ಮೆಟ್ರೋದಲ್ಲಿ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ವಿಡಿಯೋ ಭಾರಿ ಕೋಲಾಹ ಎಬ್ಬಿಸಿದ ಬೆನ್ನಲ್ಲೇ ಇದೀಗ ಸಾರಿಗೆ ಬಸ್‌ನ ಹಿಂಬದಿ ಸೀಟಿನಲ್ಲಿ ಜೋಡಿಯ ಕಿಸ್ಸಿಂಗ್ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿದೆ.
ಭುವನೇಶ್ವರ್(ಮೇ.13) ಸಾರ್ವಜನಿಕ ಪ್ರದೇಶಗಳಲ್ಲಿ ಜೋಡಿಗಳ ರೋಮ್ಯಾನ್ಸ್ , ಕಿಸ್ಸಿಂಗ್ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮೆಟ್ರೋದಲ್ಲಿ ಜೋಡಿಯ ರೋಮ್ಯಾನ್ಸ್ ಸೇರಿದಂತೆ ಹಲವು ಘಟನೆಗಳು ಈಗಾಗಲೇ ವರದಿಯಾಗಿದೆ. ಇದೀಗ ಸಾರಿಗೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಬಿಗಿದಪ್ಪಿ ಕಿಸ್ ನೀಡುತ್ತಾ ರೋಮ್ಯಾನ್ಸ್ ಮಾಡಿದ ಜೋಡಿಯ ವಿಡಿಯೋ ಭಾರಿ ಕೋಲಾಹಲ ಎಬ್ಬಿಸಿದೆ. ಸರ್ಕಾರದ ಸಾರಿಗೆ ಬಸ್‌ನಲ್ಲಿ ಈ ರೀತಿಯ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಘಟನೆ ನಡೆದಿರುವುದು ಒಡಿಶಾದ ಸಾರಿಗೆ ಬಸ್ಸಿನಲ್ಲಿ.
ಒಡಿಶಾದ ಸಾರಿಗೆ ಬಸ್‌ನಲ್ಲಿ ಜೋಡಿ ರೋಮ್ಯಾನ್ಸ್ ಮಾಡಿ ಇದೀಗ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಒಡಿಶಾದ ರೂರ್ಕೆಲಾದಲ್ಲಿನ ಸಾರಿಗೆ ಬಸ್‌ನ ಪ್ರಯಾಣಿಕರಿಂದ ತುಂಬಿತ್ತು. ಇದೇ ಬಸ್ ಹತ್ತಿದ ಜೋಡಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದೆ. ಈ ಜೋಡಿಯ ಪಕ್ಕ ಮಹಿಳೆಯೊಬ್ಬರು ಕುಳಿತಿದ್ದಾರೆ. ಎದುರಿನ ಸೀಟುಗಳಲ್ಲೂ ಪ್ರಯಾಣಿಕರು ತುಂಬಿದ್ದಾರೆ. ಬಸ್ ಸಂಚಾರ ಆರಂಭಿಸಿದ ಕೆಲವೇ ಹೊತ್ತಲ್ಲಿ, ಜೋಡಿಗೆ ಬೆಡ್ ರೂಂನಲ್ಲಿ ಲೈಟ್ ಆಫ್ ಮಾಡಿದ ಅನುಭವ. ಕಿಸ್ಸಿಂಗ್ ಮೂಲಕ ಆರಂಭಗೊಂಡ ರೋಮ್ಯಾನ್ಸ್ ಯಾವುದೇ ಸಿನಿಮಾಗೂ ಕಡಿಮೆ ಇಲ್ಲದ ರೀತಿ ಬಿಗಿದಪ್ಪಿ ಚುಂಬಿಸಿದ್ದಾರೆ.
ಬೆಂಗಳೂರು ಮೆಟ್ರೋದಲ್ಲಿ ತಬ್ಬಿ ಮುದ್ದಾಡಿದ ಯುವ ಜೋಡಿ; ಸಹ ಪ್ರಯಾಣಿಕರ ಆಕ್ರೋಶ
ಯುವಕನಿಗೊರಗಿ ಕುಳಿತುಕೊಂಡ ಯುವತಿ ಕೆಲವೇ ಹೊತ್ತಲ್ಲಿ ತುಟಿಗೆ ತುಟಿ ತಾಕಿಸಿ ಮೈಬಿಸಿ ಏರಿಸಿದ್ದಾರೆ. ಬಿಗಿದಪ್ಪಿ ದೀರ್ಘ ಚುಂಬಿಸಿದ ಜೋಡಿ ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆಯ ಗಡಿ ದಾಟಿ ಆಕಾಶ ತಲುಪುತ್ತಿದ್ದಂತೆ ಬಸ್‌ನಲ್ಲಿದ್ದ ಇತತರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಜೋಡಿಯ ರೋಮ್ಸಾನ್ಸ್ ಕಡಿಮೆಯಾಗಿಲ್ಲ.
Rourkela nit route mo bus . Please inquary which route and punishment this boy and girl . pic.twitter.com/AZ97klevwf
ಸುತ್ತ ಮುತ್ತ ಪ್ರಯಾಣಿಕರು ಕುಳಿತಿದ್ದರೂ ತಾವು ಏಕಾಂತದಲ್ಲಿ ರೋಮ್ಸಾನ್ಸ್ ಮಾಡುತ್ತಿರುವ ರೀತಿ ವರ್ತಿಸಿದ್ದಾರೆ. ಕೆಲ ಹೊತ್ತಿನ ಬಳಿಕ ವಿಡಿಯೋ ಮಾಡುತ್ತಿರುವುದು ಗಮಿನಿಸಿದ ಈ ಜೋಡಿ ಒಬ್ಬರಿಗೊಬ್ಬರು ಒರಗಿ ಕುಳಿತುಕೊಂಡು ಪ್ರಯಾಣ ಮುಂದುರಿಸಿದೆ. ಆದರೆ ಜೋಡಿ ಬಸ್‌ನಿಂದ ಇಳಿಯುವ ಮೊದಲೇ ಈ ವಿಡಿಯೋ ಭಾರಿ ವೈರಲ್ ಆಗಿದೆ.
ದೆಹಲಿ ಮೆಟ್ರೋದಲ್ಲಿ ಯುವತಿಯರ ಹೋಳಿ ಸಂಭ್ರಮದ ವಿಡಿಯೋ ಡೀಪ್‌ಫೇಕ್ ? ಡಿಎಂಆರ್‌ಸಿ ಹೀಗೆ ಹೇಳಿದ್ದೇಕೆ!
ಇದರ ನಡುವೆ ಈ ಘಟನೆ ದೆಹಲಿ ಸಾರಿಗೆ ಬಸ್‌ನಲ್ಲಿ ನಡೆದಿದೆ ಎಂದು ವೈರಲ್ ಆಗಿತ್ತು. ಆದರೆ ಇದು ಅಸಲಿಗೆ ಒಡಿಶಾದ ರೂರ್ಕೆಲಾದಲ್ಲಿ ನಡೆದ ಘಟನೆಯಾಗಿದೆ. ಸಾರ್ವಜನಿಕರು ಈ ಜೋಡಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಮೆಟ್ರೋ, ದೆಹಲಿ ಮೆಟ್ರೋಗಳಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಸಾರ್ವಜನಿಕವಾಗಿ ಭಾರಿ ಆಕ್ರೋಶ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ.