Bihar: ಬೈಕ್‌ನಲ್ಲಿದ್ದ ದುಷ್ಕರ್ಮಿಗಳಿಂದ ಕಂಡ ಕಂಡವರ ಮೇಲೆ ಗುಂಡಿನ ದಾಳಿ; ಒಬ್ಬರ ಹತ್ಯೆ, 11 ಮಂದಿಗೆ ಗಾಯ

By BK AshwinFirst Published Sep 14, 2022, 12:18 PM IST
Highlights

ಬಿಹಾರದ ಬೇಗುಸರಾಯ್‌ನ ರಾಷ್ಟ್ರೀಯ ಹೆದ್ದಾರಿ 28 ರಲ್ಲಿ ಇಬ್ಬರು ಬಂದೂಕುಧಾರಿಗಳು ಮೋಟರ್‌ಸೈಕಲ್‌ನಲ್ಲಿ ಹೋಗಿ ಕಂಡ ಕಂಡವರತ್ತ ಗುಂಡು ಹಾರಿಸಿದ್ದಾರೆ. ಈ ವೇಳೆ ಒಬ್ಬರು ಮೃತಪಟ್ಟಿದ್ದು, 11 ಜನರಿಗೆ ಗಾಯಗಳಾಗಿದೆ. 

ಬಿಹಾರದ ಬೇಗುಸರಾಯ್‌ನಲ್ಲಿ (Begusarai) ಮಂಗಳವಾರ ಸಂಜೆ ಕೈಗಾರಿಕಾ ಪಟ್ಟಣ ಬರೌನಿ ಮತ್ತು ಮೊಕಾಮಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway)  ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ (Shooting) ನಡೆಸಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದ ಈ ದುಷ್ಕರ್ಮಿಗಳು ಸುಮಾರು 30 ಕಿಮೀ ದೂರದಲ್ಲಿ, ಅವರು ಸುಮಾರು 12 ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮತ್ತು 11 ಜನರು ಗಾಯಗೊಂಡಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಮತ್ತು ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಸೈಕೋಪಾತ್ ಕ್ರಿಮಿನಲ್‌ಗಳು (Psychopathic Criminals) ಮೋಟರ್‌ಸೈಕಲ್‌ನಲ್ಲಿ ಗುಂಡು ಹಾರಿಸಿದರು ಮತ್ತು ಬರೌನಿ ಪೊಲೀಸ್ ಠಾಣೆ, ತೆಘ್ರಾ ಮತ್ತು ಬಹ್ಚ್ವಾರಾ ಪೊಲೀಸ್ ಠಾಣೆಗಳ ನಡುವೆ ಪಾದಚಾರಿಗಳ ಮೇಲೆ ತಮ್ಮ ಪಿಸ್ತೂಲ್‌ಗಳಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ಗುಂಡು ಹಾರಿಸುತ್ತಿದ್ದರು ಮತ್ತು ಅವರು ಗಂಗಾನದಿ ತೀರದ ಮೊಕಾಮಾಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಇದನ್ನು ಓದಿ: US Shooting: ಫೇಸ್‌ಬುಕ್‌ ಲೈವ್‌ ಮಾಡಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ; ಇಬ್ಬರ ಹತ್ಯೆ ಮಾಡಿದ ಆರೋಪಿ ವಶಕ್ಕೆ

बेगूसराय में बाइक सवार सिरफिरे अपराधियों का तांडव, राह चलते लोगों को गोलियाँ मारीं. अब तक एक दर्जन लोगों को गोली लगने और एक की मौत की सूचना. pic.twitter.com/hxvWTMAYRe

— Utkarsh Singh (@UtkarshSingh_)

ಬೇಗುಸರೈ ಪಟ್ಟಣದ ಮಲ್ಹಿಪುರ ಪ್ರದೇಶದಲ್ಲಿ ದುಷ್ಕರ್ಮಿಗಳು ಎರಡು ಬಾರಿ, ಬರೌನಿ ಥರ್ಮಲ್ ಪವರ್ ಚೌಕ್‌ನಲ್ಲಿ ಮೂರು ಬಾರಿ, ತೆಗ್ರಾದಲ್ಲಿ ಎರಡು ಬಾರಿ ಮತ್ತು ಬಚ್ವಾರಾ ಪ್ರದೇಶದಲ್ಲಿ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ಬೇಗುಸರೈ ಜಿಲ್ಲಾ ಕೇಂದ್ರದಿಂದ ಬಂದ ಪ್ರಾಥಮಿಕ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ದುಷ್ಕರ್ಮಿಗಳು ಅಧರ್‌ಪುರ ಚೌಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 28 ರಲ್ಲಿ ಮೊದಲು ಗುಂಡು ಹಾರಿಸಿದ್ದು, ಇಬ್ಬರು ಯುವಕರು ಗಾಯಗೊಂಡಿದ್ದಾರೆ ಮತ್ತು ಡಿಪಿಎಸ್ ಸ್ಕೂಲ್ ಸರ್ಕಲ್ ಬಳಿ ಇನ್ನೊಬ್ಬ ಯುವಕನಿಗೆ ಬುಲೆಟ್ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸಿಸಿಟಿವಿ ಕ್ಯಾಮೆರಾ ಮತ್ತು ಮೋಟಾರ್‌ಸೈಕಲ್‌ನ ನಂಬರ್ ಪ್ಲೇಟ್ ಮೂಲಕ ಇಬ್ಬರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅವರ ಪತ್ತೆಗಾಗಿ ಇಡೀ ಜಿಲ್ಲೆಯ ಪ್ರದೇಶವನ್ನು ಸೀಲ್ ಮಾಡಲಾಗಿದೆ. "ಮಳೀಪುರದ ಸ್ಥಳೀಯ ರಸ್ತೆಬದಿಯ ಮೀನು ಮಾರುಕಟ್ಟೆಯಲ್ಲಿ ಮೊದಲು ಗುಂಡು ಹಾರಿಸಿದ ದುಷ್ಕರ್ಮಿಗಳು 10 ನಿಮಿಷಗಳಲ್ಲಿ ಕನಿಷ್ಠ 10 ಜನರನ್ನು ಹೊಡೆದರು. ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಿಯ ಹೊಟ್ಟೆಯ ಮೇಲೆ ಗುಂಡಿನ ಗಾಯಗಳಾಗಿವೆ, ಅವರ ಸ್ಥಿತಿ ಗಂಭೀರವಾಗಿದೆ," ಎಂದು ಬೇಗುಸರಾಯ್ ಪೊಲೀಸ್‌ ಅಧಿಕಾರಿ ಯೋಗೇಂದ್ರ ಕುಮಾರ್ ಹೇಳಿದರು.

ದೆಹಲಿಯಲ್ಲಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೇಗುಸರಾಯ್‌ಗೆ ಬರುತ್ತಿರುವ ಗಿರಿರಾಜ್‌ ಸಿಂಗ್
 ಈ ಘಟನೆಯ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಂದೆ ಬಂದು ಉತ್ತರಿಸಬೇಕು ಎಂದು ಸ್ಥಳೀಯ ಸಂಸದ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹಿಸಿದ್ದಾರೆ. ಇದು ಯಾವ ಜನತಾ ರಾಜ್ ಎಂದು ಹೇಳಿ, ಅಲ್ಲಿ 4 ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕ್ರಿಮಿನಲ್‌ಗಳು ನಿರ್ಭಯವಾಗಿ ಜನರ ಮೇಲೆ ಗುಂಡು ಹಾರಿಸುತ್ತಿದ್ದಾರೆ ಮತ್ತು ಅವರನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ದೆಹಲಿಯಲ್ಲಿ ಹೇಳಿದರು. ಗಾಯಾಳುಗಳಿಗೆ ಸರಕಾರ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದರು. ಅವರು ಬಡವರಾದ ಹಿನ್ನೆಲೆ ಮೃತರ ಮುಂದಿನ ಕುಟುಂಬಕ್ಕೆ ಒಂದು ಕೋಟಿ ಮತ್ತು ಗಾಯಗೊಂಡವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಕೂಲ್‌ ಡ್ರಿಂಕ್ಸ್‌ ವಿಚಾರವಾಗಿ ಜಗಳ: 15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

ಮಾಹಿತಿ ಪ್ರಕಾರ ಗಿರಿರಾಜ್ ಸಿಂಗ್ ದೆಹಲಿಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬುಧವಾರ  ಬೇಗುಸರಾಯ್ ತಲುಪುತ್ತಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ, ಮೃತ ಚಂದನ್ ಅವರ ಸಂಬಂಧಿಕರಿಗೆ ಸಾಂತ್ವನ ಹೇಳಲು ಅವರ ನಿವಾಸಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಜತೆಗೆ, ಇಂದು ಬೇಗುಸರಾಯ್ ಬಂದ್‌ಗೆ (Bandh) ಬಿಜೆಪಿ ಕರೆ ನೀಡಿದೆ. ಮಾಹಿತಿಯ ಪ್ರಕಾರ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹಾ ಮತ್ತು ಇತರ ಹಲವು ಬಿಜೆಪಿ ನಾಯಕರು ಕೂಡ ಬೇಗುಸರೈ ತಲುಪಲಿದ್ದಾರೆ ಎಂದು ಹೇಳಲಾಗಿದೆ. 

click me!