bengaluru Hulimavu Anusha Death ಬೆಂಗಳೂರಿನಲ್ಲಿ ಗಂಡನ ಕಿರುಕುಳ ತಾಳಲಾರದೆ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಮೇಲೆ ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು (ಸೆ.7): ಗಂಡನ ಅತಿಯಾದ ಮಾನಸಿಕ ಹಿಂಸೆಯಿಂದ ನೊಂದು ಗಂಡ ಶ್ರೀಹರಿ ಎದುರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ 27 ವರ್ಷದ ಗೃಹಿಣಿ ಅನುಶಾ, ಶನಿವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ಇದರ ಬೆನ್ನಲ್ಲಿಯೇ ಅನುಶಾ ಅವರ ತಂದೆ ಹೇಮಂತ್, ತಾಯಿ ರೇಣುಕಾ ಹಾಗೂ ಅಕ್ಕ ಉಷಾ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಗಳೂರಿನ ಹುಳಿಮಾವು ಅಕ್ಷಯ್ ನಗರದಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಅನುಶಾ ಮುಂದೆ ಶ್ರೀಹರಿ ದರ್ಶನ್ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾನೆ. ದರ್ಶನ್ ಎರಡು ಮದುವೆ ಆಗಿದ್ದಾನೆ. ನಾನು ಮಾಡಿಕೊಂಡರೆ ತಪ್ಪಾ ಎಂದು ಕೇಳುತ್ತಿದ್ದ ಎಂದು ಅನುಶಾ ಅವರ ತಂದೆ ಹೇಮಂತ್ ಹೇಳಿದ್ದಾರೆ. 'ದರ್ಶನ್ ಒಬ್ಬ ಸಿಕ್ಕಿದ್ದಾನೆ ಆತನನ್ನೇ ಉದಾಹರಣೆ ಕೊಡ್ತಾರೆ. ಇವರೆಲ್ಲಾ ಜನರೇಷನ್ ಬೇವರ್ಸಿಗಳು. ನನ್ನ ಮಗಳಿಗೆ ನೀನು ಇನ್ನೊಂದು ಮದುವೆಯಾಗು. ನಾನೇ ಸಪೋರ್ಟ್ ಮಾಡ್ತಿನಿ ಅಂತಾನೆ. ನನ್ನ ಮಗಳ ಸಾವಿಗೆ ಇವನೇ ಕಾರಣ ಅವನಿಗೆ ಶಿಕ್ಷೆಯಾಗಬೇಕು' ಎಂದು ಅನುಶಾ ಅವರ ತಾಯಿ ರೇಣುಕಾ ಹೇಳಿದ್ದಾರೆ.
ಅವಳು ಬೆಂಕಿ ಹಚ್ಚಿಕೊಳ್ಳೋ ಟೈಮ್‌ನಲ್ಲಿ ನಿನ್ನಿಷ್ಟ ಏನ್ ಬೇಕಾದ್ರೂ ಮಾಡ್ಕೋ ಅಂತಾ ಆತ ಅಲ್ಲಿಯೇ ಕುಳಿತಿದ್ದ. ಆಕೆ ಬೆಂಕಿ ಹಚ್ಚಿಕೊಂಡು 5-10 ನಿಮಿಷವಾದ ಮೇಲೆ, ನಿಮ್ಮ ಮಗಳು ಏನೋ ಮಾಡ್ಕೊಂಡಿದ್ದಾಳೆ ಆಂಟಿ ಎಂದು ನಮಗೆ ಹೇಳಿದ್ದ. ಆಗ ನಾನು ಸುತ್ತಿಗೆಯಲ್ಲಿ ಬಾಗಿಲನ್ನು ಒಡೆದು ಬೆಂಕಿ ಸಮೇತ ನನ್ನ ಮಗಳನ್ನು ಕಂಬಳಿಯಲ್ಲಿ ಸುತ್ತಿಕೊಂಡು ಬಂದೆ. ಅವನು ಅಲ್ಲೇ ಬಿದ್ದುಕೊಂಡಿದ್ದ. ಕೇಳಿದ್ರೆ ಶಾಕ್ ಆಗಿದೆ ಅಂದಿದ್ದ. ಅವನು ಪ್ರೀ ಪ್ಲ್ಯಾನ್ ಮಾಡಿಕೊಂಡೇ ನನ್ನ ಮಗುವನ್ನ ಸಾಯಿಸಿದ್ದಾನೆ. ಡೈವೋರ್ಸ್ ಬೇಕು ಅಂತಾ ಆತ ಕೇಳಿದಾಗಲೆಲ್ಲಾ, ಮಗಳು ನಿನಗೇನು ಕಡಿಮೆ ಮಾಡಿದ್ದೇನೆ ಎಂದು ಕೇಳುತ್ತಿದ್ದಳು ಎಂದಿದ್ದಾರೆ.
'ಮೊಮ್ಮಗ ನನ್ನ ಮಗಳಿದ್ದ ಹಾಗೆ ಇದ್ದಾನೆ. ರಿಗೆಟ್ಟಾ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಕೆಟ್ಟ ನಡತೆ ಅಂತಾ ಮೂರು ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ರು. ಈ ವಿಚಾರವನ್ನೂ ಮಗಳು ನನಗೆ ಹೇಳಿರಲಿಲ್ಲ. ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಸುಮ್ಮನಿದ್ದಳು. ಅವರಪ್ಪ ಕಂಪ್ಲೇಂಟ್ ಕೊಡೋಣ ಎಂದು ಹೇಳಿದಾಗ್ಲೂ, ನನ್ನ ಕುಟುಂಬ ನಾನು ಸರಿ ಮಾಡಿಕೊಳ್ತೆನೆ ಅಂತಾ ಇದ್ದಳು. ಆದ್ರೆ ಆಕೆಗೆ ಮೆಂಟಲ್ ಟಾರ್ಚರ್ ನೀಡ್ತಿದ್ದ. ನಾನು ಇವಳ ಮನೆಗೆ ಹೋಗ್ತಿದ್ದೇನೆ ಅಂತಾ ಮಗಳ ಮೊಬೈಲ್‌ಗೆ ಮೆಸೇಜ್ ಕಳಿಸ್ತಿದ್ದ. ಅವರ ಮನೆಯವರು ನಿಮ್ಮ ಮಗಳನ್ನು ಕೊಡಿ, ಕೊಡಿ ಅಂತಾ ದುಂಬಾಲು ಬಿದ್ದಿದ್ರ. ಹೂವಲಿಟ್ಟು ಸಾಕುತ್ತೇವೆ ಅಂದಿದ್ದರು. ಅದಕ್ಕೋಸ್ಕರ ಸಂಬಂಧಿಗಳಲ್ಲೇ ಮದುವೆ ಮಾಡಿಕೊಟ್ಟಿದ್ವಿ. ಆದ್ರೆ ಅವಳನ್ನೀಗ ಸಜೀವವಾಗಿ ಕೊಂದು ಬಿಟ್ಟಿದ್ದಾರೆ..' ರೇಣುಕಾ ಕಣ್ಣೀರಿಡುತ್ತಲೇ ಹೇಳಿದ್ದಾರೆ.
'ಅನುಶಾ ಎದುರೇ ಮೊಬೈಲ್‌ನಲ್ಲಿ ಬೇರೆ ಹುಡುಗಿಯರ ಜೊತೆ ಅಶ್ಲೀಲವಾಗಿ ಮಾತನಾಡ್ತಿದ್ದ. ಮೊಬೈಲ್‌ನಲ್ಲಿ ಸೆಕ್ಸ್ ವಿಡಿಯೋ ತೋರಿಸ್ತಿದ್ದ ಆತ, ಇದೇ ರೀತಿ ನೀನೂ ಮಾಡಬೇಕು ಎನ್ನುತ್ತಿದ್ದ. ನೀನು ಹೀಗೆ ಸಹಕರಿಸಿಲ್ಲ ಅಂದ್ರೆ ಮತ್ತೊಬ್ಬರು ಮಾಡ್ತಾರೆ ಎನ್ನುತ್ತಿದ್ದ. ನನಗೆ ದುಡ್ಡಿರೋಳು ಬೇಕು. ನೀನು ಬೇಡ ಎನ್ನುತ್ತಿದ್ದ. ಆತ ಎಷ್ಟೇ ಕಷ್ಟ ಕೊಟ್ರು ಮಗು ಸಲುವಾಗಿ ಸಹಿಸಿಕೊಂಡು ಬಂದಿದ್ದಳು. ಕಳೆದೊಂದು ತಿಂಗಳಿನಿಂದ ತುಂಬಾ ಟಾರ್ಚರ್ ಕೊಡ್ತಿದ್ದ. ಎಷ್ಟೆಲ್ಲಾ ಗಂಡಸರು ಎರಡು ಮದುವೆ ಮಾಡಿಕೊಂಡಿಲ್ಲ ಎನ್ನುತ್ತಿದ್ದ. ಇದರಿಂದ ಮಾನಸಿಕವಾಗಿ ಅನುಶಾ ಕುಗ್ಗಿ ಹೋಗಿದ್ದಳು. ಗಂಡನಿಗೆ ವಾಟ್ಸಪ್ ಕಾಲ್ ಮಾಡಿ ಬೆಂಕಿ ಹಚ್ಚಿಕೊಂಡು ಸಾವು ಕಂಡಿದ್ದಾಳೆ..' ಎಂದು ಅನುಶಾ ಅವರ ಅಕ್ಕ ಉಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!
ಅನುಶಾ ಅವರನ್ನು ತಾಯಿ ರೇಣುಕಾ ಭಾವನ ಮಗನಾಗಿರುವ ಶ್ರೀಹರಿಗೆ ನೀಡಿ ಮದುವೆ ಮಾಡಲಾಗಿತ್ತು. ಅನುಶಾ ಸಾವಿನ ಬಳಿಕ ಕುಟುಂಬಸ್ಥರು ಹಲವು ಆರೋಪಗಳನ್ನು ಮಾಡಿದ್ದಾರೆ. ಇನ್ನೊಂದೆಡೆ, ವಾಟ್ಸಾಪ್ ಚಾಟ್ ನಲ್ಲಿ ಶ್ರೀಹರಿ ಕಳ್ಳಾಟ ಕೂಡ ಬಯಲಾಗಿದೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಶ್ರೀಹರಿ, ನಾನು ಅವಳನ್ನೇ ಮದುವೆ ಆಗೋದು. ನನಗೆ ಡೈವೋರ್ಸ್ ನೀಡು ಎಂದು ಹಿಂಸೆ ಕೊಡ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಟ್ಸಾಪ್‌ನಲ್ಲಿ ಮಾತುಕತೆ ನಡೆಸಿತ್ತು. ಚಾಟಿಂಗ್ ವೇಳೆಯಲ್ಲೂ ನನ್ನ ಬಿಟ್ಟು ಹೋಗು ಎಂದು ಶ್ರೀಹರಿ ಹೇಳಿದ್ದ. ಆದರೆ, ಇದಕ್ಕೆ ಅನುಶಾ ಒಪ್ಪಿರಲಿಲ್ಲ ಎನ್ನಲಾಗಿದೆ. ಶಿರಸಿ ಮೂಲದ ಶ್ರೀಹರಿ ಹುಳಿಮಾವು ಅಕ್ಷಯನಗರದಲ್ಲಿ ಸ್ವಂತ ಫ್ಲಾಟ್ ಪಡೆದು ವಾಸವಾಗಿದ್ದ. ಇದೇ ಫ್ಲಾಟ್ ನಲ್ಲಿ ಅನುಶಾ ಕೂಡ ವಾಸವಿದ್ದಳು. ಮಗು ನೋಡಿಕೊಳ್ಳುವ ಸಲುವಾಗಿ ಅನುಷಾ ಜೊತೆಗೆ ತಂದೆ ತಾಯಿ ಕೂಡ ಉಳಿದುಕೊಂಡಿದ್ದರು.