ವಾಕಿಂಗ್ ಹೋಗುತ್ತಿದ್ದೇನೆ ಮಕ್ಕಳ ನೋಡ್ಕೊಳ್ಳಿ; ಪತಿಗೆ ಹೇಳಿ ಹೊರಟ ಮಹಿಳಾ ಪೊಲೀಸ್ ಮರಳಿ ಬರಲೇ ಇಲ್ಲ!

By Chethan KumarFirst Published Sep 7, 2024, 4:39 PM IST
Highlights

ಬೆಳಗ್ಗೆ ಇಬ್ಬರು ಮಕ್ಕಳ ನೋಡಿಕೊಳ್ಳಿ, ವಾಕಿಂಗ್ ಹೋಗಿ ಬರುತ್ತೇನೆ ಎಂದು ಪತಿಗೆ ಹೇಳಿ ಹೊರಟ ಮಹಿಳಾ ಸಬ್ ಇನ್ಸ್‌ಪೆಕ್ಟರ್ 7ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ. ಇದೀಗ 8 ತಿಂಗಗಳ ಮಗು ಹಾಗೂ 4 ವರ್ಷದ ಮಗ ತಾಯಿ ಕಾಣದೇ ಕಂಗಾಲಾಗಿದೆ.
 

ಇಂದೋರ್(ಸೆ.07) ಪ್ರತಿ ದಿನ ವ್ಯಾಯಾಮ ಮಾಡುತ್ತಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆ ದಿನ ಮಾತ್ರ ಕೊಂಚ ಬೇಗನೆ ವಾಕಿಂಗ್ ಹೊರಟಿದ್ದಾರೆ. 8 ತಿಂಗಳ ಮಗು ಹಾಗೂ 4 ವರ್ಷದ ಮಗನನ್ನು ನೋಡಿಕೊಳ್ಳಿ, ವಾಕಿಂಗ್ ಮಾಡಿ ಬರುತ್ತೇನೆ ಎಂದು ಪತಿಗೆ ಹೇಳಿ ಹೊರಟ ಮಹಿಳಾ ಪೊಲೀಸ್ ಅಧಿಕಾರಿ 7ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ತಾಯಿ ಮರಳಿ ಬರುವುದಿಲ್ಲ ಅನ್ನೋ ಅರಿವಿಲ್ಲದೆ ಇಬ್ಬರು ಮಕ್ಕಳು ತಾಯಿಗಾಗಿ ಪರಿತಪಿಸುವ ದೃಶ್ಯ ಮನಕಲುಕುವಂತಿದೆ.

2015ರ ಮಹಿಳಾ ಸಬ್ಇನ್ಸ್‌ಪೆಕ್ಟರ್ ನೇಹಾ ಶರ್ಮಾ ಮೃತ ದುರ್ದೈವಿ. ಪ್ರತಿ ದಿನ ನೇಹಾ ಶರ್ಮಾ ವ್ಯಾಯಾಮ ಮಾಡಿ ದೇಹವನ್ನು ಫಿಟ್ ಹಾಗೂ ಆರೋಗ್ಯವಾಗಿಟ್ಟುಕೊಂಡಿದ್ದರು. ಇಬ್ಬರು ಮಕ್ಕಳ ತಾಯಿ ನೇಹಾ ಅಝಾದ್ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಷ್ಟೇ ಮೆಟರ್ನಿಟಿ ರಜೆ ಬಳಿ ಕರ್ತವ್ಯಕ್ಕೆ ಹಾಜರಾಗಿದ್ದರು.

Latest Videos

 ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಮೆಟ್ರೋ ಸ್ಫೋಟಿಸುವ ಬೆದರಿಕೆ; ಮಹಿಳೆಗೆ ಪ್ಯಾರಿಸ್ ಪೊಲೀಸರ ಗುಂಡೇಟು! 

ಪ್ರತಿ ದಿನ ವ್ಯಾಯಾಮ ಮಾಡುತ್ತಿದ್ದ ನೇಹಾ ಶರ್ಮಾ, ಘಟನೆ ನಡೆದ ದಿನ ಬೆಳಗ್ಗೆ ಎದ್ದು ಮಾರ್ನಿಂಗ್ ವಾಕ್ ಹೋಗಿ ಬರುತ್ತೇನೆ ಎಂದಿದ್ದಾರೆ. ಇದೇ ವೇಳೆ 8 ತಿಂಗಳ ಮಗು ಹಾಗೂ 4 ವರ್ಷದ ಮಗನ ನೋಡಿಕೊಳ್ಳಿ, ಬೇಗ ಬರುತ್ತೇನೆ ಎಂದು ಹೊರಟಿದ್ದಾರೆ. ಅಝಾದ್ ನಗರ ಪೊಲೀಸ್ ಠಾಣೆ ಬಳಿಯ ಪೊಲೀಸ್ ಟ್ರೈನಿಂಗ್ ಶಾಲೆಯ 7ನೇ ಮಹಡಿಯಿಂದ ಜಿಗಿದು ಬದುಕನ್ನೇ ಅಂತ್ಯಗೊಳಿಸಿದ್ದಾರೆ.

ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆ ಹೊತ್ತಿಗೆ ಮನೆಗೆ ಮರಳುತ್ತಿದ್ದ ನೇಹಾ ಶರ್ಮಾ, ಗಂಟೆ 9 ಆದರೂ ಮರಳಲಿಲ್ಲ. ಗಾಬರಿಗೊಂಡ ನೇಹಾ ಶರ್ಮಾ ಪತಿ ನೇರವಾಗಿ ಅಝಾದ್ ನಗರ ಪಲೀಸ್ ಠಾಣೆಯಲ್ಲಿ ವಿಚಾರಿಸಿದ್ದಾರೆ. ನೇಹಾ ಶರ್ಮಾ ಮಾರ್ನಿಂಗ್ ವಾಗ್ ಮಾಡಿ ಮರಳಿಲ್ಲ. ಠಾಣೆಗೆ ತೆರಳಿಲುವ ಸಾಧ್ಯತೆ ಮೇರೆಗೆ ಕರೆ ಮಾಡಿದ್ದಾರೆ. ಆದರೆ ನೇಹಾ ಶರ್ಮಾ ಪೊಲೀಸ್ ಠಾಣೆಗೆ ಆಗಮಿಸಿಲ್ಲ ಅನ್ನೋದು ಖಚಿತವಾಗಿದೆ. ಇದು ಪತಿಯ ಆತಂಕ ಹೆಚ್ಚಿಸಿದೆ. ತಕ್ಷಣವೇ ಪೊಲೀಸರಿಗೆ ನೇಹಾ ಮಿಸ್ಸಿಂಗ್ ಆಗಿದ್ದಾರೆ. ತ್ವರಿತವಾಗಿ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮನೆಗೆ ಮರಳಿಲ್ಲ, ಇತ್ತ ಠಾಣೆಗೆ ಆಗಮಿಸಿಲ್ಲ ಅನ್ನೋದರ ಗಂಭೀರತೆಯನ್ನು ಪೊಲೀಸರು ಅರ್ಥ ಮಾಡಿಕೊಂಡಿದ್ದಾರೆ. ತಕ್ಷಣವೆ ಹುಟುಕಾಟ ನಡೆಸಿದ್ದಾರೆ. ಸಾಮಾನ್ಯವಾಗಿ ನೇಹಾ ಶರ್ಮಾ ವಾಕಿಂಗ್, ವ್ಯಾಯಾಮ ನಡೆಸುತ್ತಿದ್ದ ಪೊಲೀಸ್ ಟ್ರೈನಿಂಗ್ ಮೈದಾನ ಹಾಗೂ ಪಾರ್ಕ್‌ನತ್ತ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಪೊಲೀಸ್ ಟ್ರೈನಿಂಗ್ ಸ್ಕೂಲ್ ಕೆಳಭಾಗದಲ್ಲಿ ನೇಹಾ ಮೃತದೇಹ ಪತ್ತೆಯಾಗಿದೆ. 

ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ನೇಹಾ ಶರ್ಮಾ ಬದುಕು ಅಂತ್ಯಗೊಳಿಸುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿದೆ. ಒಂದೆಡೆ ಕೆಲಸದ ಒತ್ತಡ, ಮತ್ತೊಂದೆಡ ಇಬ್ಬರು ಮಕ್ಕಳನ್ನು ನಿಭಾಸುವುದು ನೇಹಾಗೆ ಒತ್ತಡ ಹೆಚ್ಚಿಸಿತ್ತು. ಅದರಲ್ಲೂ 8 ತಿಂಗಳ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವುದು ನೇಹಾ ಮೇಲೆ ಗಂಬೀರ ಪರಿಣಾಮ ಬೀರಿತ್ತು. ಇದರ ಜೊತೆಗೆ ಠಾಣೆಯಲ್ಲಿನ ತೀವ್ರ ಒತ್ತಡದ ಕೆಲಸಗಳು ನೇಹಾಳನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಳು. ದಿಡೀರ್  ಈ ರೀತಿಯ ನಿರ್ಧಾರ ಮಾಡಿದ್ದಾರೆ. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಹೇಳಿದ್ದಾರೆ.

ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿ ಎದುರು ಡ್ರ್ಯಾಗನ್‌ ಹಿಡಿದು ಪುಡಿರೌಡಿಯ ಹುಚ್ಚಾಟ
 

click me!