Asianet Suvarna News Asianet Suvarna News

ರೇಪ್ ಆರೋಪದ ತೀರ್ಪಿಗೆ ಮಹಿಳೆಯ ಜಾತಕ ಕೇಳಿದ ಹೈಕೋರ್ಟ್! ಏನಿದು ಕುಜ ದೋಷ?

ಮದುವೆಯ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಜಾಮೀನು ಅರ್ಜಿಯನ್ನು ನಿರ್ಧರಿಸಲು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಮಹಿಳೆಯ ಕುಂಡಲಿಯನ್ನು ಅಧ್ಯಯನ ಮಾಡಲು ಆದೇಶಿಸಿದೆ. ಮಹಿಳೆಗೆ ಕುಜ ದೋಷ ಇದೆ ಆರೋಪಿ ಪ್ರತಿವಾದ ತೆಗೆದ ಬಳಿಕ ಇದು ನಡೆದಿದೆ.

Allahabad High Court orders woman to submit kundali to ascertain mangalik status What is Mangalik dosh skr
Author
First Published Jun 3, 2023, 3:35 PM IST

ಮದುವೆ ಆಗ್ತೀನಿ ಎಂದು ನಂಬಿಸಿ ರೇಪ್ ಮಾಡಿದ ವ್ಯಕ್ತಿಯೊಬ್ಬ, ನಂತರ ಅವಳು ಮಾಂಗಳಿಕಳೆಂದು ಹೇಳಿ ವಿವಾಹವಾಗಿಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಿದ ಘಟನೆ ನಡೆದಿದೆ. ಸಾಲದೆಂಬಂತೆ ವಿಚಾರಣೆ ನಡೆಸಿದ ಹೈಕೋರ್ಟ್‌ನ ಲಕ್ನೋ ಪೀಠವು, ಮಹಿಳೆಯ ಜಾತಕವನ್ನು ಅಧ್ಯಯನ ಮಾಡಲು ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಕೇಳಿದ ವಿಚಿತ್ರ ಪ್ರಕರಣ ನಡೆದಿದೆ. 

ಅತ್ಯಾಚಾರ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ಪರಿಗಣಿಸುತ್ತಿತ್ತು. ಈ ಸಂದರ್ಭದಲ್ಲಿ ತಾನು ಆಕೆಗೆ ವಂಚಿಸಿದ್ದನ್ನು ಸಮರ್ಥಿಸಿಕೊಂಡ ಯುವಕನು, ಆಕೆಯ ಜಾತಕದಲ್ಲಿ ಕುಜ ದೋಷ ಇರುವ ಕಾರಣ ಆಕೆಯೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹವಾಗಿಲ್ಲ ಎಂದು ಪ್ರತಿಪಾದಿಸಿದ್ದಾನೆ. ಆಗ, ಮಹಿಳೆಯ ಪರ ವಕೀಲರು ಆಕೆ ಮಾಂಗಳಿಕ್ ಅಲ್ಲ ಎಂದು ವಾದಿಸಿದ ಕಾರಣ, ಏಕಸದಸ್ಯ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರು ಮಹಿಳೆ ಮತ್ತು ಅರ್ಜಿದಾರರಿಗೆ ತಮ್ಮ ಕುಂಡಲಿಗಳನ್ನು ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಸಲ್ಲಿಸುವಂತೆ ಆದೇಶಿಸಿದ್ದಾರೆ. ಮೂರು ವಾರಗಳಲ್ಲಿ ಮುಚ್ಚಿದ ಕವರ್‌ನಲ್ಲಿ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ. ಈ ವಿಷಯವನ್ನು ಮುಂದಿನ ಜೂನ್ 26 ರಂದು ಪರಿಗಣಿಸಲಾಗುವುದು.

ಏನಿದು ಮಾಂಗಳಿಕ ಅಥವಾ ಕುಜ ದೋಷ?
ಮಂಗಳಿ ಅಥವಾ ಮಾಂಗಳಿಕ್ ಎಂದರೆ ಹಿಂದೂ ಜ್ಯೋತಿಷ್ಯದ ಪ್ರಕಾರ ಮಂಗಳನ ಪ್ರಭಾವದಿಂದ ಜನಿಸಿದ ವ್ಯಕ್ತಿ. ಅಂತಹ ವ್ಯಕ್ತಿಗಳಿಗೆ ಮಂಗಳದೋಷವಿರುತ್ತದೆ. ಇದನ್ನು ಕುಜ ದೋಷ ಎಂದೂ ಹೇಳಲಾಗುತ್ತದೆ. ಇದು ಮದುವೆಗೆ ಪ್ರತಿಕೂಲವಾಗಿದೆ ಎಂದು ಅರ್ಥೈಸಲಾಗುತ್ತದೆ. ಜಾತಕದಲ್ಲಿ ಕಂಡು ಬರುವ ಹಲವು ದೋಷಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗುತ್ತದೆ. 
ಜಾತಕದಲ್ಲಿ ಕುಜ ದೋಷ ಇದ್ದರೆ ಅಂತಹ ವ್ಯಕ್ತಿಯ ಮದುವೆಯ ನಂತರ ಅವರ ಜೀವನ ಸಂಗಾತಿ ಸಾಯುತ್ತಾರೆ ಎಂದು ನಂಬಲಾಗಿದೆ. ಆದಾಗ್ಯೂ, ಈ ದೋಷವನ್ನು ತೆಗೆದುಹಾಕಲು ಪರಿಹಾರ ಮಾಡಿದರೆ, ಮಾಂಗಳಿಕ್ ದೋಷ ಹೊಂದಿರುವ ಜನರು ಸಹ ಸಾಮಾನ್ಯ ಮತ್ತು ಉತ್ತಮ ಜೀವನವನ್ನು ನಡೆಸಬಹುದು.

ಶನಿ ಸಾಡೇಸಾತಿ ಅನುಭವಿಸ್ತಿದೀರಾ? ಶನಿವಾರ ಈ ವ್ರತಕತೆ ಕೇಳಿ, ದುಷ್ಪರಿಣಾಮ ತಗ್ಗುತ್ತೆ!

'ಲಗೇ ರಹೋ ಮುನ್ನಾಭಾಯಿ' ಚಿತ್ರದಲ್ಲಿ ಕೂಡಾ ಕುಜ ದೋಷಕ್ಕೆ ಸಂಬಂಧಿಸಿದ ಇಂಥದೊಂದು ಕತೆಯಿದ್ದು, ಹುಡುಗಿ ಮಾಂಗಳಿಕಳಾಗಿದ್ದು, ಆಕೆಯನ್ನು ವಿವಾಹವಾದವನು 1 ವರ್ಷದೊಳಗೆ ಸಾಯುತ್ತಾನೆ ಎಂದು ಜ್ಯೋತಿಷಿಗಳು ಹೇಳುವುದನ್ನು ಕಾಣಬಹುದು. ಈ ನಂಬಿಕೆ ಹಿಂದೂಗಳಲ್ಲಿ ಬಲವಾಗಿದೆ. 

ಮಂಗಳ ದೋಷ
ಜ್ಯೋತಿಷ್ಯ ಗ್ರಂಥಗಳ ಪ್ರಕಾರ, ಮಂಗಳವು ಜಾತಕದ ಮೊದಲ, ನಾಲ್ಕನೇ, ಏಳನೇ ಮತ್ತು ಎಂಟನೇ ಮನೆಯಲ್ಲಿದ್ದರೆ, ಅದು ಮಂಗಳ ದೋಷವಾಗಿದೆ. ಸರಳ ಕ್ರಮಗಳ ಮೂಲಕ ನೀವು ಕುಜ ದೋಷವನ್ನು ತೆಗೆದು ಹಾಕಬಹುದು. ಜಾತಕದಲ್ಲಿ ಮಂಗಳ ದೋಷವನ್ನು ಹೊಂದಿರುವ ವ್ಯಕ್ತಿಯು ತುಂಬಾ ಆಕ್ರಮಣಕಾರಿ ಮತ್ತು ಕೋಪದ ಸ್ವಭಾವವನ್ನು ಹೊಂದಿರುತ್ತಾನೆ. ಅವರು ತಮ್ಮ ಪಾಲುದಾರರಿಂದ ದೂರ ಹೋಗಬಹುದು. 

ಧನಾತ್ಮಕ ಪರಿಣಾಮಗಳು
ಕುಜ ದೋಷವು ಋಣಾತ್ಮಕ ಪರಿಣಾಮಗಳನ್ನು ಮಾತ್ರವಲ್ಲದೆ ಕೆಲವು ಧನಾತ್ಮಕ ಪರಿಣಾಮಗಳನ್ನು ಹೊಂದಿದೆ. ಈ ದೋಷ ಹೊಂದಿದ ಜನರ ದೇಹವು ತುಂಬಾ ಸುಂದರ ಮತ್ತು ಆಕರ್ಷಕವಾಗಿರುತ್ತದೆ. ಅಂತಹ ಜನರು ಹೆಚ್ಚು ಬಲಶಾಲಿಯಾಗಿರುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಸ್ಥಾನಗಳನ್ನು ತಲುಪುತ್ತಾರೆ ಮತ್ತು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ವಿದೇಶಗಳಲ್ಲಿಯೂ ಅದೃಷ್ಟವನ್ನು ಪಡೆಯುತ್ತಾರೆ.

ಕಳೆದ 50 ವರ್ಷಗಳಿಂದ ಎತ್ತಿದ ಕೈ ಇಳಿಸೇ ಇಲ್ಲ ಈ ಹಠಯೋಗಿ! ಇದು ಶಿವನಿಗೆ ಶಾಶ್ವತ ನಮಸ್ಕಾರವಂತೆ!

ಕುಜ ದೋಷಕ್ಕೆ ಪರಿಹಾರಗಳು 
ಕುಜ ದೋಷವನ್ನು ತೆಗೆದುಹಾಕಲು, ಪಕ್ಷಿಗಳಿಗೆ ಪ್ರತಿ ದಿನ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಮಂಗಳ ಶಾಂತನಾಗುತ್ತಾನೆ.
ಮಂಗಳ ಗ್ರಹದ ದುಷ್ಪರಿಣಾಮಗಳನ್ನು ತೊಡೆದುಹಾಕಲು, ಪ್ರತಿ ಮಂಗಳವಾರದಂದು ಉಪವಾಸವನ್ನು ಆಚರಿಸಿ ಮತ್ತು ಹನುಮಾನ್ ಚಾಲೀಸಾವನ್ನು 100 ಬಾರಿ ಪಠಿಸಿ.

Follow Us:
Download App:
  • android
  • ios