ದ್ವೇಷ ಮರೆತು ಒಂದಾದ ಶಿವಸೇನೆ ಠಾಕ್ರೆ ಬಣ ನಾಯಕರು, ಫೇಸ್‌ಬುಕ್ ಲೈವ್‌ನಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ!

By Suvarna News  |  First Published Feb 9, 2024, 10:24 AM IST

ಶಿವಸೇನೇ ಉದ್ಧವ್ ಠಾಕ್ರೆ ಬಣದ ಇಬ್ಬರು ನಾಯಕರು 3 ವರ್ಷದ ವೈರತ್ವ ಮರೆತು ಒಂದಾಗಿದ್ದರು. ಜೊತೆಯಾಗಿ ಹೆಜ್ಜೆ ಇಡೋಣ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಕುಳಿತು ಹೇಳಿದ್ದಾರೆ. ಆದರೆ ಫೇಸ್‌ಬುಕ್ ಲೈವ್ ನಡುವೆಯೆ ಗುಂಡಿನ ದಾಳಿ ನಡೆಸಿ ಹಳೇ ವೈರತ್ವವನ್ನು ಹತ್ಯೆಯಲ್ಲಿ ಅಂತ್ಯಗೊಳಿಸಿದ ಭೀಕರ ಘಟನೆ ನಡೆದಿದೆ. ಈ ನೇರಪ್ರಸಾರದ ವಿಡಿಯೋ ವೈರಲ್ ಆಗಿದೆ.
 


ಮುಂಬೈ(ಫೆ.09) ರಾಜಕೀಯ ದ್ವೇಷ, ಕೆಸರೆರಚಾಟದಿಂದ ಕಳೆದ ಮೂರು ವರ್ಷದಲ್ಲಿ ಉದ್ದವ್ ಠಾಕ್ರೆ ಶಿವಸೇನೆಯ ಅಭಿಷೇಕ್ ಘೋಸಾಲ್ಕರ್ ಹಾಗೂ ಮಾರಿಸ್ ನೋರೊನ್ಹಾ ನಡುವೆ ವೈರತ್ವ ಹೆಚ್ಚಾಗಿತ್ತು. ಆದರೆ ಇತರ ನಾಯಕರು, ಗೆಳೆಯರ ಸಮ್ಮುಖದಲ್ಲಿ ವೈರತ್ವ ಮರೆತು ಒಂದಾಗಿದ್ದರು. ಬಳಿಕ ಫೇಸ್‌ಬುಕ್ ಲೈವ್‌ನಲ್ಲಿ ಇಬ್ಬರು ಜೊತೆಯಾಗಿ ಕೆಲಸ ಮಾಡುವ ಮಾತುಗಳನ್ನಾಡಿದ್ದರು. ಆದರೆ ಲೈವ್ ನಡುವೆ ಎದ್ದು ಮಾರಿಸ್, ನೇರವಾಗಿ ಅಭಿಷೇಕ್ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಬೆಚ್ಚಿ ಬೀಳಿಸುವ ನೇರ ಪ್ರಸಾರ ವಿಡಿಯೋ ವೈರಲ್ ಆಗಿದೆ.

ಶಿವಸೇನೆ ಪಕ್ಷದ ಹಿರಿಯ ಹಾಗೂ ಪ್ರಮುಖ ನಾಯಕ ವಿನೋದ್ ಘೋಸಾಲ್ಕರ್ ಪುತ್ರ ಅಭಿಷೇಖ್ ಘೋಸಾಲ್ಕರ್ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಉತ್ತ ಅಭಿಷೇಕ್ ಪತ್ನಿ ಅದೇ ಕ್ಷೇತ್ರದ ಕಾರ್ಪೋರೇಟರ್ ಆಗಿದ್ದಾರೆ. ಇತ್ತ 2019ರ ಕೋವಿಡ್ ಸಂದರ್ಭದಲ್ಲಿ ಶಿವಸೇನೆ ಕಾರ್ಯಕರ್ತನಾಗಿದ್ದ ಮಾರಿಸ್ ನೋರೊನ್ಹಾ ಹಲವು ಕುಟುಂಬಗಳಿಗೆ ಪರಿಹಾರ ಸಾಮಾಗ್ರಿಗಳನ್ನು ನೀಡಿ ಜನನಾಯಕನಾಗಿ ಬೆಳೆದು ನಿಂತಿದ್ದ. ಕೋವಿಡ್ ವೇಳೆ ಹಲವು ಕುಟುಂಬಗಳಿಗೆ ಸ್ವಂತ ಖರ್ಚಿನಲ್ಲಿ ಪರಿಹಾರ ನೀಡಿದ ಮಾರಿಸ್ ಜನಪ್ರಿಯ ನಾಯಕನಾಗಿ ಬೆಳೆದಿದ್ದ. ಇಲ್ಲಿಂದ ಅಭಿಷೇಕ್ ಹಾಗೂ ಮಾರಿಸ್ ನಡುವಿನ ವೈರತ್ವ ಆರಂಭಗೊಂಡಿದೆ.

Latest Videos

undefined

ಶಿವಸೇನೆ ನಾಯಕನ ಮೇಲೆ ಬಿಜೆಪಿ ಶಾಸಕನಿಂದ ಗುಂಡಿನ ದಾಳಿ, ಪೊಲೀಸ್ ಠಾಣೆಯಲ್ಲಿ ನಡೆಯಿತು ಕೃತ್ಯ!

ಇದರ ನಡುವೆ ವಂಚನೆ ಪ್ರಕರಣದಲ್ಲಿ ಮಾರಿಸ್ 90 ದಿನ ಜೈಲುವಾಸ ಅನುಭವಿಸಿದ್ದರು. ಆದರೆ ಈ ಬಂಧನದ ಹಿಂದೆ ಅಭಿಷೇಕ್ ಕೈವಾಡವಿದೆ ಅನ್ನೋದು ಮಾರಿಸ್ ಆರೋಪವಾಗಿತ್ತು. ಹೀಗಾಗಿ ಇವರ ನಡುವಿನ ವೈರತ್ವ ಹೆಚ್ಚಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಹಲವು ಬಾರಿ ಕಿತ್ತಾಡಿಕೊಂಡಿದ್ದಾರೆ. ಗೆಳೆಯರು, ಇತರ ನಾಯಕರ ಮಧ್ಯಸ್ಥಿತಿಕೆಯಲ್ಲಿ ಇಬ್ಬರು ಒಂದಾಗಿದ್ದರು. ವೈರತ್ವ ಮರೆತು ಒಂದಾಗಿ ಕೆಲಸ ಮಾಡುವುದಾಗಿ ಇಬ್ಬರು ಹೇಳಿ ಶೇಕ್ ಹ್ಯಾಂಡ್ ಮಾಡಿದ್ದಾರೆ.

 

⚠️ 🚩 Shiv Sena leader murdered during FB live

Uddhav faction's Shiv Sena leader shot dead in Dahisar, Mumbai.

Accused Morish shot Abhishek after FB live ended and later shot himself, both died. pic.twitter.com/hFmVxZ0tPw

— Mister J. - مسٹر جے (@Angryman_J)

 

ಇತರ ನಾಯಕರು ತೆರಳಿದ ಬಳಿಕ ಇಬ್ಬರು ಫೇಸ್‌ಬುಕ್ ಲೈವ್ ಮೂಲಕ ಜನರಿಗೆ ಸಂದೇಶ ನೀಡುವ ಪ್ಲಾನ್ ರೂಪಿಸಿದ ಮಾರಿಸ್, ಈ ಕುರಿತು ಅಭಿಷೇಕ್ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಅಭಿಷೇಕ್ ಫೇಸ್‌ಬುಕ್ ಲೈವ್ ಆರಂಭಿಸಿದ್ದಾರೆ. ಇಬ್ಬರು ಕುಳಿತುಕೊಂಡು ಜೊತೆಯಾಗಿ ಕೆಲಸ ಮಾಡೋಣ, ಕ್ಷೇತ್ರದ ಅಭಿವೃದ್ಧಿಯಲ್ಲಿ ಒಟ್ಟಿಗೆ ನಿಂತು ಜನಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ ಎಂದು ಮಾತನಾಡಿದ್ದಾರೆ.

ಇದೇ ವೇಳೆ ಮಾರಿಸ್ ನೀವು ಎರಡು ಮಾತುಗಳನ್ನು ಜನರಲ್ಲಿ ಮನವಿ ಮಾಡಿಕೊಳ್ಳಿ ಎಂದಿದ್ದಾನೆ. ಬಳಿಕ ಮಾರಿಸ್ ಎದ್ದು ಫೇಸ್‌ಬುಕ್ ಲೈವ್ ನೀಡುತ್ತಿದ್ದ ಮೊಬೈಲ್ ಬಳಿ ತೆರಳಿದ್ದಾನೆ. ಇತ್ತ ಅಭಿಷೇಕ್ ಮತ್ತೆ ಅದೇ ಮಾತು ಪುನರುಚ್ಚರಿಸಿ, ಇಬ್ಬರು ನಾಯಕರು ಒಂದಾಗಿ ಕೆಲಸ ಮಾಡುತ್ತೇವೆ ಎಂದು ಮಾತು ಮುಗಿಸಿದ್ದಾರೆ. ಬಳಿಕ ಕುರ್ಚಿಯಿಂದ ಎದ್ದ ಬೆನ್ನಲ್ಲೇ ಬರೋಬ್ಬರಿ 5 ಸುತ್ತು ಗುಂಡು ಹಾರಿಸಿದ ಮಾರಿಸ್ ಭೀಕರವಾಗಿ ಹತ್ಯೆ ಮಾಡಿದ್ದಾನೆ.

 

23 ಸೀಟುಗಳಲ್ಲಿ ಸ್ಪರ್ಧೆಗೆ ಉದ್ಧವ್ ಶಿವಸೇನೆ ಪಟ್ಟು: ಬಂಗಾಳ, ಪಂಜಾಬ್‌ ಬಳಿಕ ಮಹಾರಾಷ್ಟ್ರದಲ್ಲೂ ಬಿಕ್ಕಟ್ಟು!

ಅಭಿಷೇಕ್ ದೇಹಕ್ಕೆ 5 ಗುಂಡುಗಳು ಹೊಕ್ಕಿವೆ. ಅಲ್ಲೆ ಕುಸಿದು ಬಿದ್ದ ಅಭಿಷೇಕ್ ಮೃತಪಟ್ಟಿದ್ದಾನೆ. ಇತ್ತ ಮಾರಿಸ್ ಕೂಡ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತೀಗೆ ಪೊಲೀಸ್ ಠಾಣೆಯಲ್ಲಿ ಶಿವಸೇನೆ ನಾಯಕನ ಮೇಲೆ ಬಿಜೆಪಿ ನಾಯಕ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕೂಡ ನಡೆದಿತ್ತು.

click me!