ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ

By Sathish Kumar KH  |  First Published Nov 19, 2024, 4:11 PM IST

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ 75 ವರ್ಷದ ವೃದ್ಧೆಯ ಮೇಲೆ ಫಕೀರನೊಬ್ಬ ಅತ್ಯಾಚಾರವೆಸಗಿದ್ದಾನೆ. ಫಕೀರ ವೇಷಧಾರಿ ತಯ್ಯಬ್ ಎಂಬಾತ ಭಿಕ್ಷಾಟನೆಗೆಂದು ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾನೆ. ಅಸ್ವಸ್ಥಗೊಂಡ ಅಜ್ಜಿಯನ್ನು ಬೀದರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಲಬುರಗಿ (ನ.19): ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತೀವ್ರ ಬಡತನವಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ವೃದ್ಧರನ್ನು ಬಿಟ್ಟು ಕೃಷಿ ಕೆಲಸಕ್ಕೆ ಮನೆ ಮಂದಿಯೆಲ್ಲಾ ಹೋಗಿರುತ್ತಾರೆ. ಆದರೆ, ಇದನ್ನೇ ದುರುಪಯೋಗ ಮಾಡಿಕೊಂಡ ಫಕೀರನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.

ಈ ಘಟನೆ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಭಿಕ್ಷಾಟನೆ ಮಾಡಲು ಬಂದ ಫಕೀರ ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿ ಒಬ್ಬಂಟಿಯಾಗಿದ್ದ ಮನೆಯೊಳಗೆ ನುಗ್ಗಿ ಅಜ್ಜಿಯ ಮೇಲೆ ರೇಪ್ ಮಾಡಿ ಬಂದಿದ್ದಾನೆ. ಅತ್ಯಾಚಾರ ಮಾಡಿದವನನ್ನು ಇದೇ ಗ್ರಾಮದ ಪಕ್ಕದ ಐನೊಳ್ಳಿ ಗ್ರಾಮದ ಫಕೀರ ತಯ್ಯಬ್ ಎಂದು ಗುರುತಿಸಲಾಗಿದೆ. ಫಕೀರ ವೇಷಧಾರಿ ತಯ್ಯಬ್ ಬಿಕ್ಷಾಟನೆ ಮಾಡುತ್ತಾ ಊರಿರು ಸುತ್ತುತ್ತಿದ್ದನು. ಆದರೆ, ಚಂದ್ರಪಳ್ಳಿ ಗ್ರಾಮದಲ್ಲಿ 75 ವರ್ಷದ ನಿಸ್ಸಾಹಾಯಕ ಅಜ್ಜಿಯ ಮೇಲೆ ಅತ್ಯಾಚಾರಗೈದು ಹೀನ ಕೃತ್ಯವೆಸಗಿದ್ದಾನೆ.

Tap to resize

Latest Videos

undefined

ಪತ್ನಿ ಶೀಲ ಶಂಕಿಸಿದ ಕಿರಾತಕ ಪತಿ, ನಕಲಿ ಖಾತೆಯಿಂದ ಮೆಸೇಜ್ ಕಳುಹಿಸಿ ತಗ್ಲಾಕೊಂಡ!

ಇನ್ನು ಅತ್ಯಾಚಾರ ಘಟನೆಯ ಬೆನ್ನಲ್ಲಿಯೇ ತೀವ್ರ ಅಸ್ವಸ್ಥಗೊಂಡಿದ್ದ ಅಜ್ಜಿಯನ್ನು ಸ್ಥಳೀಯರು ಬೀದರ್‌ ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಜ್ಜಿಯ ಸ್ಥಿತಿ ಗಂಭೀರವಾಗಿದೆ. ಅತ್ಯಾಚಾರ ಮಾಡಿದ ಆರೋಪಿ ಫಕೀರ ತಯ್ಯಬ್ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಈ ಘಟನೆಯ ಬೆನ್ನಲ್ಲಿಯೇ ಪೊಲೀಸರು ಈ ಫಕೀರ ಸಿಕ್ಕಲ್ಲಿ ಸುಳಿವು ನೀಡುವಂತೆ ಸುತ್ತಲಿನ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಜೊತೆಗೆ, ಒಬ್ಬಂಟಿ ಮಹಿಳೆಯರು ಇರದೇ ಯಾರ ಜೊತೆಗಾದರೂ ಇರುವಂತೆಯೂ ಗ್ರಾಮೀಣ ಜನರಿಗೆ ಸಲಹೆ ನೀಡಿದ್ದಾರೆ.

click me!