ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆಯಿಂದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಂಧನದವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಬೆಂಗಳೂರು (ಮೇ 04): ಜೆಡಿಎಸ್‌ನಿಂದ ಉಚ್ಛಾಟನೆಗೊಂಡ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದರೆನ್ನಲಾದ ಮಹಿಳೆಯರನ್ನು ಕಿಡ್ನಾಪ್ ಮಾಡಿ ಮಗನನ್ನು ರಕ್ಷಣೆ ಮಾಡಲು ಮುಂದಾಗಿದ್ದ ಮತ್ತೊಂದು ಲೈಂಗಿಕ ಕಿರುಕುಳದ ಆರೋಪಿ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ. ಹಾಸನದಲ್ಲಿ ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ಹಂಚಿಕೆಯಿಂದ ಮಾಜಿ ಸಚಿವ ಹೆಚ್.ಡಿ, ರೇವಣ್ಣ ಬಂಧನದವರೆಗಿನ ಎಲ್ಲ ಘಟನೆಗಳು ಇಲ್ಲಿವೆ ನೋಡಿ...
ಕರ್ನಾಟಕ ರಾಜ್ಯ ಕಂಡ ಏಕೈಕ ಪ್ರಧಾನಮಂತ್ರಿ ಹೆಚ್.ಡಿ. ರೇವಣ್ಣ ಅವರ ಕುಟುಂಬದಲ್ಲಿ ದೊಡ್ಡ ಕೋಲಾಹಲವೇ ಶುರುವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ 2800ಕ್ಕೂ ಅಧಿಕ ವಿಡಿಯೋಗಳು ಇರುವ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಹಲವು ಅತ್ಯಾಚಾರ ಪ್ರಕರಣಗಳು ವರದಿ ಆಗುತ್ತಿವೆ. ಇನ್ನು ವೈರಲ್ ಆದ ಎಲ್ಲ ಅಶ್ಲೀಲ ವಿಡಿಯೋಗಳಲ್ಲಿ ಎಲ್ಲವೂ ಸಹಮತಿ ಸೆಕ್ಸ್ ಎಂದು ತೋರಿಸಲಾಗುತ್ತಿದ್ದರಿಂದ ಬಂಧನ ಭೀತಿ ಎದುರಾಗಿರಲಿಲ್ಲ. ಆದರೆ, ಹೊಳೆ ನರಸೀಪುರದ ಮನೆ ಕೆಲಸ ಮಾಡುವ ಮಹಿಳೆ ಲೈಂಗಿಕ ದೌರ್ಜನ್ಯ ನೀಡಿದ ಕೇಸ್ ದಾಖಲಿಸಿದ್ದರು. ಆದರೆ, ಈ ಕೇಸಿನಲ್ಲಿಹೆಚ್.ಡಿ. ರೇವಣ್ಣ ಎ1 ಆರೋಪಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಎ2 ಆರೋಪಿ ಆಗಿದ್ದರು. ಆದರೆ, ಈ ಕೇಸ್ ದುರ್ಬಲವಾಗಿದ್ದರಿಂದ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರು.
Breaking : HD Revanna Arrest ದೇವೇಗೌಡರ ನಿವಾಸದಲ್ಲೇ ರೇವಣ್ಣ ಬಂಧಿಸಿದ SIT
ಇದರ ಬೆನ್ನಲ್ಲಿಯೇ ಅಶ್ಲೀಲ ವಿಡಿಯೋ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ಮಹಿಳಾ ಆಯೋಗದ ದೂರನ್ನು ಆಧರಿಸಿ ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿತ್ತು. ಹೊಳೆನರಸೀಪುರದಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ತನಿಖೆ ನಡೆಸಲು ಮುಂದಾದ ಎಸ್‌ಐಟಿ ಅಧಿಕಾರಿಗಳು ಆರೋಪಿಗಳಾದ ತಂದೆ ಮಗ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೂ ವಿಚಾರಣೆಗೆ ಹಾಜರಾಗದೇ ದೂರ ಉಳಿದುಕೊಂಡು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಜಾಮೀನು ಅರ್ಜಿಯನ್ನು ಶೀಘ್ರ ಇತ್ಯರ್ಥಪಡಿಸಲು ಅನುಕೂಲ ಆಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು.
ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಅವರಿಂದ ಸಲ್ಲಿಕೆ ಮಾಡಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಇದು ಸುಲಭವಾಗಿ ಜಾಮೀನು ಪಡೆಯುವ ಕೇಸ್ ಆಗಿದ್ದರೂ, ಯಾಕೆ ಕೋರ್ಟ್‌ವರೆಗೂ ಬಂದಿದ್ದೀರಿ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಇದನ್ನು ಆಕ್ಷೇಪಣೆ ಮಾಡಿದ ಎಸ್‌ಐಟಿ ಪರ ವಾದ ಮಂಡಿಸಲು ನೇಮಕವಾದ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್ ಅವರು ಅವರ ಮೇಲೆ ಇನ್ನೊಂದು ಗಂಭೀರ ಪ್ರಕರಣವನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡದಂತೆ ಮನವಿ ಮಾಡಿದರು. ಆಗ ನ್ಯಾಯಾಲಯದ ಎಸ್ಐಟಿಗೆ ಆಕ್ಷೇಪಣೆ ಸಲ್ಲಿಸಲು ನೋಟೀಸ್ ಜಾರಿಗೊಳಿಸಿತ್ತು. ಜೊತೆಗೆ, ವಿಚಾರಣೆ ಮುಮದೂಡಿಕೆ ಮಾಡಿತ್ತು.
ಪುನಃ ಶನಿವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಸುಮಾರು 2 ಗಂಟೆಗಳ ಕಾಲ ಗಂಭೀರವಾಗಿ ವಾದ ಮತ್ತು ಪ್ರತಿವಾದವನ್ನು ಆಲಿಸಿತು. ಈ ವೇಳೆ ಆರೋಪಿ ರೇವಣ್ಣ ಪರ ವಕೀಲರು ತಮ್ಮ ಕಕ್ಷಿದಾರರ ಮೇಲೆ ರಾತ್ರೋ ರಾತ್ರಿ ಗಂಭೀರ ಕೇಸ್ ದಾಖಲಿಸಿದ್ದಾರೆ. ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದ ಕೇಸ್‌ಗಾಗಿ ಗಲ್ಲು ಶಿಕ್ಷೆಯನ್ನು ನೀಡಬಹುದಾದ ಸೆಕ್ಷನ್ ಅಡಿಯಲ್ಲಿ ಗಂಭೀರ ಕೇಸ್ ದಾಖಲಿಸಿದ್ದಾರೆ. ಆದರೆ, ಈ ಪ್ರಕರಣದ ಗಂಭೀರವಾಗಿಲ್ಲದ ಕಾರಣ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಐಟಿ ಪರ ವಕೀಲರು ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ವಿಚಾರಣೆಗೆ ಹಾಜರಾಗದಂತೆ, ಪೊಲೀಸರಿಗೆ ಸಿಗದಂತೆ ಬಚ್ಚಿಡುವ ಉದ್ದೇಶಕ್ಕೆ ಕಿಡ್ನಾಪ್ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತ ಮಹಿಳೆ ಪುತ್ರನಿಂದ ಕೆ.ಆರ್. ನಗರದಲ್ಲಿ ಪ್ರಕರಣ ದಾಖಲಾಗಿದ್ದು, ಇದರ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈಗ ಇವರಿಗೆ ಜಾಮೀನು ನೀಡಿದರೆ ಮಹಿಳೆಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದ್ದು, ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್; ಬಂಧನ
ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಹೆಚ್.ಡಿ. ರೇವಣ್ಣ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿತು. ಜೊತೆಗೆ, ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಡಗಿ ಕುಳಿತುಕೊಂಡಿದ್ದ ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಗೆ ತೆರಳಿದ್ದ ಎಸ್‌ಐಟಿ ತಂಡವು ರೇವಣ್ಣನನ್ನು ಬಂಧಿಸಿದೆ.