ಮದ್ವೆಯಾಗಿರುವ ಗೌತಮಿ ಜಾಧವ್ ಮೇಲೆ ಹುಡುಗರಿಗೆ ಕ್ರಶ್‌

By Suvarna NewsFirst Published Oct 4, 2024, 5:06 PM IST
Highlights

ಬಿಗ್ ಬಾಸ್ ಮನೆಗೆ ರಾಯಲ್ ಎಂಟ್ರಿ ಕೊಟ್ಟ ಗೌತಮಿ ಜಾದವ್ ಅವರ ಸೌಮ್ಯ ಸ್ವಭಾವಕ್ಕೆ ಫಿದಾ ಆಗಿ ಅಭಿಮಾನಿಗಳು 'ಮೈ ಕ್ರಶ್' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಗೌತಮಿ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ!

ಬರಹ: ವಿನುತಾ ಪರಮೇಶ್

ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂತ ಎಲ್ಲರಿಗೂ ದರ್ಶನ ಕೊಟ್ಟಿದ್ದ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ನೋಡ ನೋಡುತ್ತಲೇ ಕರ್ನಾಟಕ ಕ್ರಶ್​ ಆದ್ರು. ಬಳಿಕ ಗೀತಾ ಗೋವಿಂದಮ್​ ಸಿನಿಮಾ ಮೂಲಕ ನ್ಯಾಷನಲ್​ಕ್ರಶ್​ ಕೂಡ ಆಗ್ಬಿಟ್ರು. ಈಗ ರಶ್ಮಿಕಾ ಕೈಗೆಟುಕದ ಆಕಾಶ ದೀಪ. ಆದ್ರೀಗ ಕನ್ನಡ ಬಿಗ್​ಬಾಸ್​ ಸೀಸನ್​ 11 ರಲ್ಲಿ ಕಾಣಿಸಿಕೊಂಡಿರೋ ಮತ್ತೊಬ್ಬರು ಕನ್ನಡಿಗರ ನಿದ್ದೆಗೆಡ್ಸಿದ್ದಾರೆ. ಎಲ್ನೊಡಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಪೋಸ್ಟ್​​, ಫೋಟೋಗಳು ರಾರಾಜಿಸ್ತಿವೆ. MY CRUSH ಅಂತ ಹುಡುಗ್ರು ಪೋಸ್ಟ್​ ಹಾಕ್ತಿದ್ದಾರೆ. ಆದ್ರೆ ಈಕೆಗೆ ಈಗಾಗ್ಲೆ ಮದ್ವೆಯೂ ಆಗಿದೆ ಅನ್ನೋದು ಗೊತ್ತಾಗಿ ಶಾಕ್​​ಗೆ ಒಳಗಾಗಿದ್ದಾರೆ!

Latest Videos

ಯೆಸ್​, ನಾವ್​ ಹೇಳ್ತಿರೋದು ರಾಯಲ್​ ಆಗಿ ಎಂಟ್ರಿ ಕೊಟ್ಟ ರೆಬಲ್​ ಲೇಡಿ ಗೌತಮಿ ಜಾದವ್​ ಬಗ್ಗೆ. ಸತ್ಯ ಸೀರಿಯಲ್​ ಮೂಲಕ ಅಮೂಲ್​ ಬೇಬಿಯನ್ನ ಕಾಡಿದ್ದ ಈ ಅಭಿಸಾರಿಕೆ ದೊಡ್ಮನೆಯಲ್ಲಿ ತಮ್ಮ ಹಂಬಲ್​ ಆ್ಯಟಿಟ್ಯೂಡ್​ನಿಂದ್ಲೇ ಎಲ್ಲರ ಮನಸ್ಸು ಗೆಲ್ತಿದ್ದಾರೆ. ಈಕೆಯ ಸರಳತೆಯನ್ನ ಕಂಡ ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಕ್ರಶ್​ ಅಂತ ಪೋಸ್ಟ್​ ಹಾಕ್ತಿದ್ದಾರೆ. ಆದ್ರೆ ಈಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಅಂತ ಸರ್ಚ್​ ಮಾಡಿ ಮದ್ವೆ ಆಗಿರೋದು ಗೊತ್ತಾಗಿ, ಅಯ್ಯೋ ಅಲ್​ರೆಡಿ ಕಮಿಟೆಡ್​ ಅಂತ ಬೇಸರ ವ್ಯಕ್ತ ಪಡಿಸ್ತಿದ್ದಾರೆ.

ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಕಾಲಿಟ್ಟ ಗೌತಮಿ ಜಾಧವ್; ಹೆಸರು ಕೇಳಿ ಮರ್ಯಾದೆ ಕಳೆದನಾ ಧನರಾಜ್!

ಅಂದ್ಹಾಗೆ ಗೌತಮಿ ಜಾದವ್​, ಬಿಗ್​ಬಾಸ್​ ಪ್ರೋಮೋದಲ್ಲಿಯೇ ರಿವಿಲ್​ ಮಾಡಿರೋ ಹಾಗೆ ಈಕೆಗೆ ಈಗಾಗ್ಲೆ ಮದ್ವೆಯಾಗಿದೆ. ಅದೂ ಕೂಡ ಪರಸ್ಪರ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದ್ವೆ ಬಳಿಕ ಬ್ರೇಕ್​ ತೆಗೆದುಕೊಳ್ಳದೆ ಒಂದಷ್ಟು ಸಿನಿಮಾ ಹಾಗೂ ಸೀರಿಯಲ್​ನಲ್ಲಿ ನಟಿಸಿದ್ದಾರೆ. ಹಾಗ್​ ನೋಡಿದ್ರೆ ಗೌತಮಿಗೆ ಸಾಕಷ್ಟು ಫೇಮ್​ ತಂದುಕೊಟ್ಟಿದ್ದು, ಖಾಸಗಿ ವಾಹಿನಿಯಲ್ಲಿ ಬರ್ತಿದ್ದ ಸತ್ಯ ಧಾರವಾಹಿ. ಈ ಸೀರಿಯಲ್​ನಲ್ಲಿ ಮಿಡಲ್​ಕ್ಲಾಸ್​ ಕುಟುಂಬದ ಒಬ್ಬ ಸಾಮಾನ್ಯ ಯುವತಿಯಾಗಿ, ಗಟ್ಟಿಗಿತ್ತಿಯಾಗಿ ಮನೆಯ ಜವಾಬ್ದಾರಿ ಹೊತ್ತು, ಆ ಬಳಿಕ ಶ್ರೀಮಂತ ಹುಡುಗನನ್ನ ವಿವಾಹವಾಗುವ ಕಥೆಯಲ್ಲಿ ನಟಿಸಿ ಎಲ್ಲರ ಮನೆಮಾತಾಗಿದ್ರು. ಅದರಲ್ಲಿಯೂ ಸೀರಿಯಲ್ ಮುಗಿಯುವಾಗ ಪೊಲೀಸ್ ಅಧಿಕಾರಿಯಾಗಿಯೂ ನಟಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು.

ಈ ಸೀರಿಯಲ್​ನಲ್ಲಿ ಗೌತಮಿಯ ಬಾಯ್​ಕಟ್​​ ಹೇರ್​ಸ್ಟೈಲ್, ಟಾಮ್ ಬಾಯ್ ಲುಕ್ಕಿನಿಂದಲೇ ಈಕೆ ಮನೆಮಾತಾಗಿದ್ರು. ಬಿಗ್​ಬಾಸ್​ಗೂ ಅದೇ ಲುಕ್​ನಲ್ಲೇ ಗೌತಮಿ ಎಂಟ್ರಿ ಕೂಡ ಕೊಟ್ಟಿದ್ರು, ಆ ಬಳಿಕ ಟಾಮ್​ಬಾಯ್​ ಲುಕ್​ (ವಿಗ್​) ತೆಗೆದು ಕಣ್ಣೀರು ಸುರಿಸಿದ್ರು, ಸದ್ಯ ಬಿಗ್​ಬಾಸ್​ ಮನೆಯಲ್ಲಿ ಜಗಳ, ಹಾರಾಟ ಕಿರುಚಾಟಗಳೇ ನಡೀತ್ತಿದ್ದು,ಇವರೆಲ್ಲರ ಮದ್ಯೆ ಸೌಮ್ಯ ಸ್ವಭಾವದ ಗೌತಮಿ ಹಲವರ ಕ್ರಶ್​ ಆಗ್ತಿದ್ದಾರೆ. ಆದ್ರೆ ಈಗಾಗ್ಲೇ ಮದ್ವೆ ಆಗಿರೋ ವಿಚಾರ ಗೊತ್ತಾಗಿ ಬೆಸರಗೊಂಡಿರೋದು ಸುಳ್ಳಲ್ಲ.

ಸತ್ಯ ಸೀರಿಯಲ್​ ಮುಗಿದ ಬೆನ್ನಲ್ಲೇ ರಿಯಲ್​ ಪತಿ ಜೊತೆ ಗೌತಮಿ ಜಾಲಿ ಮೂಡ್​- ವಿಡಿಯೋ ವೈರಲ್​

ಕನ್ನಡ ಸೀರಿಯಲ್​ ಮೂಲಕ ಗೌತಮಿ ತಮ್ಮನ ತಾವು ಗುರುತಿಸಿಕೊಂಡಿದ್ರು ಕೂಡ ಈಕೆ ಮರಾಠಿ ಬೆಡಗಿ ಅಂತ ತಿಳಿದ ಮೇಲೆ ಒಂದಿಷ್ಟು ನೆಗೆಟಿವ್​ ಕಾಮೆಂಟ್​ಗಳು ಕೂಡ ಬಂದ್ವು. ಈಕೆ ಕನ್ನಡತಿಯಲ್ಲ, ಮರಾಠಿ ಅಂತ ಒಂದಷ್ಟು ಮಂದಿ ಕಾಲೆಳಿದಿದ್ರು.

click me!