ಪೋರ್ನ್ ವಿಡಿಯೋ ನೋಡಿ 6 ಬಾಲಕಿಯರ ಮೇಲೆ ರೇಪ್, ಶಾಲಾ ಪ್ರಾಂಶುಪಾಲನ ಕಾಮದಾಟ ಬಯಲು!

By Suvarna NewsFirst Published Jun 5, 2023, 8:03 PM IST
Highlights

ಶಾಲೆಯ ಪ್ರಾಂಶುಪಾಲನಿಗೆ ಪೋರ್ನ್ ವಿಡಿಯೋ ನೋಡುವ ಹುಚ್ಚು. ನೋಡಿದ ಮೇಲೆ ಸುಮ್ಮನಿರುವು ಜಾಯಮಾನ ಈತನದಲ್ಲ. ತನ್ನ ಕಾಮಕ್ಕೆ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಇದು ಈತನ ಪ್ರತಿ ದಿನ ಪ್ರಮುಖ ಕೆಲಸವಾಗಿತ್ತು. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಈತನ ಕಾಮಪುರಾಣ ಇದೀಗ ಬಯಲಾಗಿದೆ.

ಜೈಪುರ(ಜೂ.05): ಪ್ರತಿ ದಿನ ಪೋರ್ನ್ ವಿಡಿಯೋ ನೋಡಿ ಶಾಲೆಯ ಅಪ್ರಾಪ್ತ ಬಾಲಕಿಯರ ಮೇಲೆ ರೇಪ್. ಇದು ಪ್ರಾಂಶುಪಾಲನ ಕಾಮದಾಟ. ಬಾಲಕಿಯನ್ನು ಬೆದರಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಕಳೆದ ಒಂದು ವರ್ಷದಲ್ಲಿ ಈತ 6 ವಿದ್ಯಾರ್ಥಿನಿಯರ ಮೇಲೆ ಸತತ ಅತ್ಯಾಚಾರ ಎಸಗಿದ್ದಾನೆ. ಪ್ರತಿ ದಿನ ಒಂದಲ್ಲೂ ಒಂದು ವಿದ್ಯಾರ್ಥಿನಿ ಮೇಲೆ ರೇಪ್ ಮಾಡಿದ್ದಾನೆ. ಕೊನೆಗೆ ವಿದ್ಯಾರ್ಥಿನಿಯರು ಶಾಲೆಗೆ ಹೋಗಲು ನಿರಾಕರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪ್ರಾಂಶುಪಾಲನ ಬಂಧಿಸಲಾಗಿದೆ. ಈ ಘಟನೆ ನಡೆದಿರುವು ರಾಜಸ್ಥಾನದ ದುಂಗಾರ್ಪುರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಪ್ರಾಂಶುಪಾಲ ರಮೇಶ್ ಚಂದ್ರ ಕತಾರ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು 2 ದಿನ ಪೋಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದೀಗ ಈತನ ಒಂದೊಂದೆ ಕಾಮಪುರಾಣಗಳು ಬಯಲಾಗುತ್ತಿದೆ. ಈತನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಮಾತ್ರವಲ್ಲ, ಹಲವರ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. 

ರೇಪ್ ಆರೋಪದ ತೀರ್ಪಿಗೆ ಮಹಿಳೆಯ ಜಾತಕ ಕೇಳಿದ ಹೈಕೋರ್ಟ್! ಏನಿದು ಕುಜ ದೋಷ?

ರಮೇಶ್ ಚಂದ್ರ ಕತಾರನಿಗೆ ಪೋರ್ನ್ ವಿಡಿಯೋ ನೋಡುವ ಹುಚ್ಚು. ಈ ಹುಚ್ಚು ಇಲ್ಲಿಗೆ ನಿಂತಿಲ್ಲ. ಬಳಿಕ ಇದೇ ರೀತಿ ಕಾಮದಾಟ ನಡೆಸುವ ವಿಕೃತ ಮನಸ್ಥಿತಿ. ಇದಕ್ಕಾಗಿ ಈತ ಆರಿಸಿಕೊಂಡಿದ್ದ ಶಾಲೆಯ ಅಪ್ರಾಪ್ರ ಬಾಲಕಿಯರನ್ನು. ಬಾಲಕಿಯರನ್ನು ತನ್ನ ಕೊಠಡಿಗೆ ಕರೆಯಿಸಿ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ ವಿರೋಧಿಸಿ ಬಾಲಕಿಯರನ್ನು ಬೆದರಿಸುತ್ತಿದ್ದ. ಅಪ್ರಾಪ್ತ ಬಾಲಕಿಯನ್ನು ಪ್ರಾಂಶುಪಾಲರ ಬೆದರಿಕೆಗೆ ಹೆದರಿ ಮಾಹಿತಿ ಬಾಯ್ಬಿಟ್ಟಿಲ್ಲ.

ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ರಮೇಶ ಚಂದ್ರ ಕತಾರ, ಪ್ರತಿ ದಿನ ಒಬ್ಬೊಬ್ಬ ಬಾಲಕಿಯರ ಮೇಲೆ ರೇಪ್ ಮಾಡುತ್ತಿದ್ದ. ಶಾಲೆಯಲ್ಲಿ ಮಾತ್ರವಲ್ಲ, ಕಾರಿನಲ್ಲಿ ತನ್ನ ಮನೆಯಲ್ಲೂ ಈತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕಳೆದ ಒಂದು ವರ್ಷದಲ್ಲಿ 6 ಬಾಲಕಿಯರ ಮೇಲೆ ಸತತ ಅತ್ಯಾಚಾರ ನಡೆಸಿದ್ದಾನೆ. ಈನ ವಿಕೃತ ಆಟ ವಿಪರೀತವಾಗುತ್ತದ್ದಂತೆ ಈ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಮಾಹಿತಿ ಕೇಳಿದಾಗ ಮಕ್ಕಳು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್ ಗೆಳೆಯ!

ಆಕ್ರೋಶಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶಾಲೆಗೆ ತೆರಳಿದ್ದಾರೆ. ಅಷ್ಟರಲ್ಲೇ ಪ್ರಾಂಶುಪಾಲ ಪರಾರಿಯಾಗಿದ್ದ. ಆದರೆ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಾಂಶುಪಾಲನನ್ನು ಬಂಧಿಸಿದ್ದಾರೆ. ಇತ್ತ 6 ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.  
 

click me!