* ತನಿಖೆ ವೇಳೆ ಹಣಕಾಸು ಬಗ್ಗೆ ಸ್ಫೋಟಕ ಮಾಹಿತಿ
* ಬಾಂಗ್ಲಾದೇಶದಿಂದ ಯುವತಿಯರನ್ನ ಕರೆಯಿಸಿಕೊಳ್ತಿದ್ದ ಆರೋಪಿಗಳು
* ಮೂರು ರಾಜ್ಯಗಳಲ್ಲಿ ದಂಧೆ ವಿಸ್ತರಿಸಿದ್ದ ಆರೋಪಿಗಳು
ಬೆಂಗಳೂರು(ಜೂ.03): ನಗರದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಬಗೆದಷ್ಟು ಬೆಳಕಿಗೆ ಬರ್ತಿದೆ ಬಾಂಗ್ಲಾ ಗ್ಯಾಂಗ್ ಕರಾಳ ದಂಧೆ. ಪೊಲೀಸರ ತನಿಖೆಯಿಂದ ಗ್ಯಾಂಗ್ನ ಕಂಪ್ಲೀಟ್ ಕಹಾನಿ ಬೆಳಕಿಗೆ ಬಂದಿದೆ. ಅತ್ಯಾಚಾರ ಪ್ರಕರಣದ ಅರೋಪಿಗಳು ಮೂರು ರಾಜ್ಯಗಳಲ್ಲಿ ಮಾಂಸ ದಂಧೆಯನ್ನ ವಿಸ್ತರಿಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದುನ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರು, ಮುತ್ತಿನನಗರಿ ಹೈದರಾಬಾದ್ ಹಾಗೂ ಕೇರಳದಲ್ಲಿ ದಂಧೆಯನ್ನ ವಿಸ್ತರಿಸಲಾಗಿತ್ತು.
ಸಂತ್ರಸ್ತೆಗೆ ಟಾರ್ಚರ್
undefined
ಹಣ ಪಡೆದು ವಾಪಸ್ ಕೊಡದೆ ಸತಾಯಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ಸತತ ಐದು ದಿನಗಳ ಕಾಲ ಟಾರ್ಚರ್ ನೀಡಲಾಗಿತ್ತು. ಹಣ ನೀಡುವಂತೆ ಆರೋಪಿ ಶೊಬಾಜ್ ಹೀನ ಕೃತ್ಯನ ಎಸಗಿದ್ದ, ಒಂದೇ ಮನೆಯಲ್ಲಿ ಯುವತಿಯನ್ನ ಐದು ದಿನ ಕೂಡಿಟ್ಟಿದ್ದ ಖದೀಮರು, ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿ ಕಿರುಕುಳ ನೀಡಿದ್ದರು. ಐದು ದಿನ ಯುವತಿಗೆ ನೀಡಿದ ಕಿರುಕುಳ ಬಗ್ಗೆ ಆರೋಪಿಗಳು ವಿಡಿಯೋ ಮಾಡಿದ್ದರು ಎಂದು ತಿಳಿದು ಬಂದಿದೆ.
ಬಳಿಕ ಇನ್ನೆರಡು ದಿನ ಯುವತಿಯನ್ನ ಕಾಂಪ್ರಮೈಸ್ ಮಾಡಲು ಯತ್ನಿಸಿದ್ದರು. ಕೇರಳದಿಂದ ವಾಪಸ್ ಬಂದು ಬಿಡು, ನಾವೆಲ್ಲಾ ಒಂದೇ ಗ್ಯಾಂಗ್ನಲ್ಲ ಇರೋಣ ಎಂದು ಕಾಂಪ್ರಮೈಸ್ಗೆ ಯತ್ನಿಸಿದ್ದರು ಎಂದು ಪೊಲೀಸರ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾ ಯುವತಿ ರೇಪ್ ಕೇಸ್ಗೆ ಟ್ವಿಸ್ಟ್, ಪ್ರಕರಣದಲ್ಲಿ ಪೊಲೀಸರೇ ಶಾಮೀಲು..?
ಬಾಂಗ್ಲಾದಿಂದ ಯುವತಿಯರನ್ನ ಕರೆಯಿಸಿಕೊಳ್ತಿದ್ದ ಆರೋಪಿಗಳು
ಮಾಂಸ ದಂಧೆಯ ಆರೋಪಿಗಳು ಬಾಂಗ್ಲಾದೇಶದಿಂದ ಯುವತಿಯರನ್ನ ಕರೆಯಿಸಿಕೊಳ್ತಿದ್ದರು. ಬಾಂಗ್ಲಾದಿಂದ ಬರಲು ಪ್ರಯಾಣ ವೆಚ್ಚ ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದರು. ಗ್ಯಾಂಗ್ನ ಕಿಂಗ್ ಪಿನ್ ಶೊಬಾಜ್ ಮತ್ತು ಬಾಬು ಶೇಕ್ ಯುವತಿಯರನ್ನ ಕರೆತರುವುದು, ಹಣಕಾಸು ವ್ಯವಸ್ಥೆ ಮಾಡುತ್ತಿದ್ದರು
ತನಿಖೆ ವೇಳೆ ಹಣಕಾಸು ಬಗ್ಗೆ ಸ್ಫೋಟಕ ಮಾಹಿತಿಯನ್ನ ಕೇಳಿ ಪೊಲೀಸರೇ ಸುಸ್ತು ಆಗಿದ್ದಾರೆ. ಈ ಗ್ಯಾಂಗ್ನ ಒಂದು ದಿನದ ಆದಾಯವೇ ಲಕ್ಷ ಲಕ್ಷವಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳು ಬೆಂಗಳೂರು ನಗರದ ಮೂರ್ನಾಲ್ಕು ಕಡೆ ಬಾಡಿಗೆ ಮನೆ ಮಾಡಿಕೊಂಡಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಮ್ಮ ದಂಧೆ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದ್ಯ ಬಂಧಿತ ಎಲ್ಲ ಆರೋಪಿಗಳ ಮೊಬೈಲ್ ಫೋನ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಎಂಟು ಜನ ಆರೋಪಿಗಳ ಫೋನ್ಗಳನ್ನ ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಮೊಬೈಲ್ ಫೋನ್ಗಳ ಪರಿಶೀಲನೆ ವೇಳೆ ಸಾವಿರಾರು ವಿಡಿಯೋಗಳು ಪತ್ತೆಯಾಗಿವೆ. ಎಲ್ಲ ಆರೋಪಿಗಳ ಬಳಿ ಸುಮಾರ 1200ಕ್ಕೂ ಅಧಿಕ ವಿಡಿಯೋಗಳು ಪತ್ತೆಯಾಗಿವೆ. ಎಲ್ಲ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಕೂಲಂಕುಷವಾಗಿ ಪರಿಶೀಲನೆ ನಡೆಯುತ್ತಿದೆ. ಖದೀಮರು ಈ ಮೊದಲು ಯಾರಿಗಾದರೂ ಈ ರೀತಿ ಕಿರುಕುಳ ನೀಡಿದ್ದಾರಾ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗ್ಳೂರು ಗ್ಯಾಂಗ್ ರೇಪ್: ಸಂತ್ರಸ್ತ ಯುವತಿ ಕೇರಳದಲ್ಲಿ ಪತ್ತೆ..!
ಅಸಲಿ ಗಲಾಟೆಗೆ ಕಾರಣರಾಗಿದ್ದೇ ಯುವತಿಯರು
ಅಸಲಿ ಗಲಾಟೆಗೆ ಕಾರಣರಾಗಿದ್ದೇ ಬಾಂಗ್ಲಾದೇಶದಿಂದ ಬಂದಿದ್ದ ನಾಲ್ವರು ಯುವತಿಯರು ಎಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ನಾಲ್ವರಲ್ಲಿ ಇಬ್ಬರನ್ನ ಕೇರಳಕ್ಕೆ ತನ್ನ ಮಸಾಜ್ ಪಾರ್ಲರ್ಗೆ ಕರೆದೊಯ್ದಿದ್ದಳು ಸಂತ್ರಸ್ಥ ಯುವತಿ. ನಂತರ ಒಬ್ಬಾಕೆ ಹೈದರಾಬಾದ್ಗೆ ಶಿಫ್ಟ್ ಮಾಡಿ, ಉಳಿದ ಒಬ್ಬ ಯುವತಿ ಬಾಂಗ್ಲಾದೇಶಕ್ಕೆ ವಾಪಸ್ ಹೋಗಿದ್ದಳು ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದಿಂದ ಯುವತಿಯನ್ನ ಕರೆಸಲು ಆರೋಪಿಗಳಾದ ಶೊಬಾಜ್ ಹಾಗೂ ಮೊಹಮ್ಮದ್ ಬಾಬು ಶೇಕ್ ಪ್ರಯಾಣ ಖರ್ಚು ವೆಚ್ಚ, ಹಾಗೂ ಅಡ್ವಾನ್ಸ್ ಸೇರಿ ಲಕ್ಷ ಲಕ್ಷ ಖರ್ಚು ಮಾಡಿದ್ದರು. ಹೀಗಾಗಿ ಸಂತ್ರಸ್ಥ ಯುವತಿ ಮೇಲೆ ಶೊಬಾಜ್ ಹಾಗೂ ಮೊಹಮ್ಮದ್ ಬಾಬು ಶೇಕ್ ಕೋಪಗೊಂಡಿದ್ದರು. ಹಣದ ವ್ಯವಹಾರ ಹಾಗೂ ದಂಧೆ ಕೈತಪ್ಪಿದ ಹಿನ್ನೆಲೆ ಯುವತಿ ಮೇಲೆ ಸಾಮೂಹಿತ ಅತ್ಯಚಾರವೆಸಗಿದ್ದರು ಎಂದು ತಿಳಿದು ಬಂದಿದೆ.