ವಿವಾಹಿತಳ ಮನೆಯಲ್ಲಿ ಸಿಕ್ಕಿಬಿದ್ದು ಆಕೆಯನ್ನು ವರಿಸಿದ 20 ದಿನಕ್ಕೆ ಗರ್ಲ್‌ಫ್ರೆಂಡ್ ಜೊತೆಗೂ ಮದುವೆ!

Published : May 13, 2024, 07:41 PM IST
ವಿವಾಹಿತಳ ಮನೆಯಲ್ಲಿ ಸಿಕ್ಕಿಬಿದ್ದು ಆಕೆಯನ್ನು ವರಿಸಿದ 20 ದಿನಕ್ಕೆ ಗರ್ಲ್‌ಫ್ರೆಂಡ್ ಜೊತೆಗೂ ಮದುವೆ!

ಸಾರಾಂಶ

ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ವಿವಾಹಿತ ಮಹಿಳೆ ಮನೆಗೆ ಕದ್ದು ಮುಚ್ಚಿ ಹೋಗಿ ಬರುತ್ತಿದ್ದ. ಆದರೆ ಗ್ರಾಮಸ್ಥರು ರೆಡ್‌ಹ್ಯಾಂಡ್ ಆಗಿ ಹಿಡಿದು ಮದುವೆ ಮಾಡಿಸಿದ್ದಾರೆ. ಇದಾದ 20 ದಿನಕ್ಕೆ ಸುದೀರ್ಘ ವರ್ಷಗಳಿಂದ ಪ್ರೀತಿಸುತ್ತಿದ್ದ ಗರ್ಲ್‌ಫ್ರೆಂಡ್ ಮನೆಯಲ್ಲೂ ಸಿಕ್ಕಿ ಬಿದ್ದು ಆಕೆಯನ್ನೂ ವರಿಸಿದ ಛಲದಂಕಮಲ್ಲನ ರೋಚಕ ಸ್ಟೋರಿ ಇಲ್ಲಿದೆ.  

ಪಾಟ್ನಾ(ಮೇ.13) ಆತನಿಗೆ ವಯಸ್ಸು 19. ಮದುವೆಯಾಗುವ ವಯಸ್ಸು ಆಗಿಲ್ಲ. ಆದರೆ ಛಲದಂಕಮಲ್ಲ. ಹದಿಹರೆಯದ ಹುಡುಗನಿಗೆ ಅದೇ ಗ್ರಾಮದಲ್ಲೊಬ್ಬಳು ಗರ್ಲ್‌ಫ್ರೆಂಡ್. ಇದು ವರ್ಷಗಳ ಪ್ರೀತಿ. ಇದರ ನಡುವೆ ಫೇಸ್‌ಬುಕ್‌ನಲ್ಲಿ ವಿವಾಹಿತ ಮಹಿಳೆಯೊಬ್ಬಳು ಪರಿಚವಾಗಿದ್ದಾಳೆ. ಆಕೆಯ ಜೊತೆಗೂ ಪ್ರೀತಿ ಶುರು ಮಾಡಿದ್ದಾನೆ. ಕದ್ದುಮುಚ್ಚಿ ಆಕೆಯ ಮನೆಗೂ ಹೋಗಿ ಬರುತ್ತಿದ್ದ. ಆದರೆ ರೆಡ್‌ಹ್ಯಾಂಡ್ ಆಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದ. ಹೀಗಾಗಿ ಅದೇ ಕ್ಷಣದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದಾರೆ. ಮದುವೆಯಾಗಿ 20 ದಿನಕ್ಕೆ ಮೆಲ್ಲನೆ ಗರ್ಲ್‌ಫ್ರೆಂಡ್ ಮನಗೆ ತೆರಳಿದ ಈತ ಅಲ್ಲೂ ಸಿಕ್ಕಿಬಿದ್ದಿದ್ದಾನೆ. ಯುವತಿಯ ಪೋಷಕರು ಹಿಡಿದು ಅಲ್ಲೊಂದು ಮದುವೆ ಮಾಡಿಸಿದ್ದಾರೆ. 20 ದಿನದಲ್ಲಿ ಎರಡೆರಡು ಮದುವೆಯಾದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ.

ಅಕ್ಷರ ಗ್ರಾಮದ 19 ವರ್ಷದ ವಿನೋದ್ ಕುಮಾರ್, ಗ್ರಾಮದಲ್ಲಿ ಡಿಜೆ, ಲೈಟಿಂಗ್ಸ್ ಸೇವೆ ನೀಡುವ ಕೆಲಸ ಮಾಡುತ್ತಿದ್ದ. ಈ ವೇಳೆ ಹದಿ ಹರೆಯದ ಹುಡಿಗಿ ಗಿರಿಜಾ ಕುಮಾರಿ ಪರಿಚವಾಗಿ ಪ್ರೀತಿಗೆ ತಿರುಗಿದೆ. ಸರಿಸುಮಾರು ವರ್ಷಗಳು ಉರುಳಿದೆ. ಇವರ ಪ್ರೀತಿ ಗಾಢಗೊಂಡಿದೆ. ಆದರೆ ಮದುವೆಯಾಗಲು ಈತನಿಗೆ ವಯಸ್ಸಾಗಿಲ್ಲ. ಗರ್ಲ್‌ಫ್ರೆಂಡ್ ಪೋಷಕರು ಇಲ್ಲದ ವೇಳೆ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಇದರ ನಡುವೆ ಫೇಸ್‌ಬುಕ್‌ನಲ್ಲಿ ಪ್ರೀತಿ ಅನ್ನೋ ಮಹಿಳೆಯೊಬ್ಬಳ ಪರಿಚಯವಾಗಿದೆ.

‘ಪ್ರೇತ ಮದುವೆ’ಗೆ ಪ್ರೇತ ವರ ಬೇಕಾಗಿದ್ದಾರೆ: ಚರ್ಚೆಗೆ ಕಾರಣವಾದ ಜಾಹೀರಾತು!

ಫೇಸ್‌ಬುಕ್‌ನಲ್ಲಿ ಪರಿಚಯವಾದ ಪ್ರೀತಿ ವಿವಾಹಿತೆ. ಮಗಳೂ ಕೂಡ ಇದ್ದಾಳೆ. ವಿನೋದ್ ಹಾಗೂ ಪ್ರೀತಿ ನಡುವಿನ ಪರಿಚಯ ಪ್ರೀತಿಗೆ ತಿರುಗಿದೆ. ಪ್ರೀತಿ ಹಾಗೂ ಗಿರಿಜಾ ಇಬ್ಬರನ್ನೂ ಪ್ರೀತಿಸುತ್ತಿದ್ದ ವಿನೋದ್ ಕುಮಾರ್ ಎಲ್ಲವನ್ನೂ ಯಾರಿಗೂ ಗೊತ್ತಗಾದಂತೆ ನಿರ್ವಹಿಸುತ್ತಿದ್ದ. ಇದರ ನಡುವೆ ಫೇಸ್‌ಬುಕ್ ಲವ್ ಪ್ರೀತಿಯನ್ನು ಭೇಟಿಯಾಗಲು ಆಕೆಯ ಮನಗೆ ಹೋಗಿದ್ದಾನೆ. 

ಕದ್ದು ಮುಚ್ಚಿ ಪ್ರೀತಿ ಮನೆಗೆ ಬಂದ ವಿನೋದ್ ಕುಮಾರ್ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವಿನೋದ್ ಲಾಕ್ ಆಗಿದ್ದಾನೆ. ಸಿಕ್ಕಿ ಬಿದ್ದ ಬೆನ್ನಲ್ಲೇ ವಿವಾಹಿತ ಮಹಿಳೆಯನ್ನು ವಿಚಾರಿಸಿದ ಗ್ರಾಮಸ್ಥರಿಗೆ ಇವರಿಬ್ಬರ ಪ್ರೀತಿಯ ವಿಷಯ ಗೊತ್ತಾಗಿದೆ. ಹೀಗಾಗಿ ಗ್ರಾಮಸ್ಥರು ದೇವಸ್ಥಾನಕ್ಕೆ ಕರೆದುಕೊಂಡು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಪಂಚಾಯಿತಿ ಸದಸ್ಯರನ್ನು ಕರೆಯಿಸಿ ದಾಖಲೆ ಪತ್ರಕ್ಕೆ ಗ್ರಾಮಸ್ಥರು ಸೂಚಸಿದ್ದಾರೆ.

ಇಲ್ಲಿ ಹೆಂಡತಿ ಬಾಡಿಗೆಗೆ ಸಿಗುತ್ತಾಳೆ: ಹೀಗೂ ಒಂದು ಪದ್ಧತಿ ಇದೆ!

ಪ್ರೀತಿಯನ್ನು ಮದುವೆಯಾದ ವಿನೋದ್ ಕುಮಾರ್ ಕೆಲ ದಿನ ಆಕೆಯ ಮನೆಯಲ್ಲಿ ಉಳಿದುಕೊಂಡಿದ್ದಾನೆ. ಇದರ ನಡುವೆ ವಿನೋದ್ ಕುಮಾರ್, ಗರ್ಲ್‌ಫ್ರೆಂಡ್ ಗಿರಿಜಾ ಭೇಟಿಯಾಗಲು ತೆರಳಿದ್ದಾನೆ. ಪೋಷಕರು ಇಲ್ಲದ ವೇಳೆ ಆಕೆಯ ಮನೆಗೆ ತೆರಳಿದ ವಿನೋದ್ ಕುಮಾರ್ ಎಡವಟ್ಟು ಮಾಡಿಕೊಂಡಿದ್ದಾನೆ. ದಿಢೀರ್ ಗಿರಿಜಾ ಕುಮಾರಿ ಪೋಷಕರು ಮರಳಿದ ಕಾರಣ ವಿನೋದ್ ಕುಮಾರ್ ಸಿಕ್ಕಿ ಬಿದ್ದಿದ್ದಾನೆ. ಪೋಷಕರು, ಕುಟುಂಬಸ್ಥರು ಸೇರಿ ವಿನೋದ್ ಕುಮಾರ್ ಹಾಗೂ ಗಿರಿಜಾ ಮದುವೆಯನ್ನು ದಿಢೀರ್ ಮಾಡಿದ್ದರೆ. 20 ದಿನದಲ್ಲಿ 2 ಮದುವೆಯಾದ ವಿನೋದ್ ಕುಮಾರ್  ವಿರುದ್ದ ಮೊದಲ ಪತ್ನಿ ಪ್ರೀತಿ ದೂರು ನೀಡಿದ್ದಾಳೆ. ಇತ್ತ ಎರಡನೇ ಪತ್ನಿ ಗಿರಿಜಾ ಜೊತೆಯಾಗಿರಲು ನನ್ನ ಅಭ್ಯಂತರವಿಲ್ಲ. ನಾನು ವಿನೋದ್ ಕುಮಾರ್ ಬಿಟ್ಟುಕೊಡುವಿದಿಲ್ಲ. ಮೂವರು ಜೊತೆಯಾಗಿರೋಣ ಎಂದು ಸಲಹೆ ನೀಡಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ