ಸ್ಫೂರ್ತಿಯ ಸೆಲೆ: ಕೋಚಿಂಗ್ ಪಡೆಯದೇ IAS ರ್ಯಾಂಕ್ ಗಳಿಸಿದ ಧೀರೆ

By Suvarna News  |  First Published Feb 14, 2021, 5:03 PM IST

ಭಾರತದಲ್ಲಿ ಅತಿ ಕ್ಲಿಷ್ಟಕರ ಸ್ಪರ್ಧಾತ್ಮಕ ಪರೀಕ್ಷೆ ಎಂದರೆ, ಯುಪಿಎಸ್ಎಸ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು. ಈ ಐಎಎಸ್ ಪರೀಕ್ಷೆಯಲ್ಲಿ ಯುವತಿಯೊಬ್ಬಳು ತನ್ನ ಮೊದಲ ಯತ್ನದಲ್ಲೇ ರ್ಯಾಂಕ್ ಗಳಿಸಲು ಯಶಸ್ವಿಯಾಗಿದ್ದಾಳೆ. ಹಾಗಂತ ಅವಳು ಯಾವುದೇ ಕೋಚಿಂಗ್ ಪಡೆದುಕೊಂಡಿಲ್ಲ ನೆನಪಿರಲಿ.


ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಎರಡು ಮೂರು ಸಲ ಪ್ರಯತ್ನಿಸಿದ್ರೂ ಕೆಲವರಿಗೆ ತಮ್ಮ ಗುರಿ ಮುಟ್ಟಲಾಗುವುದಿಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆಯನ್ನ ಮುಗಿಸಲೇಬೇಕಂದು ಪಣ ತೊಟ್ಟು ತಯಾರಿ ನಡೆಸ್ತಾರೆ. ಸರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಕೋಚಿಂಗ್ ಸೆಂಟರ್‌ಗೆ ಸೇರಿ, ದಿನದ ೨೪ ಗಂಟೆಯೂ ಪರಿಶ್ರಮ ಪಟ್ಟು ಅಭ್ಯಾಸ ನಡೆಸುತ್ತಾರೆ.

ಇಷ್ಟೆಲ್ಲ ಪ್ರಯತ್ನ ಪಟ್ಟರೂ ಕಬ್ಬಿಣದ ಕಡಲೆಯೇ ಆಗಿರುವ ಸಿವಿಲ್ ಸರ್ವೀಸ್ ಪರೀಕ್ಷೆಯನ್ನ ಯಶಸ್ವಿಗೊಳಿಸಲು ಕೆಲವರಿಗೆ ಸಾಧ್ಯವಾಗುವುದೇ ಇಲ್ಲ. ತಾವು ಅಂದುಕೊಂಡ ಹುದ್ದೆ ಪಡೆಯಲಾಗದೇ, ಕಡಿಮೆ ರ್ಯಾಕಿಂಗ್ ಬಂದು ಯಾವುದೋ ಮನಸ್ಸಿಲ್ಲದ ಹುದ್ದೆಯಲ್ಲೇ ಮುಂದುವರಿಯುತ್ತಾರೆ. ಇನ್ನು ಕೆಲವರು ಛಲದಿಂದ ಮೊದಲ ಯತ್ನದಲ್ಲೇ ಸಿಕ್ಕ ಹುದ್ದೆಯಲ್ಲಿದ್ದುಕೊಂಡೇ ಉನ್ನತ ಹುದ್ದೆಗೇರಲು ಮತ್ತೊಮ್ಮೆ ಪರೀಕ್ಷೆ ಬರೆದು ಸಕ್ಸಸ್ ಕೂಡ ಆಗ್ತಾರೆ.

Latest Videos

undefined

ಇನ್ನೂ ಕೆಲವರು ಫಸ್ಟ್ ಅಟೆಂಪ್ಟ್‌ನಲ್ಲೇ ಯಶಸ್ಸು ಕಾಣ್ತಾರೆ. ಅಂಥವರ ಸಾಲಿಗೆ ಸೇರ್ತಾರೆ ಐಐಟಿ ಬಾಂಬೆ ಪದವೀಧರೆ ಆಗಿರೋ ಸಿಮಿ ಕರಣ್. 2019 ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯನ್ನ ತನ್ನ ಮೊದಲ ಪ್ರಯತ್ನದಲ್ಲಿ ಭೇದಿಸುವಲ್ಲಿ ಸಿಮಿ ಯಶಸ್ವಿಯಾಗಿದ್ದಾರೆ.

ಮೊಮ್ಮಗಳ ಕನಸು ಈಡೇರಿಸಲು ಮನೆ ಮಾರಿ ಆಟೋದಲ್ಲಿ ಜೀವನ ನಡೆಸುತ್ತಿರುವ ಅಜ್ಜ!

ಸಿಮಿ ಕರಣ್ ತನ್ನ ಮೊದಲ ಪ್ರಯತ್ನದಲ್ಲೇ ಕೋಚಿಂಗ್ ಇಲ್ಲದೆ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೩೧ನೇ ರ್ಯಾಂಕ್ ಪಡೆದಿದ್ದಾರೆ. ಐಐಟಿಯಿಂದ  ಬಂದು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿರುವ ಸಿಮಿ ಕರಣ್ ಜರ್ನಿ, ಸ್ಫೂರ್ತಿ ಮತ್ತು ಪ್ರೇರಣೆಯಿಂದ ತುಂಬಿದೆ.

ಸಿಮಿ ಕರಣ್ ಅವರು ಸಿವಿಲ್ ಸರ್ವೀಸಸ್ ಪರೀಕ್ಷೆ ಎದುರಿಸುವಾಗ ಅವರಿಗೆ ಕೇವಲ 22 ವರ್ಷ. ಸಿಮಿ ಕರಣ್ ಒಡಿಶಾದಲ್ಲಿ ಜನಿಸಿದ್ರೂ, ಬೆಳೆದಿದ್ದು ಮಾತ್ರ ಚತ್ತೀಸ್‌ಗಡ್‌ನ ಭಿಲೈನಲ್ಲಿ. ಭಿಲೈನ ಡಿಪಿಎಸ್ ಶಾಲೆಯಲ್ಲಿ ಸಿಮಿ ಶಾಲಾ ಶಿಕ್ಷಣವನ್ನ ಪೂರೈಸಿದ್ದಾರೆ.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು

ತನ್ನ 12 ನೇ ತರಗತಿ ಪರೀಕ್ಷೆಗೆ ಅರ್ಹತೆ ಪಡೆದ ಕೂಡಲೇ ಸಿಮಿ, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದರು. ಅಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದ್ದಾರೆ. ತಾಯಿ ಶಿಕ್ಷಕಿಯಾಗಿದ್ದು, ತಂದೆ ಭಿಲೈ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಾಲ್ಯದಲ್ಲೇ ಸಿಮಿ ಐಐಟಿ ಬಾಂಬೆಯಲ್ಲಿ ತನ್ನ ಅಂತಿಮ ವರ್ಷದಲ್ಲಿರೋವಾಗಲೇ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಎಕ್ಸಾಂ ಎದುರಿಸಬೇಕೆಂಬ ನಿರ್ಧಾರ ಕೈಗೊಂಡಿದ್ದರು. ಇನ್ಸ್ಟಿಟ್ಯೂಟ್‌ನಲ್ಲಿ ‘ಅಭಿಯಾಸಿಕಾ’ ಎಂಬ ಕಾರ್ಯಕ್ರಮವಿದೆ. ಅಲ್ಲಿ ಅನನುಭವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಲಿಸುವಾಗ, ಸಿಮಿ ಕರಣ ಜನರ ಸೇವೆ ಮಾಡಲು ಬಯಸಿದ್ದರು. ಅದರಂತೆ ನಾಗರಿಕ ಸೇವೆಗಳ ಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಿದ್ದಾರೆ.

ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

ಸಿಮಿ ಕರಣ್ ಪರೀಕ್ಷಾ ತಯಾರಿ ತಂತ್ರ ತುಂಬಾ ಸರಳ, ಕೇಂದ್ರೀಕೃತ ಮತ್ತು ಸಮತೋಲಿತವಾಗಿತ್ತು. ಸಿಮಿ ಎಂದಿಗೂ ಗಂಟೆಗಟ್ಟಲೇ ಅಧ್ಯಯನದ ಮೇಲೆ ಗಮನ ಹರಿಸಲಿಲ್ಲ. ಆದರೆ ವಿಷಯ ಅಥವಾ ಅಧ್ಯಾಯಕ್ಕಾಗಿ ದೈನಂದಿನ ಅಥವಾ ಗಂಟೆಯ ಆಧಾರದ ಮೇಲೆ ಅಲ್ಪಾವಧಿ ಗುರಿಗಳನ್ನು ಹೊಂದಿಸಿಕೊಂಡು ಅಭ್ಯಾಸ ಮಾಡುತ್ತಿದ್ದರು. ಸಿಮಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಪರೀಕ್ಷೆಗೆ ತಯಾರಿ ನಡೆಸಿ ಅಧ್ಯಯನ ಮಾಡಿದರು. ಪದವಿ ಪರೀಕ್ಷೆಗಳು ಮತ್ತು ನಾಗರಿಕ ಸೇವೆಗಳ ಪರೀಕ್ಷೆಗೆ ಉದಾರವಾದ ಸಮಯವನ್ನು ಮೀಸಲಿಟ್ಟರು.

ʼಅಧ್ಯಯನದ ಗುಣಮಟ್ಟ, ಸೀಮಿತ ಸಂಪನ್ಮೂಲಗಳ ಬಗ್ಗೆ ಗಮನಹರಿಸುತ್ತಿದ್ದೆ. ಜೊತೆಗೆ ಮನಸ್ಸಿನ ವಿಶ್ರಾಂತಿಗಾಗಿ ಜಾಗಿಂಗ್ ಮಾಡುವುದು, ಸ್ಟ್ಯಾಂಡ್ ಅಪ್ ಹಾಸ್ಯವನ್ನು ನೋಡುವ ಮೂಲಕ ಮನರಂಜನೆ ಪಡೆಯುತ್ತಿದ್ದೆ ಅಂತಾರೆ ಸಿಮಿ. ಇದು ನನ್ನೊಬ್ಬಳ ವೈಯಕ್ತಿಕ ಪ್ರಯತ್ನವಲ್ಲ, ಸಾಮೂಹಿಕ ಪ್ರಯತ್ನ ಅನ್ನೋದು ಸಿಮಿ. ಯಾಕಂದ್ರೆ ತಮ್ಮ ಪೋಷಕರು, ಶಿಕ್ಷಕರು, ಸ್ನೇಹಿತರ ಮಾರ್ಗದರ್ಶನ ಸಿಕ್ಕಿದೆ.ನನ್ನ ಈ ಸಾಧನೆಗೆ ಅವರೆಲ್ಲಾ ತುಂಬಾ ಮಾನಸಿಕ ಬೆಂಬಲ ನೀಡಿದ್ದಾರೆ ಅಂತ ಹೇಳುತ್ತಾರೆ ಸಿಮಿ ಕರಣ್.  

click me!