ಡಬಲ್‌ ಮರ್ಡರ್ ಕೇಸ್‌, 90 ವರ್ಷದ ಮಾಜಿ ಸೈನಿಕನಿಗೆ 7 ತಿಂಗಳ ಬಳಿಕ ಜಾಮೀನು!

By Santosh NaikFirst Published Aug 12, 2022, 11:42 AM IST
Highlights

ನನಗೆ ವಯಸ್ಸಾಗಿದೆ. ಅನಾರೋಗ್ಯದಲ್ಲಿರುವ ಅವರಿಬ್ಬರನ್ನು ನೋಡಿಕೊಳ್ಳಲು ನನಗೆ ಸಾಧ್ಯವಿಲ್ಲ. ನಾನೇನಾದರೂ ಸಾವು ಕಂಡರೆ, ಯಾರೊಬ್ಬರು ಕೂಡ ಇವರನ್ನು ನೋಡಿಕೊಳ್ಳುವುದಿಲ್ಲ ಎಂದು ಗಂಧೋಕ್ ಪೊಲೀಸರಿಗೆ ತಿಳಿಸಿದ್ದರು. ಈ ಕಾರಣದಿಂದಾಗಿ ಫೆಬ್ರವರಿ 6 ರಂದು ಅಂಧೇರಿ ಪೂರ್ವದ ಶೇರ್-ಎ-ಪಂಜಾಬ್ ಕಾಲೋನಿಯಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ಪತ್ನಿ ಹಾಗೂ ಮಗಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದರು.

ಮುಂಬೈ (ಆ.12): ಅಂದಾಜು 7 ತಿಂಗಳ ಬಳಿಕ ನಿವೃತ್ತ ಸೇನಾ ಸಿಬ್ಬಂದಿ 90 ವರ್ಷದ ಪುರುಷೋತ್ತಮ್‌ ಸಿಂಗ್‌ ಗಂಧೋಕ್‌ಗೆ ಡಬಲ್‌ ಮರ್ಡರ್‌ ಕೇಸ್‌ನಲ್ಲಿ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಮಾನಸಿಕ ಅಸ್ವಸ್ಥಳಾಗಿದ್ದ ಮಗಳು ಹಾಗೂ ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಪುರುಷೋತ್ತಮ್‌ ಸಿಂಗ್ ಕೊಲೆ ಮಾಡಿದ್ದರು.  ವೈದ್ಯಕೀಯ ಕಾರಣ ನೀಡಿ ನ್ಯಾಯಾಲಯ ಜಾಮೀನು ನೀಡಿದ್ದು, ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಮತ್ತು ಮಗಳನ್ನು ನಾನು ನೋವಿನಿಂದ ಬಿಡುಗಡೆ ಮಾಡಿದ್ದೇನೆ ಎಂದು ಗಂದೋಕ್‌ ನ್ಯಾಯಾಲಯಕ್ಕೆ ತಿಳಿಸಿದರು. 1971ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಹೋರಾಟ ಮಾಡಿದ್ದ ಗಂಧೋಕ್‌ ಅವರ ಕಾಲಿಗೆ ಗುಂಡು ತಗುಲಿತ್ತು. ಇದರಿಂದಾಗಿ ಅವರು 1976ರಲ್ಲಿ ಸೈನ್ಯವನ್ನು ತೊರೆದಿದ್ದರು.  ಅವರು ಕಳೆದ 20 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ತಮ್ಮ ಪತ್ನಿ 76 ವರ್ಷದ ಜಸ್ಬೀರ್ ಕೌರ್ ಮತ್ತು ಮಾನಸಿಕ ಅಸ್ವಸ್ಥರಾಗಿದ್ದ ಅವರ ಕಿರಿಯ ಮಗಳು 51 ವರ್ಷ ಕಮಲ್ಜೀತ್ ಕೌರ್ ಅವರನ್ನು ನೋಡಿಕೊಳ್ಳುತ್ತಿದ್ದರು. ಆದರೆ, ತಮಗೂ ವಯಸ್ಸಾಗಿದ್ದು ಮೊದಲಿನಂತೆ ಅವರನ್ನು ನೋಡಿಕೊಳ್ಳಲು ನನ್ನ ದೇಹವು ಬೆಂಬಲ ನೀಡುತ್ತಿಲ್ಲ ಎನ್ನುವ ಕಾರಣ ನೀಡಿ ಅವರಿಬ್ಬರನ್ನೂ ಕೊಲೆ ಮಾಡಿದ್ದರು.

ನನಗೂ ವಯಸ್ಸಾಗಿದೆ. 90 ವರ್ಷದ ನನ್ನ ಸಾವಿನ ನಂತರ ಯಾರೂ ತನ್ನ ಹೆಂಡತಿ ಮತ್ತು ಮಗಳನ್ನು ನೋಡಿಕೊಳ್ಳುವುದಿಲ್ಲ ಎಂದು ಗಂಧೋಕ್ ಪೊಲೀಸರಿಗೆ ತಿಳಿಸಿದ್ದರು. ಅದೊಂದೆ ಕಾರಣಕ್ಕಾಗಿ ಫೆಬ್ರವರಿ 6 ರಂದು ಅಂಧೇರಿ ಪೂರ್ವದ ಶೇರ್-ಎ-ಪಂಜಾಬ್ ಕಾಲೋನಿಯಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ನಾನೇ ಅವರಿಬ್ಬರನ್ನು ಹತ್ಯೆ ಮಾಡಿದ್ದೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದರು. ಕಳೆದ ಏಳು ತಿಂಗಳಿನಿಂದ ಗಂಧೋಕ್ ಅವರ ಹಿರಿಯ ಮಗಳು ಗುರುವಿಂದಕೌರ್ ರಾಜ್‌ಬನ್ಸ್, ತಂದೆಗೆ ಜಾಮೀನು ಪಡೆಯಲು ಹೆಣಗಾಡುತ್ತಿದ್ದರು. ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು. ದೇಶ ಬಿಟ್ಟು ಹೋಗದಂತೆ ದಿಂಡೋಶಿ ಸೆಷನ್ಸ್ ನ್ಯಾಯಾಲಯ ಹೇಳಿದೆ.

ಆಸ್ತಿಗಾಗಿ ಪ್ರೇಮಿ ಜೊತೆ ಸೇರಿ ಸಾಕಿದವರ ಕತ್ತು ಸೀಳಿದ ದತ್ತು ಪುತ್ರಿ, ಏಕಕಾಲದಲ್ಲಿ ಇಬ್ಬರನ್ನು ಪ್ರೀತಿಸ್ತಿದ್ಲು ಹುಡುಗಿ!

ಪೊಲೀಸರಿಗೆ ಕರೆ ಮಾಡಿ ತಿಳಿಸುವಂತೆ ಹೇಳಿದ್ದ ಗಂಧೋಕ್‌: ಫೆಬ್ರವರಿ 6 ರಂದು ರಾತ್ರಿಯ ಊಟದ ಬಳಿಕ, ಗಂಧೋಕ್ ತನ್ನ ಹೆಂಡತಿ ಮತ್ತು ಮಗಳಿಗೆ ಅವರ ಔಷಧಿಗಳನ್ನು ನೀಡಿದರು. ಪತ್ನಿ ಹಾಗೂ ಮಗಳು ಇಬ್ಬರೂ ಮಲಗಿದ್ದ ವೇಳೆ ಅವರಿಬ್ಬರಲ್ಲೂ ಕ್ಷಮೆ ಯಾಚನೆ ಮಾಡಿದ್ದರು. ಮೊದಲು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದ ಗಂಧೋಕ್‌ ಬಳಿಕ ಮಗಳ ಕತ್ತನ್ನೂ ಚೂರಿಯಿಂದ ಸೀಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಅವರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಮರುದಿನ ಬೆಳಗ್ಗೆ ಹಿರಿಯ ಮಗಳು ಗುರುವಿಂದಕೌರ್ ರಾಜ್‌ಬನ್ಸ್‌ಗೆ ಈ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಗುರುವಿಂದಕೌರ್ ರಾಜ್‌ಬನ್ಸ್ ತನ್ನ ಮಗನೊಂದಿಗೆ ಮನಗೆ ಬಂದು ಎಲ್ಲವನ್ನೂ ನೋಡಿದರು. ಇದರ ಬೆನ್ನಲ್ಲಿಯೇ ಗಂಧೋಕ್‌ ಪೊಲೀಸರಿಗೆ ಕರೆ ಮಾಡಿ ತಿಳಿಸುವಂತೆ ಮಗಳಿಗೆ ತಿಳಿಸಿದ್ದರು. ಪೊಲೀಸರು ಮನೆಗೆ ಬಂದ ತಕ್ಷಣ ಬಾಗಿಲು ತೆರೆದು, ತಾವು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದರು. ಮೇಘವಾಡಿ ಪೊಲೀಸರು ಗಂಧೋಕ್‌ ಅವರಿಂದ ಚಾಕುವನ್ನು ವಶಪಡಿಸಿಕೊಂಡು ಬಂಧಿಸಿದ್ದರು.

ಮನೆಯಲ್ಲೇ ಗಂಡನ ಹೂತು ಮೈದುನನ ಜೊತೆ ಸಂಸಾರ: ಈಗ ಆತನಿಗೂ ಕೊಳ್ಳಿ!

ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡೆ, ಸಾಧ್ಯವಾಗಲಿಲ್ಲ: ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ ಆದರೆ, ನನಗೆ ಅದು ಸಾಧ್ಯವಾಗಲಿಲ್ಲ ಎಂದು ಗಂಧೋಕ್‌ ಪೊಲೀಸರಿಗೆ ತಿಳಿಸಿದ್ದರು. ಈ ಕೆಲಸ ಮಾಡಿದ್ದೇಕೆ ಎಂದು ಸ್ವತಃ ಮಗಳು ಗಂಧೋಕ್‌ರನ್ನು ಕೇಳಿದಾಗ, "ಅವರ ಆ ರೀತಿಯ ನೋವಿನಲ್ಲಿರೋದನ್ನು ನೋಡೋಕೆ ನನಗೆ ಸಾಧ್ಯವಾಗುತ್ತಿರಲಿಲ್ಲ. ಅದಲ್ಲದೆ, ಅವರನ್ನು ನೋಡಿಕೊಳ್ಳುವ ದೈಹಿಕ ಶಕ್ತಿ ನನಗಿಲ್ಲ' ಎಂದು ಹೇಳಿದ್ದರು. ಕಿರಿಯ ಪುತ್ರಿ ಹುಟ್ಟಿದಾಗಲಿಂದಲೂ ಮಾನಸಿಕ ಅಸ್ವಸ್ಥಳಾಗಿದ್ದರಿಂದ ತಂದೆ-ತಾಯಿಯ ಆರೈಕೆಯಲ್ಲಿಯೇ ಇದ್ದಳು. ಗಂಧೋಕ್‌ ಅವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಪುತ್ರ ಈಗಾಗಲೇ ತಂದೆಯಿಂದ ಬೇರ್ಪಟ್ಟು ಯಾವುದೋ ಕಾಲವಾಗಿದೆ. ಇನ್ನೊಬ್ಬ ಮಗಳು ಬೇರೆ ರಾಜ್ಯದಲ್ಲಿ ವಾಸವಿದ್ದಾಳೆ. ಭಾರತೀಯ ಸೇನೆಯಲ್ಲಿ ಮೆಕಾನಿಕಲ್‌ ಟ್ರಾನ್ಸ್‌ಪೋರ್ಟ್‌ ಸಪ್ಲೈ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಫೆಬ್ರವರಿಯಲ್ಲಿ ಮತ್ತೊಬ್ಬ ಮಗಳು ಇಡೀ ಕುಟುಂಬವನ್ನು ಮುಂಬೈನ ವಿರಾರ್‌ನಿಂದ ಅಂಧೋರಿಯ ತಮ್ಮ ಅಪಾರ್ಟ್‌ಮೆಂಟ್‌ ಬಳಿ ಶಿಫ್ಟ್‌ ಮಾಡಿಸಿದ್ದರು.
 

click me!