ಮಗಳ ವಾಟ್ಸಪ್ ಕಿತ್ತಾಟ,  ಅಕ್ಕ-ಪಕ್ಕದ ಮನೆ ಗಲಾಟೆಯಲ್ಲಿ ತಾಯಿ ಹತ್ಯೆ!

By Contributor AsianetFirst Published Feb 14, 2022, 4:27 PM IST
Highlights

* ಮಹಿಳೆಯ ಹತ್ಯೆಯಲ್ಲಿ ಅಂತ್ಯವಾದ ವಾಟ್ಸಪ್ ವಿವಾದ
* ಯುವತಿಯೊಬ್ಬಳು ವಾಟ್ಸಪ್ ಸ್ಟೇಟಸ್ ಅಪ್ ಡೇಟ್ ಮಾಡಿದಕ್ಕೆ ಪಕ್ಕದ ಮನೆಯವರ ವಿರೋಧ
* ಮನೆಗೆ ದಾಳಿ ಮಾಡಿ  ಗಲಾಟೆ ಮಾಡಿದ ಇಡೀ ಕುಟುಂಬ

ಮುಂಬೈ(ಫೇ. 14)  ವಾಟ್ಸಪ್ (WhatsApp) ಸ್ಟೇಟಸ್ ಕುರಿತು ಎರಡು ಕುಟುಂಬಗಳ ನಡುವೆ ಉಂಟಾದ ಜಗಳ ಮಹಿಳೆಯೊಬ್ಬಳ ಕೊಲೆಯಲ್ಲಿ (Murder)ಅಂತ್ಯವಾಗಿದೆ.   ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯ ಬೋಯಿಸರ್‌ ನಿಂದ ಘಟನೆ ವರದಿಯಾಗಿದೆ. 

ಮಗಳು ಪೋಸ್ಟ್ ಮಾಡಿದ ಸ್ಟೇಟಸ್ ಕಾರಣಕ್ಕೆ ಅಮ್ಮನ ಕೊಲೆಯಾಗಿದೆ. ಎರಡು ಕುಟುಂಬಗಳ ನಡುವೆ ಘರ್ಷಣೆ ಸಂಭವಿಸಿ 48 ವರ್ಷದ ಮಹಿಳೆಯೊಬ್ಬರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಯಿಸರ್‌ನ ಶಿವಾಜಿ ನಗರದ ನಿವಾಸಿ ಲೀಲಾವತಿ ದೇವಿ ಪ್ರಸಾದ್ ಕೊಲೆಯಾಗಿದೆ.  20 ವರ್ಷದ ಕಾಲೇಜು ವಿದ್ಯಾರ್ಥಿನಿ ಪ್ರೀತಿ ಪ್ರಸಾದ್ ತನ್ನ ವಾಟ್ಸಾಪ್ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾಳೆ.  ಆದರೆ ಇದನ್ನು ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದ 17 ವರ್ಷದ ಪಕ್ಕದ ಮನೆ ಹುಡುಗಿ ಇಷ್ಟಪಟ್ಟಿಲ್ಲ. ಪಕ್ಕದ ಮನೆಯ ಹುಡುಗರು ಪ್ರೀತಿ ಮನೆಗೆ ಬಂದು ದಬಾಯಿಸಿದ್ದಾರೆ.  ಗಲಾಟೆ ಕೈ ಕೈ ಮಿಕಾಯಿಸುವ ಹಂತಕ್ಕೆ ಬಂದಿದೆ. ಈ ವೇಳೆ ಪ್ರೀತಿ ತಾಯಿ ಜಗಳ ಬಿಡಸಲು ಮುಂದಾಗಿದ್ದಾರೆ. ಆದರೆ ಅವರ ಮೇಲೆಯೂ ಹಲ್ಲೆ ಮಾಡಲಾಗಿದೆ.  ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ.

ಹದಿನೇಳು ವರ್ಷದ ಬಾಲಕಿ,   ಆಕೆಯ ತಾಯಿ, ಸಹೋದರ ಮತ್ತು ಸಹೋದರಿಯ ವಿರುದ್ಧ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನುಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮತ್ತು ಭಾನುವಾರದಂದು ತಾಯಿ, ಸಹೋದರ ಮತ್ತು ಸಹೋದರಿಯನ್ನು ಬಂಧಿಸಿದ್ದೇವೆ. ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಫೆಬ್ರವರಿ 15 ರವರೆಗೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದೇವೆ.  ವಾಟ್ಸಾಪ್  ಸ್ಟೇಟಸ್ ಏನು ಹಾಕಿದ್ದಳು ಎಂಬುದನ್ನು ಬಹಿರಂಗ ಮಾಡಲು ಅಸಾಧ್ಯ.  ಕ್ಷುಲ್ಲಕ ಕಾರಣಕ್ಕೆ ಇಂಥ ನಿರ್ಧಾರ ಮಾಡುವ ಅಗತ್ಯ ಇರಲಿಲ್ಲ ಎಂದು  ಬೋಯಿಸರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುರೇಶ್ ಕದಂ ಹೇಳಿದ್ದಾರೆ.

ಅಳುತ್ತಿದ್ದ ಗೆಳತಿಯ ಕಂದನ ಹತ್ಯೆ: ಮುಂಬೈನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.  ಹಾಲಿಗಾಗಿ ಅಳಲು ಪ್ರಾರಂಭಿಸಿದ ತನ್ನ ಗೆಳತಿಯ ಎರಡು ವರ್ಷದ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನ ಬಂಧನವಾಗಿದೆ. 22 ವರ್ಷದ ಪೂಜಾ ವಾಘ್ ತನ್ನ ಸಂಗಾತಿಗೆ ವಿಚ್ಛೇದನ ನೀಡಿದ ನಂತರ ಪ್ರೇಮಿ ಆದಿಲ್ ಮುನಾವರ್ ಖಾನ್ ಜೊತೆ ವಾಸಿಸುತ್ತಿದ್ದಳು. ಖಾನ್ ಜತೆ ಮನೆ ಗಂಡನ ಬಿಟ್ಟು ಬರುವಾಗ ಮಹಿಳೆ ಗರ್ಭಿಣಿಯಾಗಿದ್ದಳು. ನಂತರ ಜನಿಸಿದ್ದ ಮಗುವಿನ ಮೇಲೆ ಖಾನ್ ಸಿಟ್ಟು ತೋರಿಸುತ್ತಿದ್ದು ಹತ್ಯೆ ಮಾಡಿದ್ದ. 

ಡಿಸೆಂಬರ್ 2021ರಲ್ಲಿ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ ಬ್ಯಾನ್:  ಡಿಸೆಂಬರ್‌ನ  2021ರಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು  ವಾಟ್ಸಾಪ್ ತಿಳಿಸಿತ್ತು. 

ಈ ಅಂಶ ಶೇರ್ ಮಾಡಿದರೆ ಜೈಲೂಟ:  ವಾಟ್ಸಾಪ್‌ನಲ್ಲಿ ಅಡ್ಮಿನ್ ಗಳಿಗೆ ಸಂಸ್ಥೆ ಹಲವು ಎಚ್ಚರಿಕೆ ನೀಡಿತ್ತುಗ್ರೂಪ್‌ನಲ್ಲಿ ಯಾವುದೇ ಅಕ್ರಮ ನಡೆದರೆ ಅದನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಗ್ರೂಪ್ ಅಡ್ಮಿನ್ ಜವಾಬ್ದಾರಿಯಾಗಿದೆ. ನೀವು ವಾಟ್ಸಾಪ್ ಗುಂಪಿನ ನಿರ್ವಾಹಕರಾಗಿದ್ದರೆ, ಗುಂಪಿನಲ್ಲಿ ಹಂಚಿಕೊಳ್ಳಲಾದ ವಿಷಯದ ಪ್ರಕಾರಗಳ ಬಗ್ಗೆ ನೀವು ತಿಳಿದಿರಬೇಕು. ಅಲ್ಲದೆ, ಗುಂಪಿನಲ್ಲಿ ಯಾವ ರೀತಿಯ ವಿಷಯವನ್ನು ಚರ್ಚಿಸಬೇಕು ಎಂಬುದರ ಬಗ್ಗೆ ಅರಿವಿರಬೇಕು. ಇಲ್ಲದಿದ್ದರೆ ವಾಟ್ಸಪ್‌ನಲ್ಲಿ ಶೇರ್‌ ಮಾಡಲಾದ ಕೆಲವು ಸಂಗತಿಗಳಿಂದ  ಸೆರೆವಾಸ ಸಾಧ್ಯ ಎಂದು ತಿಳಿಸಿತ್ತು. ಅಶ್ಳಿಲ ವಿಚಾರ, ಮಕ್ಕಳ ಪೋರ್ನೋಗ್ರಫಿ,  ನಿಂದನೆ, ಭದ್ರತೆಗೆ  ಭಂಗ ತರುವಂತಹ ವಿಚಾರಗಳನ್ನು ಹಂಚಿಕೊಂಡರೆ ಅಡ್ಮಿನ್ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿತ್ತು. 

 

click me!