಲಿ ನಡೆಯಲಿದೆ ಅದ್ದೂರಿ ಆರತಕ್ಷತೆ:
ಸದ್ಯ ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾತ್ರ ಮದುವೆಗೆ ಆಹ್ವಾನ ಮಾಡಿದ್ದು, ಆನಂತ್ರ ಚೆನೈನಲ್ಲಿ ಚಿತ್ರರಂಗದವ್ರಿಗಾಗಿ ಅದ್ದೂರಿ ಆರತಕ್ಷತೆಯನ್ನ ಪ್ಲಾನ್ ಮಾಡಿದೆ ಈ ಜೋಡಿ. ನಯನತಾರ ಹಾಗೂ ವಿಘ್ನೆಶ್ ಇಬ್ಬರು ಚಿತ್ರರಂಗದವ್ರೇ ಆಗಿರೋದ್ರಿಂದ ಇಡೀ ಕಾಲಿವುಡ್ ಮದ್ವೆ ಅಟೆಂಡ್ ಮಾಡೋದು ಕನ್ಫರ್ಮ್.
ಇದನ್ನೂ ಓದಿ: ನಟ ಜೆಕೆ ಹೊಸ ಪೋಸ್ಟ್ ವೈರಲ್; ವಿಶ್ ಮಾಡುತ್ತಿರುವ ಅಭಿಮಾನಿಗಳು
ಸ್ಯಾಂಡಲ್ ರಿಯಲ್ ಸ್ಟಾರ್ ಗೂ ಇರುತ್ತಾ ಆಹ್ವಾನ?:
ಇನ್ನು ನಯನತಾರ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಸೂಪರ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ರು. ಉಪ್ಪಿ ಟಾಲಿವುಡ್ ನಲ್ಲಿಯೂ ಸಖತ್ ಫೇಮಸ್ ಹಾಗಾಗಿ ಉಪ್ಪಿಗೂ ನಯನತಾರ ಮದುವೆ ಆಮಂತ್ರಣ ಬಂದಿರುತ್ತಾ ಅನ್ನೋ ಕುತೂಹಲ ಅಭಿಮಾನಿಗಳದ್ದು ಅದನ್ನ ತಿಳಿದುಕೊಳ್ಳಲು ರಿಸೆಪ್ಷನ್ ತನಕ ಕಾಯಬೇಕು.
ವಿಘ್ನೆಶ್ ಡೈರೆಕ್ಷನ್ ಗೆ ಮನಸೋತ ನಯನತಾರ:
ಇನ್ನು ನಯನತಾರಾ ಹಾಗೂ ವಿಘ್ನೆಶ್ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದು ಸಿನಿಮಾ ಸೆಟ್ ನಲ್ಲಿ. 2015 ರಲ್ಲಿ ವಿಘ್ನೆಶ್ ಶಿವಾನ್ ನಿರ್ದೇಶನದಲ್ಲಿ ನಾನುಮ್ ರೌಡಿ ಧಾನ್ ಚಿತ್ರದಲ್ಲಿ ನಯನತಾರ ಅಭಿನಯ ಮಾಡಿದ್ರು. ಅಲ್ಲಿ ಇವರಿಬ್ಬರ ಫ್ರೆಂಡ್ ಶಿಫ್ ಆರಂಭವಾಯ್ತು ಆನಂತರ ಸ್ನೇಹ ಪ್ರೀತಿಗೆ ತಿರುಗಿತು. 2016 ರಲ್ಲಿ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ವಿಘ್ನೆಶ್ ಶಿವಾನ್ ಬೆಸ್ಟ್ ಡೈರೆಕ್ಷರ್ ಅವಾರ್ಡ್ ಪಡೆದುಕೊಂಡಿದ್ರು. ಅದೇ ವೇದಿಕೆಯಲ್ಲಿ ಒಬ್ಬರನ್ನ ಒಬ್ಬರು ಹೊಗಳುವ ಮೂಲಕ ಇಬ್ಬರು ಪ್ರೀತಿಸುತ್ತಿದ್ದಾರೆ ಅನ್ನೋದನ್ನ ಅಧಿಕೃತವಾಗಿ ಅನೌನ್ಸ್ ಮಾಡಿದ್ರು.
ಇದನ್ನೂ ಓದಿ: ವೀಲ್‌ಚೇರ್ ರೋಮಿಯೋ ತಂಡಕ್ಕೆ ಶುಭಕೋರಿದ ಕಿಚ್ಚ ಸುದೀಪ್!
ಸೂಪರ್ ಸ್ಟಾರ್ ಗಳ ಜೊತೆ ಕೇಳಿಬಂದಿತ್ತು ನಯನತಾರ ಹೆಸರು:
ವಿಘ್ನೆಶ್ ಪ್ರೀತಿಯಲ್ಲಿ ಬೀಳುವ ಮುನ್ನ ನಯನತಾರ ಹೆಸರು ಸೂಪರ್ ಸ್ಟಾರ್ ಗಳ ಜೊತೆ ಕೇಳಿ ಬಂದಿತ್ತು. ಮೊದಲಿಗೆ ನಯನತಾರ ಸಿಂಬು ಅವ್ರನ್ನ ಮದ್ವೆ ಆಗುತ್ತಾರೆ ಅನ್ನೋ ನ್ಯೂಸ್ ಇತ್ತು. ಅದಾದ ನಂತ್ರ ಪ್ರಭುದೇವಾ ಹಾಗೂ ನಯನತಾರ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇನ್ನೇನು ಇವರಿಬ್ಬರು ಮದ್ವೆ ಆಗುತ್ತಾರೆ ಅನ್ನುವಷ್ಟರಲ್ಲಿ ಮತ್ತೆ ಬೇರೆ ಆದ್ರು. ಆದರೆ ಇವೆಲ್ಲವನ್ನೂ ಮರೆತು ಬಿಟ್ಟಾಕಿ ಈಗ ವಿಘ್ನೆಶ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಲೇಡಿ ಸೂಪರ್ ಸ್ಟಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.