ಒಂಟೆ ಸವಾರಿ ಬಳಿಕ ನಿಗೂಢವಾಗಿ ಕಾಣೆಯಾಗಿದ್ದ ಮಕ್ಕಳು ಚರಂಡಿಯಲ್ಲಿ ಶವವಾಗಿ ಪತ್ತೆ!

By Ravi Janekal  |  First Published May 13, 2024, 4:17 PM IST

ವಿಜಯಪುರದ ಗಜ್ಜಿನಗಟ್ಟಿ ಕಾಲೋನಿಯಿಂದ ನಿನ್ನೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಕ್ಕಳು ಇಂದು ಇಂಡಿ ರಸ್ತೆಯ ಶಾಂತಿನಿಕೇತನ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


ವಿಜಯಪುರ (ಮೇ.13): ವಿಜಯಪುರದ ಗಜ್ಜಿನಗಟ್ಟಿ ಕಾಲೋನಿಯಿಂದ ನಿನ್ನೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಕ್ಕಳು ಇಂದು ಇಂಡಿ ರಸ್ತೆಯ ಶಾಂತಿನಿಕೇತನ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಂತರ ಕಾಣೆಯಾಗಿದ್ದರು. ಆದರೆ ಇಂದು ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

Latest Videos

undefined

ಅನುಷ್ಕಾ(9), 7 ವರ್ಷದ ವಿಜಯ ಹಾಗೂ ಮಿಹಿರ ಶವವಾಗಿ ಪತ್ತೆಯಾದ ಮಕ್ಕಳು. ಗದಗ ಮೂಲದ ಮಕ್ಕಳು. ಬೇಸಗೆ ರಜೆ ಹಿನ್ನೆಲೆ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು.  ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ ನಂತರ ಮಕ್ಕಳು ಕಾಣೆಯಾಗಿದ್ದರು. ಒಂಟೆ ಬಂದಾಗ ಮಕ್ಕಳು ಒಂಟೆಗಳ ಹಿಂದೆ  ಹೋಗಿದ್ದರು ಎನ್ನಲಾಗಿದೆ.

'ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ, ನಾಲ್ಕು ದಿನ ನೆಂಟರ ಮನೆಗೆ ಬಂದಿದ್ದೇನೆ' ಸಂತ್ರಸ್ತೆ ಮಹಿಳೆ ವಿಡಿಯೋ ವೈರಲ್!

ಮನೆಯಿಂದ ಹೊರಗಡೆ ಹೋದ ಮಕ್ಕಳು ವಾಪಸ್ ಆಗಿರಲಿಲ್ಲ. ಮನೆಯ ಸುತ್ತಮುತ್ತ ಹುಡುಕಾಡಿದರೂ ಮಕ್ಕಳ ಎಲ್ಲೂ ಪತ್ತೆಯಾಗಿರಲಿಲ್ಲ. ಸಿಸಿಟಿವಿಯಲ್ಲಿ ಮಕ್ಕಳು ಹೊರಗೆ ಹೋಗಿರುವುದು ಪತ್ತೆಯಾಗಿತ್ತು. ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಲಾಗಿತ್ತು. ಆದರೆ ಇಂದು ಚರಂಡಿಯಲ್ಲಿ ಮೃತದೇಹಗಳು ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

5 ವರ್ಷ ಮನೆಗೆ ಮರಳಲ್ಲ: ನೀಟ್‌ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಪರಾರಿ

ಇಂದು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಮಕ್ಕಳ ಮೃತ ಶರೀರ ಪತ್ತೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಇದೇ ವೇಳೆ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಎದುರು ಪೋಷಕರು ಪ್ರತಿಭಟನೆ ನಡೆಸಿದರು. ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ನಿರ್ಮಿಸಿಲ್ಲ. ಹೀಗಾಗಿ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿವೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯವೇ ಮಕ್ಕಳ ಸಾವಿಗೆ ಕಾರಣವೆಂದು ಪೋಷಕರು ಆರೋಪಿಸಿದರು.

click me!