ಪ್ರೀತಿಸಿದ ಬಚ್ಚನ್ ಸಿಗಲಿಲ್ಲ, ಸಿಕ್ಕಿದೋನು ಸತ್ತ, ಈಗ ಇವರ ಜೊತೆ ಲಿನ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ರೇಖಾ!

By Roopa Hegde  |  First Published Oct 4, 2024, 4:42 PM IST

ಬಾಲಿವುಡ್ ಹಿರಿಯ ನಟಿ ರೇಖಾ ಬಗ್ಗೆ ಆಗಾಗ ಹೊಸ ಸುದ್ದಿಗಳು ಕೇಳಿ ಬರ್ತಾನೆ ಇರುತ್ವೆ.  ಅಮಿತಾಬ್ ಪ್ರೀತಿಯಲ್ಲೇ ರೇಖಾ ಜೀವನ ಕಳೆಯುತ್ತಿದ್ದಾರೆ ಅಂದ್ಕೊಂಡವರಿಗೆ ಅಚ್ಚರಿ ವಿಷ್ಯವೊಂದಿದೆ. ರೇಖಾ ಲಿವ್ ಇನ್ ನಲ್ಲಿದ್ದು, ಅವರ್ಯಾರು ಎಂಬುದರ ವಿವರ ಇಲ್ಲಿದೆ. 
 


ಬಾಲಿವುಡ್ ನ ಫ್ಯಾಷನ್ ಐಕಾನ್ ನಟಿ ರೇಖಾ (Bollywood fashion icon Actress Rekha) ಬಗ್ಗೆ ತಿಳಿಯೋದು ಸಾಕಷ್ಟಿದೆ. 69ನೇ ವಯಸ್ಸಿನಲ್ಲೂ 20 ವರ್ಷದ ಹುಡುಗ್ರು ಬಗ್ಗಿ ನೋಡುವಂತೆ ಡಾನ್ಸ್ ಮಾಡ್ತಾರೆ ಮಾದಕ ನಟಿ. ರೇಖಾ ಡ್ರೆಸ್, ಅವರ ಫಿಟ್ನೆಸ್ಗೆ ಫಿದಾ ಆಗದ ಜನರಿಲ್ಲ. ರೇಖಾ ಹೋದಲ್ಲೆಲ್ಲ ಹೊಸ ವೈಬ್ರೇಷನ್ ಇರುತ್ತೆ. ಆದ್ರೆ ರೇಖಾ ಜೀವನದಲ್ಲಿಯೇ ಈ ಖುಷಿ ಸರಿಯಾಗಿ ಸಿಗ್ಲಿಲ್ಲ. ಪ್ರೀತಿ ಸಿಗ್ಲಿಲ್ಲ, ಮದುವೆಯಾದ ಪತಿ ಆತ್ಮಹತ್ಯೆಯನ್ನೇ ಮಾಡ್ಕೊಂಡ ಆ ನಂತ್ರ ರೇಖಾ ಒಂಟಿಯಾಗಿದ್ದಾರೆ ಅಂತ ಜನರು ನಂಬಿದ್ರು. ಆದ್ರೆ ರೇಖಾ ಒಂಟಿಯಾಗಿಲ್ಲ, ಲಿವ್ ಇನ್ (Live in) ನಲ್ಲಿದ್ದಾರೆ ಎಂಬ ಸುದ್ದಿ ಬಿಸಿ ಬಿಸಿ ಚರ್ಚೆಯಾಗ್ತಿದೆ. ಇದಕ್ಕೆ ಕಾರಣವಾಗಿದ್ದು, ರೇಖಾ ದಿ ಅನ್‌ಟೋಲ್ಡ್ ಸ್ಟೋರಿ (Rekha The Untold Story).

ರೇಖಾ ಜೀವನಚರಿತ್ರೆಯನ್ನು ಯಾಸರ್ ಉಸ್ಮಾನ್ ಬರೆದಿದ್ದಾರೆ. ಅದಕ್ಕೆ ರೇಖಾ ದಿ ಅನ್ಟೋಲ್ಡ್ ಸ್ಟೋರಿ ಅಂತ ಹೆಸರಿಟ್ಟಿದ್ದಾರೆ. ಈ ಪುಸ್ತಕದಲ್ಲಿ ರೇಖಾ ವೈಯಕ್ತಿಕ ಜೀವನದ ಅನೇಕ ವಿಷ್ಯಗಳಿವೆ. ಅದ್ರಲ್ಲಿ ಯಾಸಿನ್ ಉಸ್ಮಾನ್, ರೇಖಾ ಲಿವ್ ಇನ್ ನಲ್ಲಿದ್ದಾರೆ ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ರೇಖಾ ಯಾರ ಜೊತೆ ಲಿವ್ ಇನ್ ನಲ್ಲಿರೋದು ಎಂಬುದನ್ನು ಹೇಳಿದ್ದಾರೆ.

Tap to resize

Latest Videos

undefined

ಮದುವೆಯಲ್ಲಿ ಮೆಹಂದಿ ಹಾಕಿರ್ಲಿಲ್ಲ ಸೋನಾಕ್ಷಿ ಸಿನ್ಹಾ, ಇದಕ್ಕೆ ಕಾರಣವಾಗಿದ್ದು ಜಹೀರ್‌ !

ರೇಖಾ ದಿ ಅನ್ಟೋಲ್ಡ್ ಸ್ಟೋರಿ ಪ್ರಕಾರ, ತಮ್ಮ ಪತಿ ಸಾವಿನ ನಂತ್ರ ರೇಖಾಗೆ ಆಸರೆಯಾಗಿದ್ದು ಅವರ ಕಾರ್ಯದರ್ಶಿ ಫರ್ಜಾನಾ. ರೇಖಾ ಇವರ ಜೊತೆಯೇ ಲಿನ್ ಇನ್ ಜೀವನ ನಡೆಸುತ್ತಿದ್ದಾರೆ. ಫರ್ಜಾನಾ, ರೇಖಾಗೆ ಎಷ್ಟು ಹತ್ತಿರ ಅಂದ್ರೆ ಅವರನ್ನು ಬಿಟ್ಟು ಬೇರೆ ಯಾರೂ ರೇಖಾ ರೂಮಿಗೆ ಹೋಗೋದಿಲ್ಲ. ಮನೆ ಕೆಲಸದವರಿಗೂ ರೇಖಾ ರೂಮಿಗೆ ಪ್ರವೇಶವಿಲ್ಲ. ಫರ್ಜಾನಾ, ರೇಖಾರ ಎಲ್ಲ ಕೆಲಸವನ್ನು ನೋಡಿಕೊಳ್ತಾರೆ ಎಂದು ಯಾಸಿನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಈ ಬಗ್ಗೆ ರೇಖಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫರ್ಜಾನಾ ಹಿರಿಯ ನಟಿ ರೇಖಾ ಅವರ ಆಪ್ತ ಕಾರ್ಯದರ್ಶಿ. ಮಾಧ್ಯಮಗಳ ವರದಿ ಪ್ರಕಾರ, ಕಳೆದ 43 ವರ್ಷಗಳಿಂದ ಫರ್ಜಾನಾ, ನಟಿ ರೇಖಾ ನೆರಳಾಗಿದ್ದಾರೆ. 1980 ರಲ್ಲಿ, ಫರ್ಜಾನಾ ರೇಖಾ ಅವರ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. 1986ರಲ್ಲಿ ಕಾರ್ಯದರ್ಶಿ ಕೆಲಸ ಶುರು ಮಾಡಿದ್ರು. ಅಲ್ಲಿಂದ ಇಲ್ಲಿಯವರೆಗೂ ಕಾರ್ಯದರ್ಶಿ ಕೆಲಸವನ್ನು ಇವರೇ ನಿಭಾಯಿಸ್ತಿದ್ದಾರೆ. 1888ರಲ್ಲಿ ಫರ್ಜಾನಾ, ರೇಖಾ ಮನೆ ಸೇರಿದ್ದು, ಈಗ್ಲೂ ಅಲ್ಲಿಯೇ ವಾಸವಾಗಿದ್ದಾರೆ. ಫರ್ಜಾನಾ ಮಹಿಳೆಯಾದ್ರೂ ಸದಾ ಪುರುಷರ ಉಡುಪಿನಲ್ಲಿ ಕಾಣಿಸಿಕೊಳ್ತಾರೆ. ರೇಖಾ ಎಲ್ಲಿಗೆ ಹೋದ್ರೂ ಅವರ ಜೊತೆ ಫರ್ಜಾನಾ ಇರ್ತಾರೆ.

Ignore ಮಾಡಿದ್ರೂ saif ಕೈ ಹಿಡಿದ ಕರೀನಾ, ಸ್ವೀಟಾಗಿ ಸೇಡು ತೀರಿಸಿಕೊಂಡ ಛೋಟಾ ನವಾಬ್

ಅಕ್ಟೋಬರ್ 10, 1954 ರಂದು ಜನಿಸಿರುವ ರೇಖಾ, 4 ವರ್ಷದಲ್ಲೇ ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. 14ನೇ ವಯಸ್ಸಿನಲ್ಲಿ ತಾಯಿ ಆಸೆಯ ಮೇರೆಗೆ ನಾಯಕ ನಟಿಯಾಗಿ ಕಾಣಿಸಿಕೊಂಡ ರೇಖಾ ಸಾಕಷ್ಟು ಕಷ್ಟಪಟ್ಟಿದ್ದರು. ದೋ ಶಿಕಾರಿ ಅವರ ಮೊದಲ ಹಿಂದಿ ಚಿತ್ರ. ನಿಧಾನವಾಗಿ ಬಾಲಿವುಡ್ ನಲ್ಲಿ ತಳವೂರಿದ ರೇಖಾ ಹೆಸರು ಆರಂಭದಲ್ಲಿ ಕಿರಣ್ ಕುಮಾರ್ ಮತ್ತು ವಿನೋದ್ ಮೆಹ್ರಾ ಜೊತೆ ಥಳುಕು ಹಾಕಿಕೊಂಡಿತ್ತು. ಆದ್ರೆ ಹೆಚ್ಚು ಸುದ್ದಿಯಾಗಿದ್ದು ಅಮಿತಾಬ್ ವಿಷ್ಯಕ್ಕೆ. ದೋ ಅಂದಾಜ್ ಸೆಟ್ ನಲ್ಲಿ ಅಮಿತಾಬ್ ಭೇಟಿಯಾಗಿದ್ದ ರೇಖಾಗೆ ಅವರ ಮೇಲೆ ಪ್ರೀತಿ ಚಿಗುರಿತ್ತು. ಆದ್ರೆ ಜಯಾ ಬಚ್ಚನ್ ಕಾರಣಕ್ಕೆ ಬಿಗ್ ಬಿಯಿಂದ ದೂರವಾದ್ರು ರೇಖಾ. ಇದಾದ್ಮೇಲೆ ರೇಖಾ ದೆಹಲಿಯ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು 1990 ರಲ್ಲಿ ಮದುವೆಯಾದ್ರು. ಮದುವೆಯಾದ ಮೂರೇ ತಿಂಗಳಿಗೆ ಮುಖೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರು. 

click me!