
ಜೂನ್.22 ರಂದು ತನ್ನ ಕುಟುಂಬದ ಒಡಗೂಡಿ ಸಿಂಪಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎಲ್ಲಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಅದರಲ್ಲೂ ಒಂದು ಫೋಟೋಗೆ ಸ್ಟೇಟಸ್ ನಲ್ಲಿ " ಯಾರು ಹೇಳಿದ್ದು ನಿಜ ಜೀವನದಲ್ಲಿ ಫೇರಿ ಟೇಲ್ ಇಲ್ಲವೆಂದು? ನಿಮ್ಮ ಜೀವನದ ಕನಸಿನ ರಾಜ ಸಿಕ್ಕರೆ ನಿಮ್ಮದೆ ಫೇರಿ ಟೇಲ್.ಇಲ್ಲಿದ ಮೈ ಮ್ಯಾನ್ And ಮೈ ಫೇರಿ ಟೇಲ್" ಎಂದು ಹಾಕಿ ಪರ್ಪಲ್ ಕಲರ್ ಉಡುಪಿನಲ್ಲಿ ಮಿಂಚಿದ್ರು.
ಅಷ್ಟೇ ಅಲ್ಲದೆ ಕುತ್ತಿಗೆ ಭಾಗದಲ್ಲಿ 'VG' ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಅದನ್ನು ಮೂರು ರೀತಿಯಲ್ಲಿ ವಿವರಿಸಿದ್ದಾರೆ.
ಸದ್ಯ ಅರ್ಚನಾ ವಿವಾಹವೂ ಕೂಡ ನಡೆದಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮದುವೆ ನಡೆದಿದ್ದು, ಮೊದಲನೆ ದಿನ ಹಳದಿ ಬಣ್ಣದ ಹಾಗು ಹೂಗಳ ಟೈಯಾರ ಮಾಡಿಕೊಂಡು ಮೇಹೆಂದಿ ಕಾರ್ಯಕ್ರಮ ನಡೆಸಲಾಗಿದೆ. ನಂತರ ವರ ಪೂಜೆ, ಆರತಕ್ಷತೆ ನಂತರ ದಾರೆ ಮುಹೂರ್ತ ನೆರವೇರಿದೆ. ತಮ್ಮ ದಾಂಪತ್ಯ ಜೀವನದ ಎಲ್ಲಾ ಎಲ್ಲಾ ಫೋಟೋವನ್ನು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಅರ್ಚನಾ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.