ಕುತ್ತಿಗೆ ಕೊಯ್ದು ವೃದ್ದರಿಬ್ಬರನ್ನು ಕೊಲೆಗೈದ ಘಟನೆ ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತರಿಬ್ಬರು 75 ವರ್ಷದ ಪ್ರಭಾಕರ್ ಶೆಟ್ರು ಮತ್ತು 65 ವರ್ಷದ ವಿಜಯಲಕ್ಷ್ಮಿ ಎಂದು ತಿಳಿದುಬಂದಿದೆ.
ಚಿತ್ರದುರ್ಗ (ಡಿ.1): ಕುತ್ತಿಗೆ ಕೊಯ್ದು ವೃದ್ದರಿಬ್ಬರನ್ನು ಕೊಲೆಗೈದ ಘಟನೆ ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಇಂದು ಸಂಜೆ ನಡೆದಿದೆ. ಮೃತರಿಬ್ಬರು 75 ವರ್ಷದ ಪ್ರಭಾಕರ್ ಶೆಟ್ರು ಮತ್ತು 65 ವರ್ಷದ ವಿಜಯಲಕ್ಷ್ಮಿ ಎಂದು ತಿಳಿದುಬಂದಿದೆ. ಹೊಸದುರ್ಗ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಉಪ್ಪು ಮತ್ತು ಅಡುಗೆ ಅನಿಲ ಏಜೆನ್ಸಿ ಮಾಡಿಕೊಂಡಿದ್ದರು. ಬಂಗಾರ ಮತ್ತು ಹಣದ ಆಸೆಗೆ ಕೊಲೆಗೈದ್ದಿದ್ದಾರೆ ಎನ್ನಲಾಗಿದೆ. ಇವರಿಗೆ ಯಾರು ಕೂಡ ವೈರಿಗಳು ಇಲ್ಲ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಉನ್ನತಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು. ಈ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಕೆಆರ್‌ಇಡಿಎಲ್ ಅಧಿಕಾರಿ ಮೈಸೂರಿನಲ್ಲಿ ನಿಗೂಢವಾಗಿ ಸಾವು, ಕೊಲೆ ಶಂಕೆ
ಬೆಂಗಳೂರಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಿ.ಕೆ.ದಿನೇಶ್ ಕುಮಾರ್ (50) ಅವರು ಇಲ್ಲಿನ ಬೋಗಾದಿಯಲ್ಲಿರುವ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
undefined
ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಅವರು ಪತ್ನಿ, ಕಿರಿಯ ಪುತ್ರನೊಂದಿಗೆ ವಾಸವಿದ್ದರು. ಹಿರಿಯ ಪುತ್ರ ಮಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ದಿನೇಶ್ ಕುಮಾರ್ ಅವರು ಮೃತಪಟ್ಟು ಸುಮಾರು 40 ಗಂಟೆಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ನ.27ರಂದು ರಾತ್ರಿ ಜೊತೆಯಲ್ಲೇ ಊಟ ಮಾಡಿ ಮಲಗಿದ್ದೆವು. 28ರಂದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ದಿನೇಶ್‌ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದನ್ನು ನೋಡಿ ನಾವೂ ಮೂರ್ಛೆ ಹೋದೆವು ಎಂದು ಪತ್ನಿ ಮತ್ತು ಪುತ್ರ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ವಿಷಯ ತಿಳಿದ ಮನೆಯ ಕೆಲಸಗಾರರು ಮೂವರನ್ನೂ ಆಸ್ಪತೆಗೆ ದಾಖಲಿಸಿದರಾದರೂ, ದಿನೇಶ್ ಅವರು ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಸ್ವಗ್ರಾಮ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಿರಿಯ ಪುತ್ರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆದರೆ, ಆಸ್ಪತ್ರೆಯಲ್ಲಿರುವ ಪತ್ನಿ, ಕಿರಿಯ ಮಗ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ.
ದಿನೇಶ್‌ಕುಮಾರ್ ಅವರ ಮೃತದೇಹ ಊದಿಕೊಂಡಿದ್ದು, ಬಾಯಲ್ಲಿ ರಕ್ತಸ್ರಾವವಾಗಿದೆ. ದೇಹದ ಕೆಲಭಾಗಗಳಲ್ಲಿ ಗಾಯವಾಗಿದೆ. ಹಾಗಾಗಿ, ಈ ಸಾವಿನಲ್ಲಿ ಅನುಮಾನವಿದೆ. ಸಂಸಾರದಲ್ಲಿ ಆಗಾಗ ಜಗಳವಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಮೃತ ವ್ಯಕ್ತಿಯ ಸೋದರ ಮಾವ ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.
ಪ್ರಿಯಕರನ ಜತೆಗೂಡಿ ಪತ್ನಿ ಕೊಲೆಗೈದ ಪತ್ನಿ
ರಾಮನಗರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ತನ್ನ ಪ್ರಿಯಕರನ ಜೊತೆಗೂಡಿ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣವೊಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರದ ದೇಸಿಗೌಡ(48) ಕೊಲೆಯಾದ ವ್ಯಕ್ತಿ. ಈತನನ್ನು ಪತ್ನಿ ಜಯಲಕ್ಷ್ಮಿ ಮತ್ತು ಆಕೆ ಪ್ರಿಯಕರ ರಾಜೇಶ್ ಸೇರಿ ನ.26ರಂದು ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿನ ಚರಂಡಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು.
11ನೇ ಮಹಡಿಯಲ್ಲಿ ಕೆಟ್ಟ ಲಿಫ್ಟ್ : 25 ನಿಮಿಷ ಒದ್ದಾಡಿದ ಮೂವರು ಮಕ್ಕಳು
ಬೆಂಗಳೂರಿನ ಚಿಕ್ಕಬಾಣವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾಮ್‌ರ್ ಹೌಸ್‌ನಲ್ಲಿ ದೇಸಿಗೌಡ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದನು. ಕಳೆದ ನ.27ರಂದು ದೇಸಿಗೌಡ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಜಯಲಕ್ಷ್ಮಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪ್ರೀತಿ ಉಳಿಸಿಕೊಳ್ಳಲು ಮರ್ಡರ್.. ಬಾಯ್‌ಫ್ರೆಂಡ್ ಜೊತೆ ಸೇರಿ ಯುವತಿಯ ಕೊಲೆ ಮಾಡಿದ್ಲು
ತನಿಖೆಗೆ ಮುಂದಾದ ಪೊಲೀಸರು ಜಯಲಕ್ಷ್ಮಿ ಮತ್ತು ಆತನ ಸ್ನೇಹಿತ ರಾಜೇಶ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ. ನ.26 ರಂದು ಫಾಮ್‌ರ್ ಹೌಸ್‌ನಲ್ಲಿಯೇ ದೇಸಿಗೌಡನನ್ನು ಕೊಲೆ ಮಾಡಿ ಮೃತದೇಹವನ್ನು ರಾತ್ರಿಯೇ ತಂದು ಚರಂಡಿಯೊಳಗೆ ಬಿಸಾಡಿ ಪರಾರಿಯಾಗಿದ್ದರು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಪರಿಶೀಲಿಸಿದಾಗ ಚರಂಡಿಯಲ್ಲಿ ದೇಸಿಗೌಡನ ಮೃತದೇಹ ಪತ್ತೆಯಾಗಿದೆ. ಬೆಂಗಳೂರು - ಮೈಸೂರು ದಶಪಥ ರಸ್ತೆಯಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸುರಂಗದ ಚರಂಡಿಯಲ್ಲಿ ಸುಮಾರು 20 ಅಡಿಯಷ್ಟುಒಳಭಾಗದಲ್ಲಿ ಮೃತದೇಹವನ್ನು ಬಚ್ಚಿಡಲಾಗಿತ್ತು. ಆರೋಪಿಗಳಿಂದ ಶವ ಇರುವ ಜಾಗವನ್ನು ಪತ್ತೆ ಮಾಡಿ ಮೃತದೇಹವನ್ನು ಹೊರ ತೆಗೆಯಲಾಯಿತು. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.