ತಮಿಳುನಾಡಲ್ಲಿ ಕರ್ನಾಟಕ ಐಪಿಎಸ್ ಆತ್ಮಾಹುತಿ ಯತ್ನ: ಹೈಡ್ರಾಮಾ ಬಳಿಕ ಅರುಣ್ ರಂಗರಾಜನ್ ಬಂಧನ

By Kannadaprabha News  |  First Published Sep 7, 2024, 11:12 AM IST

ಲಿವ್ -ಇನ್ ಸಂಗಾತಿಯ ಮೇಲೆ ದಾಳಿ ನಡೆಸಿದ ಬಳಿಕ ಬಂಧನದ ಭೀತಿಯಲ್ಲಿದ್ದ ಕರ್ನಾಟಕದ ಐಪಿಎಸ್ ಅಧಿಕಾರಿ ಎಂ. ಅರುಣ್ ರಂಗರಾಜನ್ ತಮ್ಮ ಮನೆಗೆ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದಾರೆ. ಆದರೆ ಬೆಂಕಿ ಹೊತ್ತಿದ್ದ ಮನೆಗೇ ನುಗ್ಗಿದ ಪೊಲೀಸರು ಅರುಣ್ ರನ್ನು ಬಂಧಿಸಿದ್ದಾರೆ.


ಈರೋಡ್ (ತಮಿಳುನಾಡು)(ಸೆ.07): ಲಿವ್ -ಇನ್ ಸಂಗಾತಿಯ ಮೇಲೆ ದಾಳಿ ನಡೆಸಿದ ಬಳಿಕ ಬಂಧನದ ಭೀತಿಯಲ್ಲಿದ್ದ ಕರ್ನಾಟಕದ ಐಪಿಎಸ್ ಅಧಿಕಾರಿ ಎಂ. ಅರುಣ್ ರಂಗರಾಜನ್ (38) ತಮ್ಮ ಮನೆಗೆ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದಾರೆ. ಆದರೆ ಬೆಂಕಿ ಹೊತ್ತಿದ್ದ ಮನೆಗೇ ನುಗ್ಗಿದ ಪೊಲೀಸರು ಅರುಣ್ ರನ್ನು ಬಂಧಿಸಿದ್ದಾರೆ.

ಫೆಬ್ರವರಿಯಲ್ಲಿ ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಅರುಣ್ ತಮ್ಮ ಸಂಗಾತಿ ಹಾಗೂ ಕರ್ನಾಟಕದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸುಜಾತಾರ ಮೇಲೆ ದಾಳಿ ನಡೆಸಿದ್ದಾಗ ಪೊಲೀಸರ ಮಧ್ಯ ಪ್ರವೇಶದಿಂದ ಆ ಸಮಸ್ಯೆ ಬಗೆಹರಿದಿತ್ತು. ಯಾವುದೇ ದೂರು ದಾಖಲಾಗಿರಲಿಲ್ಲ. ನಂತರ ಸುಜಾತಾ ಗೋಬಿಚೆಟ್ಟಿಪಾಳ್ಯಂನಲ್ಲಿರುವ ರಂಗರಾಜನ್‌ರ ಪಾಲಕರ ಮನೆಗೆ ಮರಳಿದ್ದರು. ರಂಗರಾಜನ್ ಮತ್ತೊಮ್ಮೆ ನಡೆಸಿದ ದಾಳಿಯ ದಾಖಲಾಗಿದ್ದು, ಸ್ಥಳೀಯ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಘಟನೆ ಕಾರಣ ಕರ್ನಾಟಕ ಸರ್ಕಾರ ಅವರನ್ನು ಅಮಾನತು ಗೊಳಿಸಿತ್ತು. ಅಂದಿನಿಂದ ಸುಜಾತಾ ತಮ್ಮ ತಂದೆ ತಾಯಿಯ ಮನೆಯಲ್ಲಿದ್ದರು. ಚೆಟ್ಟಿಪಾಳ್ಯಂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

Tap to resize

Latest Videos

ಕಿಲ್ಲಿಂಗ್‌ ಸ್ಟಾರ್‌ನ ಕರಾಳ ಮುಖ: ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್‌ ಓದ್ತಾ ಓದ್ತಾ ಚಚ್ಚಿದ ದರ್ಶನ್‌..!

ಕಾಮರಾಜ್ 'ಈ ನಡುವೆ, ಭಾನುವಾರ ಸುಜಾತಾ ಅವರು ಅರುಣ್ ಮನೆಗೆ ಮರಳಿದಾಗ ಅವರಿಬ್ಬರ ಮಧ್ಯ ಜಗಳ ಶುರುವಾಗಿದೆ. ಆಗ ಅರುಣ್ ಆಕೆಯ ಮೇಲೆ ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ತಪ್ಪಿಸಿಕೊಂಡ ಸುಜಾತಾ ಪೊಲೀಸರಿಗೆ ಮಾಹಿತಿ ನೀಡಿದ್ದರು' ಎಂದು ಗೋಬಿ ಪರಿಣಾಮ ಫೆಬ್ರವರಿಯಲ್ಲೇ ಸುಜಾತಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಕುರಿತು ಪ್ರಕರಣ ಕೂಡಲೇ ಪೊಲೀಸರು ಅರುಣ್ ಬಂಧನಕ್ಕೆ ಅವರ ಮನೆಗೆ ಆಗಮಿಸಿದ್ದಾರೆ. ಪೊಲೀಸರ ಆಗಮನವಾಗುತ್ತಿ ದ್ದಂತೆ ಅರುಣ್ ಕೋಣೆಯೊಳಗೆ ಹೊಕ್ಕು ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸಿದ ಪೊಲೀಸರು ಅರುಣ್‌ರನ್ನು ಬಂಧಿಸಿದ್ದಾರೆ. ಈ ವೇಳೆ ಅರುಣ್ ಪೊಲೀಸ್ ಅಧಿಕಾರಿ ಕಾಮರಾಜ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈಗ ಅರುಣ್‌ರನ್ನು ಕೊಯ ಮತ್ತೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. 

2012ರಲ್ಲಿ ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಆಗಿದ್ದ ಅರುಣ್ ಅಲ್ಲಿನ ಐಪಿಎಸ್ ಅಧಿಕಾರಿ ಎಲಕ್ಕಿಯಾರನ್ನು ವಿವಾಹವಾಗಿದ್ದರು. ನಂತರ ಇಬ್ಬರನ್ನೂ ಕರ್ನಾಟಕಕ್ಕೆ ವರ್ಗಾಯಿಸಲಾಗಿತ್ತು. ಅರುಣ್ ಕಲಬುರಗಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಆಗಿ ನಿಯೋಜನೆ ಆಗಿದ್ದರು. ಈ ವೇಳೆ ಅರುಣ್ ಅವರು. ಕಂಡಪ್ಪ ಎಂಬ ಪೊಲೀಸ್ ಇನ್ಸ್‌ಪೆಕ್ಟರ್‌ರ ಪತ್ನಿ ಆಗಿದ್ದ ಹಾಗೂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸುಜಾತಾರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರು. ಈ ಬಗ್ಗೆ ಕಂಡಪ್ಪ ಅವರು ಮೇಲಧಿಕಾರಿಗಳಿಗೆ ದೂರು ನೀಡಿದಾಗ ಅರುಣ್‌ ರನ್ನು ಕಾರವಾರಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಏಲಕ್ಕಿಯಾ ಹಾಗೂ ಅರುಣ್ ವಿಚ್ಚೇದನ ಪಡೆದಿದ್ದರು. ಸುಜಾತಾ ಕೂಡ ಪಯೊ ಕಂಡಪ್ಪನಿಂದ ವಿಚ್ಚೇದನ ಪಡೆದು ಲಿವ್-ಇನ್ ಒಟ್ಟಿಗೆ ಬಾಳತೊಡಗಿದ್ದರು.

click me!