'ಹಮ್‌ ಜೀತ್‌ ಗಯೇ..' ಮೀಮ್ಸ್‌ ಮೂಲಕವೇ ಪ್ರಸಿದ್ಧವಾಗಿದ್ದ ಹಿರಿಯ ನಟ ಜಾವೇದ್‌ ಖಾನ್‌ ನಿಧನ!

By Santosh NaikFirst Published Feb 14, 2023, 6:22 PM IST
Highlights


ಲಗಾನ್‌ ಚಿತ್ರದಲ್ಲಿ ನಟಿಸಿದ್ದಲ್ಲದೆ, ಅದರಲ್ಲಿನ 'ಹಮ್‌ ಜೀತ್‌ ಗಯೇ..' ಡೈಲಾಗ್‌ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದ ಬಾಲಿವುಡ್‌ನ ಹಿರಿಯ ನಟ ಜಾವೇದ್‌ ಖಾನ್‌ ಆಮ್ರೋಹಿ ಮಂಗಳವಾರ ನಿಧನರಾಗಿದ್ದಾರೆ. ಮೀಮ್ಸ್‌ಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡುವ 'ಹಮ್‌ ಜೀತ್‌ ಗಯೇ..' ವಿಡಿಯೋದಲ್ಲಿರುವ ನಟ ಇವರಾಗಿದ್ದರು.
 

ನವದೆಹಲಿ (ಫೆ.14): ಹಿರಿಯ ಬಾಲಿವುಡ್‌ ನಟ ಜಾವೇದ್‌ ಖಾನ್‌ ಅಮ್ರೋಹಿ ತಮ್ಮ 50ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಬಾಲಿವುಡ್‌ನ ಮೆಗಾ ಹಿಟ್‌ ಚಿತ್ರಗಳಾದ, ಅಂದಾಜ್‌ ಅಪ್ನಾ ಅಪ್ನಾ, ಲಗಾನ್‌, ಇಷ್ಕ್‌, ಹಮ್‌ ಹೇ ರಾಹಿ ಪ್ಯಾರ್‌ ಕೇ ಹಾಗೂ ಚಕ್‌ ದೇ ಇಂಡಿಯಾದಂಥ ಚಿತ್ರಗಳಲ್ಲಿ ನಟಿಸಿದ್ದರು. ಪ್ರತಿ ಚಿತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದ ಜಾವೇದ್‌ ಖಾನ್‌, ಇತ್ತೀಚಿನ ಯುಗದ ಜನತೆಗೆ, ಲಗಾನ್‌ ಚಿತ್ರದ 'ಹಮ್‌ ಜೀತ್‌ ಗಯೇ..' ಡೈಲಾಗ್‌ನ ಮೀಮ್ಸ್‌ನಿಂದಲೇ ಪ್ರಸಿದ್ಧಿ ಪಡೆದುಕೊಂಡಿದ್ದರು. "ಜಾವೇದ್ ಖಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಸಾಂತಾಕ್ರೂಜ್‌ನ ಸೂರ್ಯ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಎರಡೂ ಶ್ವಾಸಕೋಶಗಳು ವಿಫಲವಾಗಿವೆ. ಇಂದು 6.30 ಕ್ಕೆ ಓಶಿವಾರಾ ಸ್ಮಶಾನದಲ್ಲಿ ಸುಪರ್ಡೆ-ಇ-ಖಾಕ್ ಕಾರ್ಯಕ್ರಮ ನಡೆಸಲಾಗುತ್ತದೆ' ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜಾವೇದ್ ಖಾನ್ ಅಮ್ರೋಹಿ ಹಲವಾರು ಜನಪ್ರಿಯ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು. ಅವರು ಕೊನೆಯದಾಗಿ ಸಂಜಯ್ ದತ್, ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್ ಮತ್ತು ಪೂಜಾ ಭಟ್ ಅಭಿನಯಿಸಿದ್ದ 'ಸಡಕ್ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಲಗಾನ್‌ನ ಅವರ ಸಹನಟರಾಗಿ ನಟಿಸಿದ್ದ ಅಖಿಲೇಂದ್ರ ಮಿಶ್ರಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಜಾವೇದ್ ಖಾನ್ ಸಾಹಬ್‌ಗೆ ನಿಧನದಿಂದಾಗಿ ಬೇಸರವಾಗಿದೆ. ಶ್ರೇಷ್ಠ ನಟ, ಹಿರಿಯ ಕಲಾವಿದ ಮತ್ತು IPTA (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ನ ಪ್ರಮುಖ ಸದಸ್ಯ' ಎಂದು ಅವರು ಬರೆದಿದ್ದಾರೆ.

Latest Videos

150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಜಾವೇದ್‌ ಖಾನ್,‌ ಸಿನಿಮಾ ಮಾತ್ರವಲ್ಲದೆ ಸಾಕಷಷ್ಟು ಟಿವಿ ಶೋಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಅವರ ನಿಧನಕ್ಕೆ ಬಾಲಿವುಡ್‌ ಹಾಗೂ ಕಿರುತೆರೆ ವಲಯ ಸಂತಾಪ ವ್ಯಕ್ತಪಡಿಸಿದೆ.  ಜಾವೇದ್ ಖಾನ್ ಅಮ್ರೋಹಿ ಅವರು 2001 ರ ಚಲನಚಿತ್ರ 'ಲಗಾನ್' ನಲ್ಲಿ ಅತ್ಯುತ್ತಮ ನಟನೆಗೆ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

ಇದಲ್ಲದೆ, 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ಚಕ್ ದೇ ಇಂಡಿಯಾ' ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದಿದ್ದರು. ಜಾವೇದ್ ಖಾನ್ ಟಿವಿ ಧಾರಾವಾಹಿ 'ಮಿರ್ಜಾ ಗಾಲಿಬ್'ನಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಝೀ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಆರ್ಟ್ಸ್‌ನಲ್ಲಿ ನಟನಾ ಅಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.

ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ; 'ಓಂ' ಮೇಲೆ ಕಾಲಿಟ್ಟ ನಟ ಶ್ರೇಯಸ್ ವಿರುದ್ಧ ಆಕ್ರೋಶ

ಮುಂಬೈನಲ್ಲಿ ಜನಿಸಿದ್ದ ಆಮ್ರೋಹಿ, ಬಹಳಷ್ಟು ಪೋಷಕ ಪಾತ್ರವನ್ನು ನಿಭಾಯಿಸಿದ್ದಾರೆ. ಬುಹೇತ ಚಿತ್ರಗಳಲ್ಲಿ ಭಿನ್ನ ಪಾತ್ರದ ಮೂಲಕವೇ ಗಮನಸೆಳೆಯುತ್ತಿದ್ದರು. ಅಕ್ಷಯ್‌ ಕುಮಾರ್‌, ಪರೇಶ್‌ ರಾವ್‌ ಹಾಗೂ ಸುನಿಲ್‌ ಶೆಟ್ಟಿ ನಟಿಸಿದ್ದ ಫಿರ್‌ ಹೇರಾ ಫೇರಿ ಚಿತ್ರದಲ್ಲಿ ಅವರ ಪೊಲೀಸ್‌ ಕಾನ್ಸ್‌ಸ್ಟೇಬಲ್ ಪಾತ್ರ ಹಾಗೂ ಫ್ರಖ್ಯಾತ ಒನ್‌ಲೈನರ್‌ಗಳು ಸಿನಿಮಾ ರಸಿಕರನ್ನು ನಗೆಗಡಲಲ್ಲಿ ತೇಲಿಸಿದ್ದವು.

click me!