ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ತುಮಕೂರು (ಅ.22): ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಮೂಲದ ಮಾರುತಿ ಅಲಿಯಾಸ್ ಫೋಲಾರ್ಡ್ (34) ಕೊಲೆಯಾದ ರೌಡಿಶೀಟರ್. ನಿನ್ನೆ ಮಧ್ಯರಾತ್ರಿ ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ನಾಲೈದು ಮಂದಿ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಮಾರುತಿ ತುಮಕೂರಿನ ಮಂಚಲಕುಪ್ಪೆ ಬಳಿ ಪತ್ನಿ ಜೊತೆ ವಾಸವಾಗಿದ್ದನು.
undefined
ಶನಿವಾರ ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದಾಗ ರೌಡಿಶೀಟರ್ ಮಾರುತಿ ಮೇಲೆ ದುಷ್ಕರ್ಮಿಗಳಿಂದ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅನೇಕ ವರ್ಷಗಳ ಹಿಂದೆ ನಡೆದಿದ್ದ ರೌಡಿ ಶೀಟರ್ ಹಟ್ಟಿ ಮಂಜನ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್‌ಗಳಲ್ಲಿ ಮಾರುತಿ ಆರೋಪಿಯಾಗಿದ್ದನು. ಅದೇ ಸೇಡಿನ ಹಿನ್ನೆಲೆಯಲ್ಲಿ ಮಾರುತಿ ಅಲಿಯಾಸ್ ಪೊಲಾರ್ಡ್‌ನಲ್ಲಿ ಕೊಲೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯರನ್ನು ಡೋಂಗಿ ಸಮಾಜವಾದಿ, ಫುಲ್‌ಟೈಂ ಮೀರ್‌ಸಾದಿಕ್, ಹೆಗ್ಗಣಕ್ಕೆ ಹೋಲಿಸಿದ ಎಚ್‌ಡಿಕೆ!
ಇನ್ನು ರೌಡಿಶೀಟರ್ ಮಂಜುನಾಥ್ ಕೊಲೆಯ ಪ್ರತಿಕಾರ ತೀರಿಸಿಕೊಳ್ಳಲು ಆತನ ಕಡೆಯವರೇ ಮಾರುತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ಮೂಲಗಳಿಂದ ಸ್ಪಷ್ಟವಾಗಿದೆ. ಈ ಘಟನೆಯೇ ಮಾರುತಿ ಹತ್ಯೆಗೆ ಕಾರಣ ಎಂದು ಅನುಮಾನ ವ್ಯಕ್ತಪಡಿಸಲಾಗಿದ್ದು ಪೊಲೀಸರು ದುಷ್ಕರ್ಮಿಗಳ ಎಡೆಮುರಿ ಕಟ್ಟಲು ತಂಡವನ್ನು ರಚಿಸಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್, ಎಎಸ್‌ಪಿ ಮರಿಯಪ್ಪ ಹಾಗೂ ಡಿವೈಎಸ್‌ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಘಟನೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಕೊಲೆ:
ಕೋಲಾರ (ಅ.22): ಆತ ಗ್ರಾಮ ಪಂಚಾಯ್ತಿ ಸದಸ್ಯ. ಗ್ರಾಮದ ಸಮಸ್ಯೆ ಏನೇ ಇದ್ರು ಪರಿಹರಿಸುತ್ತಾ ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಆತನ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಡು ರಸ್ತೆಯಲ್ಲಿ ಬರ್ಬರವಾಗಿ ಹಾಡಹಗಲೇ ಕೊಲೆಯಾಗಿ ಹೋಗಿದ್ದಾನೆ. ಹೆಣದ ಮುಂದೆ ಗೋಳಾಡುತ್ತಿರುವ ಕುಟುಂಬಸ್ಥರ. ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿರುವ ಎಸ್ಪಿ ಆಂಡ್ ಟೀಂ. ಹಾಡಹಗಲೇ ಈ ರೀತಿ ಬರ್ಬರವಾಗಿ ಕೊಲೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ನ ಬಳಿ ನಡೆದಿದೆ.
ಬೆಳಗಾವಿ: ಮಹಿಳೆಯನ್ನು ಹತ್ಯೆ ಮಾಡಿ ಕಾಣೆಯಾದ ಕಥೆ ಕಟ್ಟಿ ಸಿಕ್ಕಿ ಬಿದ್ದ ಕೊಲೆಗಡುಕರು
ನಡು ರಸ್ತೆಯಲ್ಲಿ ಕೊಲೆ ಮಾಡಿ ಬೇಲಿಗೆ ಎಸೆದು ಹೋದ್ರು: ನಡು ರಸ್ತೆಯಲ್ಲಿ ಹೆಣವಾಗಿ ಬಿದ್ದಿರುವ ಈತನ ಹೆಸರು ಅನಿಲ್ ಕುಮಾರ್ ಅಂತ, ಜಸ್ಟ್ 38 ವರ್ಷ. ಮಾಲೂರು ತಾಲೂಕಿನ ಮೀಣಸಂದ್ರ ಗ್ರಾಮದವನಾಗಿರುವ ಅನಿಲ್ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ವಯಸ್ಸಿನ್ನು ಚಿಕ್ಕದಾದ್ರು ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ. ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್ ಗ್ರಾಮದ ಯಾವುದೇ ಸಮಸ್ಯೆ ಇದ್ರು ಪರಿಹಾರ ಮಾಡುವ ಮೂಲಕ ಗ್ರಾಮದಲ್ಲಿದ ಕೆಲ ರಾಜಕೀಯ ವಿರೋಧಿಗಳ ಕೋಪಕ್ಕೆ ಕಾರಣವಾಗಿದ್ದ. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಇಂದು ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾಲೂರು ಪಟ್ಟಣದ ಕಡೆಗೆ ಅನಿಲ್ ಬರುವಾಗ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಅನಿಲ್ ನ ತಲೆಗೆ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಕೋಲಾರ-ಹೊಸೂರು ಹೈವೇ ಆಗಿರೋದ್ರಿಂದ ಎಲ್ಲಿ ಜನ ಸೆರ್ತಾರೋ ಅಂತ ಗಾಬರಿಗೊಂಡ ದುಷ್ಕರ್ಮಿಗಳು ಕೊಲೆಗೆ ಬಳಸಿದ್ದ ಮಚ್ಚು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.