ಕಚ್ಚಾ ಬಾದಾಮ್ ಬಳಿಕ ಈಗ ದ್ರಾಕ್ಷಿ ವ್ಯಾಪಾರಿಯ ಹಾಡು ವೈರಲ್

By Suvarna NewsFirst Published Mar 30, 2022, 5:15 PM IST
Highlights

ಇವತ್ತಿನ ದಿನಗಳಲ್ಲಂತೂ ಏನು ಮಾಡಿದರಟೂ ಸೋಷಿಯಲ್ ಮೀಡಿಯಾ (Social Media)ದಲ್ಲಿ ಟ್ರೆಂಡ್ (Trend) ಆಗಿ ಬಿಡುಟತ್ತದೆ. ಈ ಹಿಂದೆ ಕಡಲೇಕಾಯಿ ವ್ಯಾಪಾರಿ ಭುವನ್ ಬದ್ಯಾಕರ್ ಹಾಡಿದ್ದ ಕಚ್ಚಾ ಬಾದಮ್ (Kacha Badam) ಹಾಡು ಎಲ್ಲೆಡೆ ವೈರಲ್ (Viral) ಆಗಿತ್ತು. ಸದ್ಯ ಇದೇ ರೀತಿ ದ್ರಾಕ್ಷಿ ವ್ಯಾಪಾರಿಯೊಬ್ಬ ಹಾಡಿರುವ ಹಾಡು ಸಹ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡ್ತಿದೆ.

ಕಚ್ಚಾ ಬಾದಾಮ್ ಹಾಡು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಡಲೆಕಾಯಿ ವ್ಯಾಪಾರಿ ಹಾಡಿದ ಈ ಹಾಡು ಎಲ್ಲೆಡೆ ವೈರಲ್ (Viral) ಆಗಿತ್ತು. ಈ ಕಚ್ಚಾ ಬಾದಾಮ್‌ ಹಾಡು, ಯಾರ ವಾಟ್ಸಾಪ್‌ ಸ್ಟೇಟಸ್‌ ನೋಡಲಿ ಇನ್ಸ್ಟಾಗ್ರಾಮ್‌  ಅಥವಾ ಯೂಟ್ಯೂಬ್‌ (Youtube) ರೀಲ್ಸ್‌ಗಳೇ ಆಗಲಿ ಎಲ್ಲಿ ನೋಡಿದರಲ್ಲಿ ಕಾಣ ಸಿಗುತ್ತಿತ್ತು. ಕಚ್ಚಾ ಬಾದಾಮ್‌ (Kacha Badam) ಹಾಡು ಹಾಡಿದಾತ ಕಡಲೆಕಾಯಿ ವ್ಯಾಪಾರಿ. ಪಶ್ಚಿಮ ಬಂಗಾಳದ ಭೂಬನ್ ಬಡ್ಯಾಕರ್ (Bhuban Badyakar) ಹೆಸರಿನ ಈ ಕಡಲೆಕಾಯಿ ವ್ಯಾಪಾರಿ ತನ್ನ ದೈನಂದಿನ ಹೊಟ್ಟೆಪಾಡಿಗಾಗಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದು, ಕಡಲೆಕಾಯಿ ಮಾರಿ ಹೋಗುವ ಸಲುವಾಗಿ ಈ ಹಾಡನ್ನು ಹಾಡಿ ಆತ ಜನರನ್ನು ಸೆಳೆಯುತ್ತಿದ್ದ. ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸದ್ಯ ಹೀಗೆಯೇ ದ್ರಾಕ್ಷಿ ಮಾರಾಟ ಮಾರಾಗಾರನ ಹಾಡೊಂದು ವೈರಲ್ ಆಗಿದೆ. ದೇಶಾದ್ಯಂತ ‘ಕಚ್ಚಾ ಬಾದಮ್’ ಟ್ರೆಂಡ್ ಕ್ರೇಜಿ ವೈರಲ್ ಆದ ನಂತರ, ಅನೇಕ ಜನರು ಹಣ್ಣು ಮಾರಾಟಗಾರರ ಅದೇ ರೀತಿಯ ಆಕರ್ಷಕ ಜಿಂಗಲ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Latest Videos

ಇದೀಗ ಅಂತಹುದೇ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡಿದ್ದು, ಹಣ್ಣು ಮಾರಾಟಗಾರರೊಬ್ಬರು ದ್ರಾಕ್ಷಿಯನ್ನು ಮಾರುತ್ತಾ ಹಾಡುತ್ತಿರುವ ದೃಶ್ಯವಿದೆ. ಕಪ್ಪು ದ್ರಾಕ್ಷಿ ಮತ್ತು ಪೇರಳೆಗಳನ್ನು ಮಾರಾಟ ಮಾಡುವ ವ್ಯಕ್ತಿ ಹಾಡು ಹಾಡುತ್ತಾ ಗ್ರಾಹಕರನ್ನು ಸೆಳೆಯುತ್ತಾನೆ. ಒಂದು ಕೈಯಲ್ಲಿ ಕಪ್ ಚಹಾವನ್ನು ಹಿಡಿದುಕೊಂಡು ಲೇಲೋ 15 ರೂಪಾಯಿಗೆ 12 ಅಂಗೂರ್ ಎಂದು ಹಾಡುತ್ತಾನೆ. 

ವೈರಲ್ ಆಗಿರುವ ಕಚ್ಚಾ ಬದಾಮ್ ಅಥವಾ ಪೇರಲ ಮಾರಾಟಗಾರನಂತೆಯೇ, ವಯಸ್ಸಾದ ವ್ಯಕ್ತಿ ತನ್ನ ದ್ರಾಕ್ಷಿಯನ್ನು ಮಾರಲು ಪ್ರಯತ್ನಿಸುತ್ತಿರುವಾಗ ರಾಗವನ್ನು ಗುನುಗುತ್ತಿರುವುದು ಕಂಡುಬರುತ್ತದೆ. ದ್ರಾಕ್ಷಿ ಮಾರಾಟಗಾರನ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಸಾಲಿಮಿನಾಯತ್' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಲಕ್ಷಾಂತರ ವೀಕ್ಷಣೆಗಳು ಮತ್ತು 110 ಲೈಕ್‌ಗಳೊಂದಿಗೆ ವೈರಲ್ ಆಗಿದೆ. ನೂರಾರು ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ.

ಸಖತ್‌ ವೈರಲ್‌ ಆಯ್ತು ಕಡಲೆಕಾಯಿ ವ್ಯಾಪಾರಿಯ ಕಚ್ಚಾ ಬಾದಾಮ್‌ ಹಾಡು

ಆದಾಗ್ಯೂ, ವೀಡಿಯೊದ ನಿಖರವಾದ ಸ್ಥಳ ಇನ್ನೂ ತಿಳಿದಿಲ್ಲ. ವ್ಯಕ್ತಿಯ ವೀಡಿಯೊ ಕಾಣಿಸಿಕೊಂಡಾಗಿನಿಂದ, ಜನರು ಅವನನ್ನು ಭುವನ್ ಬಡ್ಯಾಕರ್‌ಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವರು ಈ ಹಾಡಿನ ರೀಮಿಕ್ಸ್ ಆವೃತ್ತಿಯಲ್ಲಿ ಕೆಲವೇ ಸಮಯದಲ್ಲಿ ನೃತ್ಯ ಮಾಡಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ರೋಮಾಂಚನಗೊಂಡಿರುವ ನೆಟಿಜನ್‌ಗಳು ಈಗ ಈ ಹಾಡಿಗೂ ಒಂದು ಹುಕ್ ಸ್ಟೆಪ್‌ಗಾಗಿ ಕಾಯುತ್ತಿದ್ದಾರೆ. ಪೋಸ್ಟ್‌ನಲ್ಲಿ ಹಲವರು ನಗು ಎಮೋಜಿಗಳನ್ನು ಹಾಕಿದ್ದಾರೆ.

ಈ ಹಿಂದೆ ಕಡಲೇಕಾಯಿ ವ್ಯಾಪಾರಿ ಭುವನ್ ಬದ್ಯಾಕರ್ ಕಚ್ಚಾ ಬಾದಮ್ ಹಾಡನ್ನು ಸಂಯೋಜಿಸಿ ಹಾಡಿದ್ದರು, ಅವರು ಕಡಲೆಕಾಯಿಯನ್ನು ಮಾರಾಟ ಮಾಡುವ ಬಿರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುವಾಗ ಖರೀದಿದಾರರನ್ನು ಆಕರ್ಷಿಸಲು ಜಿಂಗಲ್ ಅನ್ನು ರಚಿಸಿದ್ದರು.

ವೈರಲ್‌ ಹಾಡು ಕಚ್ಚಾಬಾದಾಮ್ ಗಾಯಕನಿಗೆ ಮೂರು ಲಕ್ಷ ನೀಡಿದ ಮ್ಯೂಸಿಕ್ ಕಂಪನಿ

ಕಡಲೆಕಾಯಿಗಳನ್ನು ಮಾರಾಟ ಮಾಡಲು ಹಳ್ಳಿಗಳಿಗೆ ಬರಿಗಾಲಿನಲ್ಲಿ ಸೈಕಲ್‌ನಲ್ಲಿ ಭೂಬನ್ ಬಡ್ಯಾಕರ್ ಹೋಗುತ್ತಾರೆ. ಆದರೆ ಅವರ ಆ ಹಾಡಿನ ಸ್ವರ ಎಲ್ಲರನ್ನು ಸೆಳೆದಿತ್ತು. ಭೂಬನ್  ಅವರ ಈ  ಆಕರ್ಷಕ ಹಾಡು ಅವರನ್ನುಆನ್‌ಲೈನ್‌ನಲ್ಲಿ ಹಿಟ್ ಮಾಡಿತ್ತು. ವೀಡಿಯೋದಲ್ಲಿ, ಭುವನ್ ತನ್ನಿಂದ ಕಡಲೆಕಾಯಿ  ಖರೀದಿಸಲು ಬರುವ ಗ್ರಾಹಕರನ್ನು ಆಕರ್ಷಿಸಲು 'ಬದಮ್ ಬದಮ್ ಕಚಾ ಬದಮ್' ಎಂದು ಹಾಡುತ್ತಿರುವುದು ವೈರಲ್ ಆಗಿತ್ತು.

click me!