ಉತ್ತರ ಕನ್ನಡ: ಎರಡು ಗುಂಟೆ ಜಾಗಕ್ಕಾಗಿ ಯೋಧನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

Published : May 13, 2024, 08:50 PM IST
ಉತ್ತರ ಕನ್ನಡ: ಎರಡು ಗುಂಟೆ ಜಾಗಕ್ಕಾಗಿ ಯೋಧನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

ಸಾರಾಂಶ

ಎರಡು ಗುಂಟೆ ಜಾಗದ ವಿಚಾರಕ್ಕೆ ನಡೆದ ಜಗಳ ದೇಶ ಕಾಯುವ ಯೋಧನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ  ಶಿರಸಿ ತಾಲೂಕಿನ ಕಾನಗೋಡ ಅನ್ನುವ ಗ್ರಾಮದಲ್ಲಿ ನಡೆದಿದೆ.

ಕಾರವಾರ, ಉತ್ತರಕನ್ನಡ (ಮೇ.13): ಎರಡು ಗುಂಟೆ ಜಾಗದ ವಿಚಾರಕ್ಕೆ ನಡೆದ ಜಗಳ ದೇಶ ಕಾಯುವ ಯೋಧನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ  ಶಿರಸಿ ತಾಲೂಕಿನ ಕಾನಗೋಡ ಅನ್ನುವ ಗ್ರಾಮದಲ್ಲಿ ನಡೆದಿದೆ.

ರಘುನಾಥ ಆಚಾರ್ಯ, ಹಲ್ಲೆಗೊಳಗಾದ ಯೋಧ. ಭಾರತೀಯ ಸೈನ್ಯದಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಘುನಾಥ್, ಇತ್ತೀಚೆಗೆ ಸುಮಾರು 2 ಗುಂಟೆ ಜಾಗ ಖರೀದಿಸಿ, ಊರಲ್ಲಿರೋ ವೃದ್ಧ ತಂದೆ- ತಾಯಿಗಾಗಿ ಸಣ್ಣ ಮನೆಯೊಂದನ್ನು ಕಟ್ಟಲು ಮುಂದಾಗಿದ್ದ ಯೋಧ. ಆದರೆ ಅದೇ ಗ್ರಾಮದ ಕುಟುಂಬವೊಂದು ಎರಡು ಗುಂಟೆ ಜಾಗದ ವಿಚಾರವಾಗಿ ಗಲಾಟೆ ಮಾಡಿದೆ. ಮನೆ ನಿರ್ಮಾಣಗೊಂಡು ಇನ್ನೇನು ಗೃಹ ಪ್ರವೇಶ ಮಾಡಬೇಕು ಅನ್ನೋವಷ್ಟರಲ್ಲೇ ಖರೀದಿಸಿದ ಜಾಗ ನಿಮ್ಮದಲ್ಲಿ ಎಂದು ಅದೇ ಊರಿನ ಅದೇ ಊರಿನ ಗೋಪಾಲ ನಾಯ್ಕ ಹಾಗೂ ಕೆಲವು ಕುಟುಂಬಸ್ಥರಿಂದ ತಕರಾರು ತೆಗೆದು ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿದ್ದಲ್ಲದೇ ಕಟ್ಟಿದ ಮನೆಯನ್ನೇ ಕೆಡವಲು ಮುಂದಾಗಿದ್ದಾರೆ. ಈ ವೇಳೆ ಯೋಧನ ಮೇಲೆ ಕುಟುಂಬದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

 

ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರ ದುರಂತ ಸಾವು

ಹಲ್ಲೆ ಬಳಿಕ ಕಾರವಾರ ಮಾಧ್ಯಮ ಪ್ರತಿನಿಧಿಯೊಂದಿಗೆ ತನ್ನ ನೋವು ತೋಡಿಕೊಂಡ ಯೋಧ ಹಾಗೂ ಕುಟುಂಬಸ್ಥರು, ಕುಟುಂಬದ ಹಿರಿಯರ ಕಾಲದಿಂದ ಗ್ರಾಮ ನಕಾಶೆಯ ಸಣ್ಣ ದೋಷದಿಂದ ತನ್ನ ಜಾಗದ ಇ- ಸ್ವತ್ತು ಮಾಡಿಸಲು ಆಗಿರಲಿಲ್ಲ. ಗ್ರಾಮ ನಕಾಶೆಯ ದೋಷ ಸರಿಪಡಿಸುವಂತೆ 2015 ರಲ್ಲಿಯೇ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅದೇ ಜಾಗದಲ್ಲಿ ಮನೆ ಕಟ್ಟಲು ಸ್ಥಳೀಯ ಪಂಚಾಯತ್ ಅಭಿವೃದ್ದಿ ಅಧಿಕಾರಿ ಬಳಿ ಕೇಳಿದ್ದೆವು. ಮನೆ ಕಟ್ಟಿದ ನಂತರ ಅಕ್ರಮ ಸಕ್ರಮದಡಿ ಅಧಿಕೃತವಾಗಿ ಪರವಾನಿಗೆ ನೀಡುವುದಾಗಿ ಹೇಳಿದ್ದ ಗ್ರಾಪಂ ಪಿಡಿಓ. ಪಿಡಿಒ ಪರವಾನಿಗಿ ನೀಡುವುದಾಗಿ ಹೇಳದ್ದರಿಂದಲೇ ನಾವು ಮನೆ ಕಟ್ಟುವ ಕಾರ್ಯಕ್ಕೆ ಮುಂದಾದೆವು. ಆದರೆ ಗ್ರಾಮ ನಕಾಶೆಯ ದೋಷವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ ನಾಯ್ಕ, ಗೋಪಾಲ ನಾಯ್ಕ ಸೇರಿದಂತೆ ಇತರರಿಂದ  ಮನೆ ಕಬಳಿಕೆಗೆ ಯತ್ನಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಲು ಮಾರಕಾಸ್ತ್ರದೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಯೋಧ ರಘುನಾಥ್ ಆಚಾರ್ಯ.

ಗಂಡನ ಮೇಲಿನ ಕೋಪಕ್ಕೆ ಮನೆಯಲ್ಲಿ ಮಲಗಿದ್ದ ಮಗುವನ್ನು ನಾಲೆಗೆ ಎಸೆದು ರಾಕ್ಷಸಿ ತಾಯಿ

ಹಿಂದಿನಿಂದ ಬೆದರಿಕೆಯೊಡ್ಡಿದ್ದರು. ಒತ್ತಡಕ್ಕೆ ಮಣಿಯದೆ ಯೋಧ ಮನೆ ಕಟ್ಟಿದ್ದರಿಂದ ಇದೀಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮನೆಯ ವಸ್ತುಗಳು, ಕಾಂಪೌಂಡ್ ಕೂಡ ಧ್ವಂಸ ಮಾಡಿದ್ದಾರೆ. ಸೈನಿಕ ಕುಟುಂಬದ ಮೇಲೆ ಈ ರೀತಿ ಹಲ್ಲೆಯಾದ್ರೆ ಉಳಿದವರ ಕಥೆ ಏನು? ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. 

ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಶಿರಸಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇತ್ತ ಯೋಧನ ಕುಟುಂಬಕ್ಕೆ ಸಹಾಯ ಮಾಡಿದವರ ಮೇಲೆ ಆರೋಪಿಗಳಿಂದಲೂ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!