
ಬೆಂಗಳೂರು (ಏ.16): ಮಚ್ಚು ಹಿಡಿದು ರೀಲ್ಸ್ ಪ್ರಕರಣದಲ್ಲಿ ಬಿಗ್‌ಬಾಸ್ ಸ್ಪರ್ಧಿ ರಜತ್ ಕಿಶನ್‌ಗೆ ನೀಡಿದ್ದ ಷರತ್ತುಬದ್ಧ ಜಾಮೀನು ರದ್ದಾಗಿದೆ. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೊಂದೆಡೆ ಬಿಗ್‌ಬಾಸ್‌ನ ಮತ್ತೊಬ್ಬ ಸ್ಪರ್ಧಿ ವಿನಯ್ ಬಂಧನದ ಭೀತಿಯಿಂದ ಜಸ್ಟ್ ಮಿಸ್ ಆಗಿದ್ದಾರೆ.
ಜಾಮೀನು ಷರತ್ತು ಉಲ್ಲಂಘಿಸಿದ ಆರಂಭದ ಮೇಲೆ 24ನೇ ಎಸಿಜೆಎಂ ಕೋರ್ಟ್ ಈ ಆದೇಶ ನೀಡಿದೆ. ರಜತ್ ಕಿಶನ್‌ರನ್ನು ಏಪ್ರಿಲ್ 29ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ನಾಳೆ ರಜತ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಇನ್ನೊಂದೆಡೆ ವಿನಯ್‌ಗೆ 500 ರೂಪಾಯಿ ದಂಡ ವಿಧಿಸಿ ವಾರಂಟ್ ರಿಕಾಲ್ ಆದೇಶ ನೀಡಲಾಗಿದೆ.
ಆಗಿದ್ದೇನು: ಬುಧವಾರ ಬಸವೇಶ್ವರ ನಗರ ಪೊಲೀಸರಿಂದ ರಜತ್‌ರನ್ನು ಹಠಾತ್ ಬಂಧಿಸಲಾಗಿತ್ತು. ಅದಕ್ಕೆ ಕಾರಣ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಇಂದು ವಿಚಾರಣೆಗೆ ಹಾಜಾರಗಿದ್ದ ವೇಳೆ ರಜತ್‌ನನ್ನು ಬಂಧಿಸಲಾಗಿತ್ತು. ಕೇಸ್ ನಲ್ಲಿ ಈಗಾಗಲೇ ಒಮ್ಮೆ ಅರೆಸ್ಟ್ ಆಗಿ ಬೇಲ್ ಪಡೆದಿದ್ದರು. ಈ ವೇಳೇ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಷರತ್ತಿನ ಅನ್ವಯ ಪ್ರತಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಆದರೆ, ನ್ಯಾಯಾಲಯಕ್ಕೆ ರಜತ್ ಹಾಜರಾಗಿರಲಿಲ್ಲ. ನ್ಯಾಯಾಲಯ ಆರೋಪಿ ರಜತ್ ವಿರುದ್ದ ನಾನ್ ಬೇಲೆಬಲ್ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆ ರಜತ್ ಬಂಧನ ಮಾಡಲಾಗಿದ್ದು, ಬಳಿಕ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು.
ವಿನಯ್ ಕೂಡ ಬಂಧನ: ರಜತ್ ಬಳಿಕ ವಿನಯ್ ನಿವಾಸಕ್ಕೂ ತೆರಳಿದ್ದರು. ಇಬ್ಬರ ವಿರುದ್ದವೂ ನಾನ್ ಬೇಲೆಬಲ್ ವಾರಂಟ್ ಜಾರಿಯಾಗಿತ್ತು. ಕೋರ್ಟ್ ಇಂದ NBW ಜಾರಿ ಮಾಡಲಾಗಿತ್ತು . ಕೋರ್ಟ್ ವಿಚಾರಣೆಗೆ ಹಾಜರಾಗಲು ದಿನಾಂಕ ನಿಗದಿ ಮಾಡಿತ್ತು. ಆದರೆ ಆ ದಿನಾಂಕದೊಂದು ಇಬ್ಬರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಇಂದ NBW ಜಾರಿಯಾಗಿತ್ತು ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು.
ರಜತ್ ಬಂಧನ ಬಳಿಕ ಎಚ್ಚೆತ್ತ ವಿನಯ್ ಗೌಡ: ರಜತ್ ಬಂಧನದ ಸುದ್ದಿ ಗೊತ್ತಾಗುತ್ತಿದ್ದಂತೆ, ವಿನಯ್ ಕೋರ್ಟ್‌ನತ್ತ ಮುಖ ಮಾಡಿದ್ದರು. ನಾನ್ ಬೇಲೆಬಲ್ ವಾರಂಟ್ ಮಾಹಿತಿ ಇಲ್ಲ ಎಂದು ವಿನಯ್ ತಿಳಿಸಿದ್ದರು. ರಜತ್ ಬಂಧನ ಬಳಿಕ NBW ಬಗ್ಗೆ ಮಾಹಿತಿ ಸಿಕ್ಕಿದೆ ಎಂದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಮುನ್ನವೇ ಕೋರ್ಟ್ ಗೆ ವಿನಯ್ ಹಾಜರಾಗಿದ್ದಾರೆ. ಕೋರ್ಟ್ ಗೆ ಹಾಜರಾಗಿ ವಾರಂಟ್ ರೀಕಾಲ್ ಪ್ರಯತ್ನ ಮಾಡಿದ್ದರು.
ಇನ್ನೊಂದೆಡೆ ಪೊಲೀಸ್ ಠಾಣೆಯಲ್ಲಿಯೇ ಬಂಧನಕ್ಕೆ ಒಳಗಾದ ರಜತ್‌ನನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕ್‌ಅಪ್ ಮಾಡಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಯ ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ