vuukle one pixel image

ಬೆಂಗಳೂರು ಹಿಟ್‌ ಅಂಡ್ ರನ್‌ ಪ್ರಕರಣ, ಬಾಲಕನ ಸ್ಥಿತಿ ಗಂಭೀರ

Sathish Kumar KH  | Updated: Apr 15, 2025, 5:16 PM IST

ಬೆಂಗಳೂರು (ಏ.15): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಡಿಕಲ್ ಶಾಪ್‌ಗೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವೇಗವಾಗಿ ಬಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದು ಬಂದು 9 ವರ್ಷದ ಚಿಕ್ಕ ಮಗುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಮಗು ಸ್ಥಿತಿ ಗಂಭೀರವಾಗಿದ್ದರೂ, ವಾಹನ ನಿಲ್ಲಿಸದೇ ಅಲ್ಲಿಂದ ವಾಹನ ಚಾಲಕ ಪರಾರಿ ಆಗಿದ್ದಾನೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಈ ಘಟನೆ ದಾಸನಪುರ ಹೋಬಳಿ ಬೈಯಂಡಳ್ಳಿ ಸರ್ಕಲ್‌ನಲ್ಲಿ ಶುಕ್ರವಾರ ಸಂಜೆ 7:30 ಕ್ಕೆ ನಡೆದಿದೆ. ಹಿಟ್‌ ಅಂಡ್ ರನ್ ಆಕ್ಸಿಡೆಂಡ್‌ನಲ್ಲಿ ಬಾಲಕ ಕರಣ್ ವೀರ್ (9 ವರ್ಷ) ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಾಲಕ ತನ್ನ ಮಾವ ಧನುಷ್ ಜೊತೆ ಮೆಡಿಕಲ್ ಶಾಪ್‌ಗೆ ಹೋಗಿದ್ದನು. ಈತನಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಮೆಡಿಕಲ್ ಶಾಪ್‌ಗೆ ಟ್ಯಾಬ್ಲೆಟ್ ತರಲು ಹೋಗಿದ್ದರು. ಟ್ಯಾಬ್ಲೆಟ್ ತೆಗೆದುಕೊಂಡು ವಾಪಸ್ ರಸ್ತೆಗಿಳಿದಿದ್ದ ಕರಣ್ ಮೇಲೆ ಓವರ್ ಸ್ಪೀಡ್‌ನಲ್ಲಿ ಬಂದ ಅಶೋಕ ಲೈಲಾಂಡ್ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.

ಇನ್ನು ಬಾಲಕ ಕರಣ್ ಡಿಕ್ಕಿ ರಭಸಕ್ಕೆ ಫುಟ್ಪಾತ್ ಮೇಲೆ ಬಿದ್ದಿದ್ದಾನೆ. ಮಾವ ಧನುಷ್ ಇನ್ನೂ ಹಣ ಕೊಡುತ್ತಿದ್ದರಿಂದ ಹಿಂತಿರುಗಿ ಏನಾಯಿತು ಎಂದು ನೋಡುವಷ್ಟರಲ್ಲಿ ಕರಣ್ ಗಾಯಗೊಂಡು ಬಿದ್ದಿದ್ದರೆ, ಅಲ್ಲಿ ವಾಹನ ನಿಲ್ಲಿಸದೇ ಗೂಡ್ಸ್ ವಾಹನ  ಚಾಲಕ ಪರಾರಿ ಆಗಿದ್ದಾನೆ. ಆದರೆ, ಡಿಕ್ಕಿಯ ರಭಸಕ್ಕೆ ಕರಣ್ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಕಡೇಚೂರು ಕೈಗಾರಿಕಾ ಪ್ರದೇಶ: ಸದ್ಯ ನಿರಾತಂಕ, ಮುಂದೆ ಕಾದಿದೆ ಆತಂಕ!

ಇನ್ನು ಗಾಯಗಂಡ ಬಾಲಕ ಚಿಕ್ಕಗಂಗಮ್ಮ ಹಾಗೂ ರವಿಕಿರಣ್ ದಂಪತಿಯ ಮಗನಾಗಿದ್ದಾನೆ. ಕಡಬಗೆರೆ ರಸ್ತೆಯಿಂದ ನೆಲಮಂಗಲಕ್ಕೆ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೇ ಪರಾರಿ ಆಗಿದ್ದಾನೆ. ಬಾಲಕನಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಸಿಸಿಟಿವಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಮಾದನಾಯಕನಹಳ್ಳಿ ಹಿಟ್ ಅಂಡ್ ರನ್ ಕೇಸ್ ಬಗ್ಗೆ ಗಾಯಾಳು ಬಾಲಕ ಕರಣ್ ತಂದೆ ರವಿಕಿರಣ್ ಮಾತನಾಡಿ, ಮಗನಿಗೆ ಇನ್ನು ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿನ್ನೆ ರಾತ್ರಿ ಪಲ್ಸ್ ರೇಟ್ ನಿಂತು ಹೋಗಿತ್ತು. ಮೆದುಳಿನಲ್ಲಿ ರಕ್ತಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕರಣ್‌ಗೆ ಹಾರ್ಟ್ ಬೀಟ್, ಪಲ್ಸ್ ರೇಟ್ ಜಾಸ್ತಿಯಾಗುತ್ತಿದೆ. ಇದೀಗ ಮಗನಿಗೆ ಎಚ್ಚರಿಕೆ ಆದರೆ ಸಾಕು. ಇನ್ನೂ ಐಸಿಯುನಲ್ಲಿ ಇಟ್ಟಿದ್ದಾರೆ, ನನ್ನ ಪತ್ನಿ ಆಸ್ಪತ್ರೆಯ ಒಳಗಿದ್ದು ನೋಡಿಕೊಳ್ಳುತ್ತಿದ್ದಾರೆ. ಇನ್ನು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇಳಿದರೆ ಆಯ್ತು ನೋಡೋಣ ಬಿಡಿ, ಕೇಸ್ ಮಾಡೋಣ ಬಿಡಿ ಅಂತ ನೆಗ್ಲೆಟ್ ಮಾಡುತ್ತಿದ್ದಾರೆ. ನಾವೇ ಸಿಸಿಟಿವಿ ಹುಡುಕಿಕೊಟ್ಟರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ. ಕಾಲ್ ಮಾಡಿ ಕೇಳಿದರೆ ನಮಗೆ ಗೊತ್ತಿದೆ ಬಿಡ್ರಿ ಎಂದು ನಮಗೆ ಧಮ್ಕಿ ಹಾಕುತ್ತಾರೆ. ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಎಂದು ಗಾಯಾಳು ಬಾಲಕನ ತಂದೆ ರವಿಕಿರಣ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: 2 ಪ್ರಮುಖ ಟೋಲ್‌ ವಿನಾಯಿತಿ ಬಗ್ಗೆ ಸಾರಿಗೆ ಇಲಾಖೆ ಪ್ರಸ್ತಾವಣೆ ಪರಿಗಣಿಸಿದ ನಿರ್ಮಲಾ ಸೀತಾರಾಮನ್‌!