ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ: ಎಫ್‌ಐಆರ್‌ನಲ್ಲಿ ಏನಿದೆ?

By Kannadaprabha News  |  First Published Jul 6, 2022, 9:07 PM IST

*    ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಸಂಜಯ ಅಂಗಡಿ 
*  2015ರಲ್ಲಿ ಮಹಾಂತೇಶ ಶಿರೂರ ಕಂಪನಿಗೆ ವೈಸ್‌ ಪ್ರೆಸಿಡೆಂಟ್‌ ಆಗಿ ನೇಮಕ
*  ಚಂದ್ರಶೇಖರಗೆ ಆಗಾಗ ಜೀವ ಬೆದರಿಕೆ ಒಡ್ಡುತ್ತಿದ್ದ ಮಹಾಂತೇಶ ಶಿರೂರ 
 


ಹುಬ್ಬಳ್ಳಿ(ಜು.06): ಚಂದ್ರಶೇಖರ ಗುರೂಜಿ ಹತ್ಯೆ ಕುರಿತು ಅವರ ಸಹೋದರ ಸಂಬಂಧಿ ಸಂಜಯ ಅಂಗಡಿ ಎಂಬುವವರು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದ್ರಶೇಖರ ಅಂಗಡಿ ಅವರು ‘ಚಂದ್ರಶೇಖರ ಗೌರಿ ಪ್ರೈ. ಲಿ.’ (ಸಿ ಜಿ.ಪರಿವಾರ ಪ್ರೈ.ಲಿ.) ಎನ್ನುವ ಹೆಸರಿನಲ್ಲಿ ಸರಳ ವಾಸ್ತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದು ಸೇರಿ ಇನ್ನಿತರ ಇತರೆ ಕಂಪನಿಗಳಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2008ರಲ್ಲಿ ಮಹಾಂತೇಶ ಶಿರೂರ ಎಂಬಾತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು. ಬಳಿಕ 2015ರಲ್ಲಿ ಇವರನ್ನು ಈ ಕಂಪನಿಗೆ ವೈಸ್‌ ಪ್ರೆಸಿಡೆಂಟ್‌ ಎಂದು ನೇಮಕ ಮಾಡಲಾಗಿತ್ತು.

Latest Videos

undefined

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ

ಆದರೆ ಮಹಾಂತೇಶ ಈ ಕಂಪನಿಗೆ ಸರಳ ವಾಸ್ತು ಮಾಡಿಸಲು ಬರುತ್ತಿದ್ದ ಜನರಿಂದ ತಾನೇ ಹಣ ತೆಗೆದುಕೊಂಡು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದ. ಇವರೊಂದಿಗೆ ಮಂಜುನಾಥ ಮರೇವಾಡ ಎಂಬಾತ ಕೂಡ ಸೇರಿ ಇನ್ನೂ 20ರಿಂದ 25 ಜನರು ಶಾಮೀಲಾಗಿದ್ದರು. ಈ ಬಗ್ಗೆ ಚಂದ್ರಶೇಖರ ಗುರೂಜಿ ಹಾಗೂ ನನಗೆ ವಿಷಯ ಗೊತ್ತಾಗಿತ್ತು. ಹೀಗಾಗಿ ಇವರನ್ನು ಕೆಲಸದಿಂದ ತೆಗೆಯಲಾಗಿತ್ತು. ಇದೇ ಸಿಟ್ಟನ್ನು ಇಟ್ಟುಕೊಂಡು ಮಹಾಂತೇಶ ಶಿರೂರ ಹುಬ್ಬಳ್ಳಿ ಗೋಕುಲ ರೋಡ್‌ನ ಜೆ.ಪಿ. ನಗರದಲ್ಲಿರುವ ಚಂದ್ರಶೇಖರ ಅವರು ಕಟ್ಟಿಸಿದ್ದ ಅಪಾರ್ಟ್‌ಮೆಂಟ್‌ದಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲ, ಮಳೆ ನೀರು ಇಂಗುದಾಣ ಇಲ್ಲ, ಸೋಲಾರ್‌ ಇಲ್ಲ ಎಂದು ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. 

ಈ ಪ್ರಕರಣ ಹಿಂಪಡೆಯಲು ಹಣ ಕೇಳುತ್ತಿದ್ದು, ಹಣ ಕೊಡದೇ ಇದ್ದಾಗ ಚಂದ್ರಶೇಖರ ಅವರಿಗೆ ಆಗಾಗ ಜೀವ ಬೆದರಿಕೆ ಒಡ್ಡುತ್ತಿದ್ದ. ಇದೇ ಕಾರಣಕ್ಕೆ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಸೇರಿಕೊಂಡು ಚಂದ್ರಶೇಖರ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಚಂದ್ರಶೇಖರ ಹಾಗೂ ಅವರ ಪತ್ನಿ ಅಂಕಿತಾ ಉಳಿದುಕೊಂಡಿದ್ದ ಶ್ರೀನಗರದಲ್ಲಿರುವ ಪ್ರೆಸಿಡೆಂಟ್‌ ಹೋಟೆಲ್‌ ರಿಸೆಪ್ಶನ್‌ ಹಾಲಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ತಮ್ಮ ಬಳಿ ಕರೆಸಿಕೊಂಡು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಲಾಗಿದೆ. ಐಪಿಸಿ 1860 34, 302 ಸೇರಿ ಇತರೆ ಸೆಕ್ಷನ್‌ಗಳಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

click me!